Monthly Archives: February, 2026

ಎರಡು ಕವನಗಳು : ಡಾ. ಶಶಿಕಾಂತ ಪಟ್ಟಣ

ನಿನ್ನಿಂದ ನಗಬೇಕು ____________________ ನಿನ್ನ ಸುತ್ತ ನೂರು ಜನರು ನಿನ್ನಿಂದ ನಗಬೇಕು ಹೊರತು ನಿನ್ನ ನೋಡಿ ಅಲ್ಲ ನಗೆ ಮಲ್ಲಿಗೆ ಹಂಚಿ ಬಿಡುಯಾರಾದರೂ ಅತ್ತರೆ ನಿನಗಾಗಿ ಅಳಬೇಕೆ ಹೊರತು ನಿನ್ನಿಂದಲ್ಲ ಅಳು ನೋವು ನೀಡದಿರುನೀನು ನಕ್ಕಾಗ ಅವರು ನಕ್ಕು ನೀನು ಅತ್ತಾಗ ಅವರು ಅತ್ತರೆ ಅದುವೇ ಸ್ನೇಹ ಪ್ರೀತಿ ಜೀವನ ನಕ್ಕು ಬಿಡು ನಿನ್ನ ನೋವು ಮರೆತು ____________________ಮುಗಿಸಿ ಹೊರಡು ___________________ ತನು ಮನ ಭಾವಗಳ ತಳಕಾಟ ಅತ್ತ ಇತ್ತ ಹೊಯ್ದಾಟ ಚಿತ್ತ ಚಂಚಲ ತೀವ್ರ ಚೆಲ್ಲಾಟ ಮನವಿದು ಮಹಾದೇವನ ಮಾಟ ಆತ್ಮ ಕಾಯ ಪ್ರಾಣಗಳ ಕೂಟ ಮುಗಿಸಿ ಹೊರಡು ಭೂಮಿ ಬಿಟ್ಟು ಸಾಕು ಅವರಿವರ ಕಾಟ _____________________ ಡಾ.ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
- Advertisement -spot_img

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...
- Advertisement -spot_img
error: Content is protected !!
Join WhatsApp Group