spot_img
spot_img

ಜಾನಪದದಲ್ಲಿ ಬಸವಣ್ಣ

Must Read

- Advertisement -

ಅರಸ ಬಿಜ್ಜಳರಾಯ ಮರೆತಂದು ಕುಲ ಮತವ

ಕರಸಿ ಬಸವನಿಗೆ ಒಪ್ಪಿಸಿದ|
ಮಂತ್ರಿ ಪದ
ಹರುಷದಲಿ ರಾಜ ಮುದ್ರಿಕೆಯ||

ಸಾಗಿ ಬಸವನು ಬಂದು ತೂಗಿದನು ಕಲ್ಶಾಣ
ಹಾಗಿನಲಿ ಕಟ್ಟಿ ಅನುಭಾವ|ಮಂಟಪವ
ಕೂಗು ಕೇಳುತಲಿ ಜನವೆದ್ದು||

- Advertisement -

ಕೂಡಿದರು ಹುರುಪಿನಲಿ ನಾಡ ಬಲ್ಲಿದರೆಲ್ಲ
ಸೂಡ ಕಟ್ಟಿದರು ಶಿವ ನುಡಿಯ|
ಕಾಯಕದ
ಗೂಡಾತು ಲೋಕ ಜನ ಹಿಗ್ಗಿ|

ಅರ್ಪಣೆಯು ಅನುಭಾವ ಹೆಪ್ಪುಗಟ್ಟುತು ಲೋಕ
ಬೆಪ್ಪಾತು ನಾಕ ಕಾಯಕದ|ಹಾಲ್ದೊಳೆಯ
ತೆಪ್ಪ ದಾಸೋಹ ತೇಲುತಲಿ||

ಉಂಡು ತೇಗಿತು ಲೋಕ ಕೊಂಡಾಡಿ ಕಾಯಕವ
ಕಂಡ ಕಂಡಲ್ಲಿ ದಾಸೋಹ| ಕಾಯಕದ ಕಂಡ ಜೀವನದ ಶಿವ ಮಾತು||

- Advertisement -

ಬನವಾಸಿ ಕುಂತಳಕೆ ಮನೆಮಾತು ಅಲ್ಲಮನು
ಮನವೊಪ್ಪಿ ಲೋಕ ಕೈ ಮುಗಿದು|ಕೇಳುತಲಿ ಜನಕೆ ಊದಿದನು ಶಿವ ಮಂತ್ರ||

ಕರೆದು ಆಶೀರ್ವದಿಸಿ ಹರಸಿ ಒಪ್ಪಿಸಿ ಬಸವ
ವರ ಚೆನ್ನಬಸವ ಶರಣರಿಗೆ| ಕಂಟಕದ
ಹುರಿಯಾಳು ಕಾಯೊ ಹೊಸ ಮತವ|

ಹೇಳಿ ಹೊರಟನು ಬಸವ ಕೇಳಲಾರದೆ ಮಾತ
ಗೋಳಿಟ್ಟು ಜನವು ಸರಮಾಲೆ|
ಸಂಗಮಕೆ
ಆಳು ಬಸವಯ್ಯ ದಯವಿಟ್ಟು|

ಸಕ್ಕರಿ ಸವಿನೋಡೊ ಉಪ್ಪಿನ ರುಚಿ ನೋಡೊ| ಅಪ್ಪ
ಬಲಭೀಮನ ಸಿರಿ ನೋಡೊ ಜಗದಾಗವನ ನಾಮಾ ಕೊಂಡಾಡೋ||

ಬಲಭೀಮನ ಮಂದಿರಕ
ಬಾಗಿನೀ ಬಂದರ ನಿನ್ನ| ಮನಿ
ಮುಂದ ಹಾಕ್ಶಾನ ಹಂದರ
ಭಕ್ತರ ಬಾಳಾದಿತ ನೋಡ ಬಂಗಾರ||


ಬಸವರಾಜ ಕೋಟಿ, ಶಿಕ್ಷಕರು
ಕುಲಗೋಡ

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group