Monthly Archives: May, 2025
ಕವನ : ನೆನಪಾದ ಬಸವಣ್ಣ
ನೆನಪಾದ ಬಸವಣ್ಣ
ನೆನಪಾದ ಬಸವಣ್ಣ
ಅಡಿಗಡಿಗೆ
ಅವರಿವರ ಆಚಾರ
ವಿಚಾರ
ಅಜ್ಞಾನದ ಪರಮಾವಧಿ
ಕಂಡು
ಎತ್ತ ಸಾಗಿದೆ ಜನರ
ಜೀವನ ಸಿದ್ಧಾಂತ
ವೈಚಾರಿಕ ನಿಲುವು
ಎಂಬ ಕಳವಳವ
ಹೊತ್ತು ನೆನಪಾದ
ಬಸವಣ್ಣ ಅಡಿಗಡಿಗೆಕಂಡ ಕಂಡಲ್ಲಿ ಮುಳುಗುವವರ
ದೇವರ ಹೆಸರಲ್ಲಿ
ಉಪವಾಸ ಮಾಡುವವರ
ಅಭಿಷೇಕ ಮಾಡಿಸಿ
ಗುಡಿಯ ಸುತ್ತುವವರ
ಅಂಧಕಾರದ ಮನವ ಕಂಡು
ನೆನಪಾದ ಬಸವಣ್ಣ
ಅಡಿಗಡಿಗೆತನ್ನೊಳಗಿನ ಪ್ರಜ್ವಲಿಸುವ
ಜ್ಯೋತಿಯ ಕಾಣದೆ
ತನ್ನ ಕೆಲಸವನ್ನು...