Monthly Archives: July, 2025
ಲೇಖನ
ನಟನೆಯೊಂದಿಗೆ ಸಮಾಜ ಸೇವೆ ಎ.ವಿ.ರುದ್ರಪ್ಪಾಜಿರಾವ್
ಹಾಸನದ ರಂಗಭೂಮಿಯಲ್ಲಿ ಎ.ವಿ.ರುದ್ರಪ್ಪಾಜಿರಾವ್ ಅವರ ಕಲಾಸೇವೆ ಮರೆಯುವಂತಿಲ್ಲ. ಹಾಸನ ತಾ. ಕಟ್ಟಾಯ ಹೋಬಳಿ ಆಂಜನೇಯಪುರ ಗ್ರಾಮದ ಎ.ಎಲ್.ವೀರೋಜಿರಾವ್ ಪುಟ್ಟತಾಯಮ್ಮ ದಂಪತಿಗಳ ಸುಪುತ್ರರು. ದಿ. ೧೫-೫-೧೯೫೪ರಲ್ಲಿ ಜನಿಸಿದರು. ೧೯೭೪ರಲ್ಲಿ ಬಿಕಾಂ ಮಾಡಿ ೧೯೭೫ರಲ್ಲಿ ಆಲೂರು ಬಿಡಿಓ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸಕ್ಕೆ ಸೇರಿ ಶಿರಸ್ತೆದಾರ್, ತಹಸೀಲ್ದಾರ್ ಆಗಿ ಬಡ್ತಿ ಪಡೆದು ಈಗ ನಿವೃತ್ರರು. ೩೯...
ಸುದ್ದಿಗಳು
ಪಂ.ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನ ಶೀಘ್ರದಲ್ಲಿ ಅಸ್ತಿತ್ವಕ್ಕೆ. – ದಿ. 13ರಂದು ಪದಾಧಿಕಾರಿಗಳ ಆಯ್ಕೆ ; ಸರ್ವ ಕಲಾವಿದರ ಸಭೆ
ಬಾಗಲಕೋಟೆ - ಕನ್ನಡ ನಾಡಿನ ಶ್ರೇಷ್ಠ ಸಂಗೀತಗಾರರು. ಕವಿ ಗವಾಯಿಗಳು. ಅಂಧ,ಅನಾಥ ಮಕ್ಕಳ ಆಶ್ರಯದಾತರು, ವರಪುರುಷರು, ಶಿವಯೋಗಿ ಗಾನಯೋಗಿ. ಪಂ. ಪಂಚಾಕ್ಷರಿ ಗವಾಯಿಗಳ ಹೆಸರಿನಲ್ಲಿ ಪ್ರತಿಷ್ಠಾನವನ್ನು ಅಸ್ತಿತ್ವಕ್ಕೆ ತರಲು ಸರ್ವ ಸಿದ್ಧತೆಯು ಭರದಿಂದ ನಡೆದಿದೆ ಎಂದು ಖ್ಯಾತ ಗಾಯಕ ಆನಂದಕುಮಾರ್ ಕಂಬಳಿಹಾಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರ...
ಲೇಖನ
ಲೇಖನ : ಯಾರ ಕೈಗೊಂಬೆಯೂ ಆಗಬೇಡಿ
ಅರೆ ಬೊಂಬೆ ನಾ! ಏನಿದು ಕೈಗೊಂಬೆ ಆಗೋದಂದ್ರೆ ಏನು ಅಂತ ಯೋಚಿಸ್ತಿದೀರಾ, ಅದು ಹಾಗೆ ಕೆಲವೊಮ್ಮೆ ಪರಿಸ್ಥಿತಿಯೂ ಕೂಡ ಅದಕ್ಕೆ ಸಾಥ್ ನೀಡಿಬಿಡುತ್ತೆ. ನಾವು ಅಂದುಕೊಂಡಂತೆ ಕೆಲವೊಮ್ಮೆ ಇರಲಿಕ್ಕೆ ಸಾಧ್ಯವೇ ಆಗದ ಸಂದಿಗ್ಧತೆಯು ಉಂಟಾಗಿಬಿಡತ್ತೆ. ಹೇಗೆ, ಏನು, ಯಾಕೆ, ಯಾವಾಗ ಈ ಎಲ್ಲ ಗೊಂದಲಗಳು ಒಂದಿಲ್ಲ ಒಂದು ರೀತಿಯಾಗಿ ಬಾಧಿಸುತ್ತವೆ. ಬದುಕೇ ಸಾಕು ಎಂಬಂತೆ...
ಸುದ್ದಿಗಳು
ಅವರಾದಿ ಸೇತುವೆ ವೀಕ್ಷಣೆ ಮಾಡಿದ ಸಚಿವ ಸತೀಶ ಜಾರಕಿಹೊಳಿ
ಮೂಡಲಗಿ: - ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರು ತಾಲೂಕಿನ ಅವರಾದಿ ಗ್ರಾಮಕ್ಕೆ ಆಗಮಿಸಿ ಮಳೆಗಾಲದಲ್ಲಿ ಮುಳುಗಡೆಯಾಗುವ ಸೇತುವೆ ವೀಕ್ಷಣೆ ಮಾಡಿದರು.ಅವರಾದಿ ಗ್ರಾಮಕ್ಕೆ ಆಗಮಿಸಿ ಸೇತುವೆ ವೀಕ್ಷಿಸಿ, ಅವರಾದಿ-ನಂದಗಾವ ಮೂಲಕ ಮಹಾಲಿಂಗಪೂರ ಸಂಪರ್ಕ ಇರುವ ಸೇತುವೆ ಮಕ್ಕಳ ಶಿಕ್ಷಣ, ಆರೋಗ್ಯ,ಸಾರ್ವಜನಿಕರ ಅನುಕೂಲಕ್ಕಾಗಿ ಅವರಾದಿ ಸೇತುವೆ ಕಂ ಬ್ಯಾರೇಜ್ ಸೇತುವೆಯನ್ನು ಮೇಲ್ದರ್ಜೆಗೆ...
ಕವನ
ಕವನ : ವಚನ ಪಿತಾಮಹ
ವಚನ ಪಿತಾಮಹ
===============
ಹರಕು ಬಟ್ಟೆ ಮುರುಕು ಮನೆ
ನಿರಾಭಾರಿ ಫಕೀರನು
ಹಿಡಿದ ಹಟ ಬಿಡದೆ ಸಾಧಿಪ
ಛಲದಂಕ ಮಲ್ಲನು
ಊರು ಕೇರಿ ಸುತ್ತಿ ಸುತ್ತಿ
ಮಠ ಮಂದಿರ ಶೋಧಿಸಿ
ಶರಣ ವಚನ ಕಟ್ಟುಗಳಿಗೆ
ಮರುಹುಟ್ಟು ನೀಡಿದವನು
ಚಂದನ ಕಡಿದು ಕೊರೆದರೂ
ಕಂಪು ಬಿಡದ ಪರಿಯಲಿ
ಬೆಟ್ಟದಷ್ಟು ಕಷ್ಟಪಟ್ಟು
ನಾಡ ಸೇವೆ ಮಾಡಿದವನು
ಕಾಯಕಯೋಗಿ ಜ್ಞಾನಸಿರಿ
ಶಿಕ್ಷಣತಜ್ನ ಸ್ಥಿತಪ್ರಜ್ನನು
ಕನ್ನಡ ನಾಡಿನ ಚರಿತೆಯಲಿ
ನಿತ್ಯ ಶೋಭಿತ ಸೂರ್ಯನು
ವಚನಗಳ ಹಾಸಿಕೊಂಡು
ವಚನಗಳ ಹೊದ್ದುಕೊಂಡು
ವಚನ ಯೋಗ ನಿದ್ರೆ ಮಾಡಿ
ವಚನ ಪಿತಾಮಹನಾಗಿಹನು
ನಿನ್ನ ಹಾಡಿ ಹೊಗಳಲೆಮಗೆ
ಶಬ್ದಗಳೇ...
ಕವನ
ಮಳೆ ಹನಿಗಳು
ಮಳೆ ಹನಿಗಳು."ಮಳೆ "ಜೋರು ಮಳೆ
ಥೇಟ್ ಅವಳಂತೆಯೇ..;
ಒಲವ ಧಾರೆ ಹೊರಗಡಿಯಿಡಲು ಬಿಡದು
ನಿಂತರೂ ನೆನಪು
ಮರದ ಹನಿಯಂತೆ ತೊಟ್ಟಿಕ್ಕದೇ ಬಿಡದು..!
_________
"ಹೋಳಿ"ಬಾನಿಗೂ ಆಡುವ ಆಸೆ
ಹೋಳಿ..;
ಅದಕೇ ನೋಡಿ
ಬಿಸಿಲು ಮಳೆಯ ಕೇಳಿ..!
________
"ಕಾಮನಬಿಲ್ಲು"ಭುವಿಗೆ ಮಳೆಯ ಸ್ಪರ್ಶ
ಭುವಿ ತಂಪಾಗಿ ಬಿಸಿಯಾಗಿ
ಆಗಸದ ಮಳೆಯ ಬಿಸಿಲ ಬೆಳಕಿಗೆ
ನಾಚಿಕೆಯಿಂದ ರಂಗೇರುತ್ತಿರುವಳು ಎಲ್ಲೆಲ್ಲೂ
ಅವಳ ಪ್ರೇಮದ ರಂಗಿನಾಟಕೆ ಸಾಕ್ಷಿ ಬೇಕೆ
ಅದೋ ಕಾಮನಬಿಲ್ಲು..!
________
"ಅಳು"ಕೆಲವೊಮ್ಮೆ ಸೋನೆಯಾಗಿ ಸುರಿಯುತ್ತೀ
ಮತ್ತೊಮ್ಮೆ ಗುಡುಗು ಸಿಡಿಲಿನೊಂದಿಗೆ ಬಿಕ್ಕುತ್ತೀ
ಮಗದೊಮ್ಮೆ ಯಾರನ್ನೋ ನೆನೆಸಿಕೊಂಡವರಂತೆ
ಬಿಟ್ಟು ಬಿಟ್ಟು...
ಲೇಖನ
ಹಣ ಗಳಿಸಬೇಕೆ ? ಪರಿಶ್ರಮಿಯಾಗಿ
ಹಣ ಗಳಿಸಬೇಕೆ?ಇಂದಿನ ದುಬಾರಿ ದುನಿಯಾದಲ್ಲಿ ಜೀವನ ಸಾಗಿಸೋಕೆ ಹಣದ ಅವಶ್ಯಕತೆ ತುಂಬಾ ಇದೆ ಎನ್ನುವದು ಎಲ್ಲರೂ ಒಪ್ಪಲೇಬೇಕಾದ ಮಾತು.ಬದುಕಿಗೆ ಅತೀ ಅಗತ್ಯವಿರುವ ಹಣ ಗಳಿಸುವದು ಹೇಗೆ ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಕಂಡು ಬರುತ್ತದೆ. ಈ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವ ಸಲುವಾಗಿ ಅನೇಕರು ವಿವಿಧ ತರಹದ ಹರಸಾಹಸಗಳನ್ನು ಮಾಡುವದನ್ನು ನಾವು ಕಾಣುತ್ತೇವೆ.ಹಣವೆಂಬುದು ಅತೀ ಮೋಹಕ...
ಸುದ್ದಿಗಳು
ಸಮಾಜ ಸೇವೆಯಲ್ಲಿ ನಿಸ್ವಾರ್ಥತೆ ಇರಲಿ – ಲಯನ್ ರಾಜಶೇಖರ ಹಿರೇಮಠ
ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಪದಗ್ರಹಣಮೂಡಲಗಿ: ‘ನಿಸ್ವಾರ್ಥದಿಂದ ಮಾಡುವ ಸಮಾಜ ಸೇವೆಯು ನಿಜವಾದ ಸಮಾಜ ಸೇವೆಯಾಗುತ್ತದೆ’ ಎಂದು ಡಿಸ್ಟ್ರಿಕ್ಟ್ ಲಯನ್ಸ್ ಪಸ್ಟ್ ಡಿಸ್ಟ್ರಿಕ್ಟ್ ಗವರ್ನರ್ ಬೆಳಗಾವಿಯ ರಾಜಶೇಖರ ಹಿರೇಮಠ ಹೇಳಿದರು.ಇಲ್ಲಿಯ ಎಸ್‌ಎಸ್‌ಆರ್ ಪ್ರೌಢ ಶಾಲೆಯ ಕಲ್ಮೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದ ೨೦೨೫-೨೬ನೇ ಸಾಲಿನ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ...
ಸುದ್ದಿಗಳು
ಮಂದಿ ಹೊಲಕ್ಕೆ ಮೂತ್ರ ಹರಿದು ಬಿಡುವ ಸಮರ್ಥ ಶಾಲೆ
ಮೂಡಲಗಿ - ನಾಗನೂರಿನ ಸಮರ್ಥ ಪ್ರಾಥಮಿಕ ಶಾಲೆಯನ್ನು ರೈತರ ಹೊಲದ ಪಕ್ಕದಲ್ಲಿ ಶಾಲೆ ನಿರ್ಮಾಣ ಮಾಡಲು ಪರವಾನಿಗೆ ಕೊಟ್ಟಿದ್ದಲ್ಲದೆ ಸುತ್ತಲೂ ಕಾಂಪೌಂಡ್ ಇಲ್ಲದೆ, ಶಾಲಾ ಸುರಕ್ಷತಾ ನಿಯಮಗಳನ್ನು ಪಾಲಿಸಿದ್ದಾರೋ ಇಲ್ಲವೋ ಎಂಬುದನ್ನೂ ಕೂಡ ನೋಡದಷ್ಟು ಮೂಡಲಗಿ ಶಿಕ್ಷಣ ಇಲಾಖೆ ಕುಂಭಕರ್ಣ ನಿದ್ರೆಯಲ್ಲಿ ತೊಡಗಿದ್ದು ಶಾಲಾ ಮಕ್ಕಳ ಮೂತ್ರ ಪಕ್ಕದ ಹೊಲದವರಿಗೆ ಹರಿದು ಹೋಗುವಂತೆ ಮಾಡುವಲ್ಲಿ...
ಸುದ್ದಿಗಳು
ಶೈಕ್ಷಣಿಕ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದ ಶಿಕ್ಷಕ ಸಾಹಿತಿ ವೈ ಬಿ ಕಡಕೋಳ
ಸವದತ್ತಿ : ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮೂಲಕ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪಡೆದ ತಾಲೂಕಿನ ವಿರಳ ಸಾಹಿತಿ ವೈ ಬಿ ಕಡಕೋಳ.ಇವರು ಶೈಕ್ಷಣಿಕ ವಲಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದು ಶಿಕ್ಷಕರಾಗಿ ಅರಟಗಲ್ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಪ್ರಶಸ್ತಿ ಪಡೆದ ಶಿಕ್ಷಕರಾಗಿ 40ಕ್ಕೂ ಹೆಚ್ಚು ಪುಸ್ತಕ ಬರೆದ ಶಿಕ್ಷಕ...
Latest News
ಕವನ : ಬೆಳಕಿನ ದೀಪಾವಳಿ
ಬೆಳಕಿನ ದೀಪಾವಳಿ
ಬೆಳಕು ಸರಿದು ನೇಸರನ
ಅಸ್ತದೊಡನೆ
ಜಗಕೆ ಜಗಮಗಿಸುವ
ದೀಪಗಳ ದರ್ಶನ
ಬಾನಂಚಿನಲಿ ಶಬ್ದಗಳ ನಡುವೆ
ಬೆಳಕಿನ ಚಿತ್ತಾರ
ಮೂಡಿಸುವ ಹಬ್ಬ
ಬೆಳಕಿನ ದೀಪಾವಳಿತಮವ ಕಳೆದು
ಜ್ಯೋತಿ ಬೆಳಗುವ
ನಾಡಿನಪವಿತ್ರ ಹಬ್ಬ
ತಳಿರು ತೋರಣ ಕಟ್ಟಿ
ಮನೆಯನು ಸಿಂಗರಿಸಿ
ಹಬ್ಬದಡುಗೆಯ ಸವಿಯುಣ್ಣುವ
ಮನದ ಖುಷಿಯ...