spot_img
spot_img

ರಾಜ್ಯದ 262 ಖಾದಿ ಸಂಸ್ಥೆಗಳು ನೋಂದಾಯಿತ – ಕೇಂದ್ರ ಸಚಿವ ಭಾನು ಪ್ರತಾಪ ಸಿಂಗ್ ವರ್ಮಾ

Must Read

- Advertisement -

ಮೂಡಲಗಿ: ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯದಲ್ಲಿ 2008-09 ರಲ್ಲಿ ಪ್ರಾರಂಭವಾದಾಗಿನಿಂದ 30.01.2024 ರವರೆಗೆ 47463 ಘಟಕಗಳ ನೆರವು ನೀಡಲಾಗಿದೆ ಮತ್ತು 388133 ಉದ್ಯೋಗ ಸೃಷ್ಟಿಯಾಗಿವೆ ಹಾಗೂ ರಾಜ್ಯದ 262 ಖಾದಿ ಸಂಸ್ಥೆಗಳು ನೋಂದಣಿಯಾಗಿದ್ದು 27612 ಖಾದಿ ಕುಶಲಕರ್ಮಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ರಾಜ್ಯ ಸಚಿವ ಭಾನು ಪ್ರತಾಪ್ ಸಿಂಗ್ ವರ್ಮಾ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ರಾಜ್ಯಸಭೆಯ ಮಧ್ಯಂತರ ಬಜೆಟ್ ಅಧಿವೇಶನದಲ್ಲಿ ಕರ್ನಾಟಕ ರಾಜ್ಯದಲ್ಲಿ ಗುಡಿ ಕೈಗಾರಿಕೆಗಳ ಪ್ರಸ್ತುತ ಸ್ಥಿತಿ ಮತ್ತು ಅಂತಹ ಕೈಗಾರಿಕೆಗಳನ್ನು ಉತ್ತೇಜಿಸಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಎಂ.ಎಸ್.ಎಂ.ಇ ಸಚಿವಾಲಯವು ದೇಶಾದ್ಯಂತ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಸೇರಿದಂತೆ ಸೂಕ್ಷ್ಮ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಸ್ವಯಂ ಉದ್ಯೋಗಾವಕಾಶಗಳನ್ನು ನೀಡುತ್ತಿದೆ.

ಗ್ರಾಮೀಣ, ಬುಡಕಟ್ಟು ಮತ್ತು ಅರೆ-ನಗರ ಪ್ರದೇಶಗಳಲ್ಲಿ ವಲಸೆ ಹೋಗುವುದನ್ನು ತಡೆಯಲು ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ, ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆಗಾಗಿ ನಿಧಿಯ ಯೋಜನೆ, ಖಾದಿ ವಿಕಾಸ್ ಯೋಜನೆ, ಗ್ರಾಮೋದ್ಯೋಗ ವಿಕಾಸ್ ಯೋಜನೆ, ಗ್ರಾಮೋದ್ಯೋಗ ವಿಕಾಸ್ ಯೋಜನೆ, ತೆಂಗಿನ ನಾರು ವಿಕಾಸ ಯೋಜನೆಗಳ ಮೂಲಕ ದೇಶಾದ್ಯಂತ ಸಣ್ಣ ಮತ್ತು ಕೈಗಾರಿಕೆಗಳನ್ನು ಉತ್ತೇಜಿಸುತ್ತಿದೆ ಎಂದರು.

- Advertisement -

ಪಿಎಂಇಜಿಪಿ ಯೋಜನೆಯಡಿ ಸಾಮಾನ್ಯ ವರ್ಗದ ಫಲಾನುಭವಿಗಳು ಗ್ರಾಮೀಣ ಪ್ರದೇಶಗಳಲ್ಲಿ ಯೋಜನಾ ವೆಚ್ಚದ 25% ಮತ್ತು ನಗರ ಪ್ರದೇಶಗಳಲ್ಲಿ 15% ಸಬ್ಸಿಡಿಯನ್ನು ಪಡೆಯಬಹುದು. ಎಸ್.ಸಿ, ಎಸ.ಟಿ, ಒಬಿಸಿ, ಅಲ್ಪಸಂಖ್ಯಾತರು, ಮಹಿಳೆಯರು, ಮಾಜಿ ಸೈನಿಕರು, ವಿಕಲಚೇತನರಿಗೆ ಗ್ರಾಮೀಣ ಪ್ರದೇಶಗಳಲ್ಲಿ 35% ಮತ್ತು ನಗರ ಪ್ರದೇಶದಲ್ಲಿ 25% ಸಬ್ಸಿಡಿ ಪಡೆಯಬಹುದಾಗಿದೆ. ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆಗಾಗಿ ನಿಧಿಯ ಯೋಜನೆಯಡಿ 500 ಕುಶಲ ಕರ್ಮಿಗಳವರೆಗಿನ ಕ್ಲಸ್ಟರ್‌ಗಳಿಗೆ 2.50 ಕೋಟಿ ರೂ.ಗಳವರೆಗೆ ಮತ್ತು 500 ಕ್ಕಿಂತ ಹೆಚ್ಚು ಕುಶಲಕರ್ಮಿಗಳನ್ನು ಹೊಂದಿರುವ ಕ್ಲಸ್ಟರ್‌ಗಳಿಗೆ 5.00 ಕೋಟಿ ರೂ.ಗಳವರೆಗೆ ಬೆಂಬಲವನ್ನು ಒದಗಿಸಲಾಗುತ್ತದೆ ಎಂದರು.

ಖಾದ ವಿಕಾಸ್ ಯೋಜನೆಯಡಿ ಖಾದಿ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಖಾದಿ ಕಾರ್ಮಿಕರಿಗೆ ಸುಸ್ಥಿರ ಉದ್ಯೋಗವನ್ನು ಒದಗಿಸಲು ಮಾರ್ಪಡಿಸಿದ ಮಾರುಕಟ್ಟೆ ಅಭಿವೃದ್ಧಿ ನೆರವು, ಬಡ್ಡಿ ಸಬ್ಸಿಡಿ, ಖಾದಿ ಕುಶಲಕರ್ಮಿಗಳಿಗೆ ವರ್ಕ್ಶೆಡ್ ಯೋಜನೆ, ಮೂಲಸೌಕರ್ಯವನ್ನು ಬಲಪಡಿಸುವುದು ಮತ್ತು ಮಾರುಕಟ್ಟೆ ಮೂಲಸೌಕರ್ಯಕ್ಕೆ ನೆರವು ಮುಂತಾದ ಯೋಜನೆಗಳ ಮೂಲಕ ಖಾದಿ ಸಂಸ್ಥೆಗಳು ಮತ್ತು ಕುಶಲಕರ್ಮಿಗಳಿಗೆ ನೆರವು ನೀಡಲಾಗುತ್ತದೆ. 

ಜೇನು ಸಾಕಾಣಿಕೆ ಚಟುವಟಿಕೆಗಳು, ಕುಂಬಾರಿಕೆ, ಅಗರಬತ್ತಿ ತಯಾರಿಕೆ, ಚರ್ಮದ ಪಾದರಕ್ಷೆ ಚಟುವಟಿಕೆಗಳು ಇತ್ಯಾದಿಗಳಲ್ಲಿ ಗ್ರಾಮೀಣ ಜನರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಗ್ರಾಮೀಣ ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಮತ್ತು ಸುಧಾರಿತ ಉಪಕರಣಗಳು ಮತ್ತು ಸಲಕರಣೆಗಳನ್ನು ಒದಗಿಸಲಾಗುತ್ತದೆ. ಇವುಗಳಲ್ಲಿ ಹನಿ ಮಿಷನ್, ಕುಮ್ಹಾರ್ ಸಶಕ್ತೀಕರಣ ಕಾರ್ಯಕ್ರಮ ಮುಂತಾದ ಘಟಕಗಳು ಸೇರಿವೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group