Monthly Archives: November, 2025

ಬಸವ ತತ್ವ ರಕ್ಷಣೆಗೆ ಚಿತ್ತರಗಿ ಮಠದ ಕಾರ್ಯ ಶ್ಲಾಘನೀಯ

ಹುನಗುಂದ: ಬಸವ ತತ್ವವನ್ನು ಉಳಿಸಿ ಬೆಳೆಸಿದ ಚಿತ್ತರಗಿ ಇಳಕಲ್ಲಿನ ಶ್ರೀ ವಿಜಯ ಮಹಾಂತೇಶ್ವರ ಮಠದ, ಕಾರ್ಯ ರಾಜ್ಯದ ಮಠಗಳಲ್ಲಿ ಪ್ರಮುಖವಾಗಿದೆ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಅವರು ತಾಲ್ಲೂಕಿನ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಮೂಲ ಮಠ ಚಿತ್ತರಗಿ ಪರಮ ತಪಸ್ವಿ ಲಿಂ.ಚಿತ್ತರಗಿ ಶ್ರೀ...

ರೈತರ ಕಬ್ಬಿಗೆ ರೂ.೩೫೦೦ ದರ ನೀಡಿ – ಧರ್ಮಣ್ಣ ಬಿರಾದಾರ

ಸಿಂದಗಿ: ರಾಜ್ಯದಲ್ಲಿ ಅತೀವೃಷ್ಟಿಯಿಂದ ಎಲ್ಹ ಹಾನಿಯಾಗಿ ರೈತರು ಸಂಕಷ್ಟ ಎದುರಿಸುವಂತಾಗಿದ್ದು ಅಲ್ಪ ಸ್ವಲ್ಪ ಇರುವ ಕಬ್ಬಿಗೆ ಈ ಜಿಲ್ಲೆಯಲ್ಲಿರುವ ಎಲ್ಲ ಕಾರ್ಖಾನೆಗಳು ರೂ. ೩೫೦೦ ವೈಜ್ಞಾನಿಕ ಬೆಂಬಲ ಬೆಲೆ ನೀಡಿ ರೈತರ ಕಷ್ಟಕ್ಕೆ ಆಸರೆಯಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸೀರು ಸೇನೆ ಉತ್ತರ ವಲಯ ಅಧ್ಯಕ್ಷ ಧರ್ಮಣ್ಣ ಬಿರಾದಾರ ಒತ್ತಾಯಿಸಿದರು.ಪಟ್ಟಣದ...

ಎಚ್ ಮೇಟಿಗೆ ಶೃದ್ಧಾಂಜಲಿ ಸಲ್ಲಿಸಿದ ಮನಗೂಳಿ

ಸಿಂದಗಿ; ಕಾಂಗ್ರೆಸ್ ಪಕ್ಷದ ಹಿರಿಯರು ಮಾಜಿ ಸಚಿವ ಎಚ್.ವೈ.ಮೇಟಿ ಅವರು ಮೊದಲ ಬಾರಿಗೆ ಗುಳೇದಗುಡ್ಡ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು, ನಮ್ಮ ತಂದೆಯವರಿಗೆ ತುಂಬಾ ಆತ್ಮೀಯರಾಗಿದ್ದರು ನಮ್ಮ ಬಗ್ಗೆ ಅತಿಯಾದ ಕಾಳಜಿ ವಹಿಸುತ್ತಿದ್ದರು, ಅವರ ಜೀವನ ಸಮಾಜಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಎಲ್ಲ ಸಮಾಜದೊಂದಿಗೆ ಆತ್ಮೀಯತೆ ಹೊಂದಿದ್ದರು. ಇದು ಬರಿ ಕಾಂಗ್ರೆಸ್ ಪಕ್ಷಕ್ಕೆ ಅಷ್ಟೇ ನಷ್ಟ ಆಗಿಲ್ಲಾ...

ರೈತರ ಹೋರಾಟಕ್ಕೆ ಬೆಂಬಲ ನೀಡಿ ವೇದಿಕೆಯಲ್ಲೇ ಮಲಗಿದ ಮುಖಂಡರು

ಮೂಡಲಗಿ - ಕಬ್ಬಿನ ಬೆಲೆ ನಿಗದಿಗಾಗಿ ಕಳೆದ ಆರು ದಿನಗಳಿಂದ ಗುರ್ಲಾಪೂರ ಕ್ರಾಸ್ ನಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಕೆಲವು ಮುಖಂಡರು ರೈತರ ಅಹೋರಾತ್ರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ವೇದಿಕೆಯಲ್ಲಿಯೇ ಮಲಗಿದರು.ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ರಾಜ್ಯ ಸಭಾ ಸಂಸದ ಈರಣ್ಣ ಕಡಾಡಿ, ರಾಜ್ಯ ರೈತ...

ಲೇಖನ : ಚಿತ್ರಕಲಾ ಪ್ರತಿಭೆ ಸೌಮ್ಯ ಎಸ್

ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನ ಹಡಗಲಿ ವತಿಯಿಂದ ಹೊಸಪೇಟೆಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಕರೋಕೆ ಯುಗಳ ಚಿತ್ರಗೀತೆ ಸ್ಪರ್ಧೆಯಲ್ಲಿ ರಾಜ್ಯ ಅಧ್ಯಕ್ಷ ಮಧು ನಾಯ್ಕ ಲಂಬಾಣಿ ಅವರ ಸಿಂಗಾರ ಎಂಬ ಹಾಡಿನ ಪೋಸ್ಟರ್ ಬಿಡುಗಡೆ ಆಯಿತು ಮತ್ತು ಈ ಹಾಡಿಗೆ ಸ್ಥಳದಲ್ಲೇ ಧ್ವನಿಮುದ್ರಿತ ಹಾಡು ಮುಗಿಯುವಷ್ಟರಲ್ಲಿ ಹಾಡಿನ ಭಾವರ್ಥ ಬಿಂಬಿಸುವ ಸೊಗಸಾದ ಚಿತ್ರ...

ಸಭ್ಯತೆಯ ಸಾಧ್ವಿ ಶರಣೆ ಸರಸ್ವತಿ ಬಿರಾದಾರ

ನಾವು - ನಮ್ಮವರುಸರಸ್ವತಿ ಬಿರಾದಾರ ಅವರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ಒಬ್ಬ ಅತ್ಯಂತ ಸರಳ -ಸಜ್ಜನಿಕೆಯ ಸದ್ಗೃಹಿಣಿ ಎಂದರೆ ತಪ್ಪಾಗಲಾರದು. ಮೃದು ಮಾತಿನ , ಸಭ್ಯತೆಯ ಹೆಣ್ಣುಮಗಳು ಮತ್ತು ಶರಣರ ವಚನ ಗಾಯನ ಮಾಡುವುದರ ಜೊತೆಗೆ ಶರಣ ಚಿಂತಕಿ ಕೂಡಾ ಆಗಿರುವರು.ಸರಸ್ವತಿ ಯಶವಂತ ಬಿರಾದಾರ...

ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ – ಬಿ ವೈ ವಿಜಯೇಂದ್ರ

ಆರು ದಿನಗಳಾದರೂ ರೈತರ ಕಡೆ ತಲೆ ಹಾಕದ ಸರ್ಕಾರಮೂಡಲಗಿ - ರೈತ ಯಾವುದೇ ಜಾತಿ, ಪಕ್ಷಕ್ಕೆ ಸೇರಿದವನಲ್ಲ. ಅನ್ನದಾತ ನ್ಯಾಯಕ್ಕಾಗಿ ಹೋರಾಟ ಮಾಡುವಾಗ ನಾವು ನಿಮ್ಮೆಲ್ಲರ ಬೆಂಬಲಕ್ಕೆ ನಿಲ್ಲುತ್ತೇವೆ. ಹಿಂದೆ ಯಡಿಯೂರಪ್ಪ ಸರ್ಕಾರ ಇದ್ದಾಗ ಕಾರ್ಖಾನೆ ಆರಂಭಕ್ಕೆ ಮೊದಲೇ ಯಡಿಯೂರಪ್ಪ ನವರು ತಕ್ಷಣವೇ ಮಾತುಕತೆ ಆರಂಭಿಸಿ ಪರಿಹಾರ ಕೊಡಿಸಿದ್ದರು. ಆದರೆ ಹೋರಾಟ ಆರಂಭಿಸಿ ಆರು...

ರೈಲು ಹಾಗು ಬೈಕ್ ನಡುವೆ ಅಪಘಾತ; ರೈಲಿನ ಕೆಳಗೆ ಸಿಕ್ಕಿಕೊಂಡ ಬೈಕ್

ಬೀದರ್ - ನಗರದ ನೌಬಾದ್ ಬಳಿ ಅಪಘಾತ ರೈಲು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು ರೈಲಿನ ಕೆಳಗೆ ಸಿಕ್ಕಿಹಾಕಿಕೊಂಡ ಬೈಕನ್ನು ಬಿಟ್ಟು ಬೈಕ್ ಸವಾರ ಬಿಟ್ಟು ಓಡಿ ಹೋಗಿದ್ದಾನೆ.ಕಲಬುರ್ಗಿಯಿಂದ ಬೀದರಗೆ ಹೊರಟಿದ್ದ ರೈಲು. ಬೈಕ್ ಸಮೇತ ರೈಲ್ವೆ ಹಳಿ ದಾಟುವ ವೇಳೆ ರೈಲು ಬಂದಿದ್ದು ಅಪಘಾತ ಸಂಭವಿಸಿದೆ. ಅದೃಷ್ಣವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

ಆಂಗ್ಲ ಭಾಷೆ ಶಾಲೆಯಲ್ಲಿ ಮೊದಲು ಕನ್ನಡಕ್ಕೆ ಗೌರವ ಕೊಡಬೇಕು – ಸಾಹಿತಿ ಶಿವಶಂಕರ ತರನಳ್ಳಿ

ಕರ್ನಾಟಕದಲ್ಲಿ ಕನ್ನಡ ಭಾಷೆ ಶ್ರೇಷ್ಠ ನಾವೆಲ್ಲರೂ ಕನ್ನಡ ಭಾಷೆಯನ್ನು ಕಾಪಾಡಬೇಕು ಎಲ್ಲಾ ಆಂಗ್ಲ ಭಾಷೆ ಶಾಲೆಗಳಲ್ಲಿ ಮೊದಲು ಕನ್ನಡಕ್ಕೆ ಗೌರವ ಕೊಡಬೇಕು ಎಂದು ಸಾಹಿತಿ ಶಿವಶಂಕರ ತರನಳ್ಳಿ ಹೇಳಿದರುಹುಮನಾಬಾದ್ ಪಟ್ಟಣದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಬಾಲ ಭಾರತಿ ವಿದ್ಯಾ ಮಂದಿರ ಶಾಲೆಯ ಅವರಣದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಜಿಲ್ಲಾ ಘಟಕ ಬೀದರ್ ವತಿಯಿಂದ...

ಎಸ್.ಆರ್.ಇ.ಎಸ್. ಪದವಿ ಕಾಲೇಜಿನ ಸಂಜನಾ‌ ಸುಣಗಾರ ಮಹಿಳಾ ಕುಸ್ತಿ ಬ್ಲ್ಯೂ ಆಗಿ ಆಯ್ಕೆ

ಮೂಡಲಗಿ: ಇತ್ತೀಚೆಗೆ ತಾಳಿಕೋಟೆಯ ಎಸ್.ಕೆ. ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ  ಆತಿಥ್ಯದಲ್ಲಿ ಜರುಗಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಏಕವಲಯ ಪುರುಷ ಹಾಗೂ ಮಹಿಳಾ ಕುಸ್ತಿ ಸ್ಪರ್ಧೆಯಲ್ಲಿ ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆಯ ಮಹಾವಿದ್ಯಾಲಯದ ಬಿ.ಎ ಪ್ರಥಮ ವರ್ಷದ ವಿದ್ಯಾರ್ಥಿನಿ ಕುಮಾರಿ. ಸಂಜನಾ ಸುಣಗಾರ ಕುಸ್ತಿ...
- Advertisement -spot_img

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...
- Advertisement -spot_img
error: Content is protected !!
Join WhatsApp Group