- Advertisement -
ಮೂಡಲಗಿ: 75ನೇ ಗಣರಜ್ಯೋತ್ಸವ ಅಂಗವಾಗಿ ತಾಲ್ಲೂಕಿನ ಹೊನಕುಪ್ಪಿ ಗ್ರಾಮದ ಚಂದ್ರಮ್ಮದೇವಿ ಕೈವಲ್ಯಮಠದಿಂದ ತಾಲ್ಲೂಕಿನ 25ಕ್ಕೂ ಅಧಿಕ ಶಾಲೆಗಳಿಗೆ ರೂ. 2.50 ಲಕ್ಷ ಮೌಲ್ಯದ ನೋಟ್‍ಬುಕ್‍ಗಳನ್ನು ಮಕ್ಕಳಿಗೆ ಕಾಣಿಕೆ ರೂಪದಲ್ಲಿ ವಿತರಿಸಿದರು.
ಮಠದ ಪೀಠಾಧಿಪತಿ ಶರಣಶ್ರೀ ಬಸಪ್ಪ ಅಜ್ಜನವರು ಮಾತನಾಡಿ ‘ಸಮಾಜ ಬೆಳವಣಿಗೆಗೆ ಶಿಕ್ಷಣ ಪ್ರಮುಖವಾಗಿದೆ. ಶ್ರೀಮಠದಿಂದ ಶಿಕ್ಷಣ ದಾಸೋಹ ಮಾಡುತ್ತಿರುವೆವು. ಸದ್ಯ 25 ಶಾಲೆಗಳಿಗೆ ನೋಟ್‍ಬುಕ್‍ಗಳನ್ನು ನೀಡಿರುವೆವು. ಮುಂದಿನ ದಿನಗಳಲ್ಲಿ ಇಡೀ ತಾಲ್ಲೂಕಿನ ಎಲ್ಲ ಶಾಲೆಗಳ ಮಕ್ಕಳಿಗೆ ನೋಟ್‍ಬುಕ್‍ಗಳನ್ನು ವಿತರಿಸುವೆವು’ ಎಂದರು.
ಭಕ್ತರಿಂದ ಕೊಡಮಾಡುವ ಕಾಣಿಕೆಯನ್ನು ಸಮಾಜಕ್ಕೆ ಅರ್ಪಿಸುವೆವು. ಅನ್ನದಾಸೋಹ, ಆರೋಗ್ಯ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದರು.
- Advertisement -
ಶಾಲಾ ಶಿಕ್ಷಕರು ಮತ್ತು ಭಕ್ತರು ಇದ್ದರು.