- Advertisement -
ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಪ್ರಸಿದ್ಧ ಹನಮಂತ ದೇವರ ದೇವಸ್ಥಾನದಲ್ಲಿ ಮಂಗಳವಾರ ಕೊವಿಡ್ ಎರಡನೇ ಅಲೆಯ ಅತಂಕದ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಹನುಮ ಜಯಂತಿಯನ್ನು ಆಚರಿಸಿದರು.
ಬೆಳಿಗ್ಗೆ ಹನಮಂತ ದೇವರ ಸನ್ನಿಧಿಗೆ ಅಭಿಷೇಕ, ವಿಶೇಷ ಪೂಜೆಯನ್ನು ಸಲ್ಲಿಸಿ, ವಿಶೇಷ ಅಲಂಕಾರದೊಂದಿಗೆ ಪೂಜೆಯನ್ನು ಮಾಡಿದರು. ಸಂಪ್ರದಾಯದಂತೆ ತೊಟ್ಟಿಲೋತ್ಸವ ಮತ್ತು ಪಾಲಕಿ ಉತ್ಸವ ಜರುಗಿತು.
‘ಕೊವಿಡ್ ಮಾರ್ಗಸೂಚಿಯಂತೆ ಕೆಳದ ಎರಡು ವಾರಗಳ ಪೂರ್ವದಿಂದ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನವನ್ನು ನಿಷೇಧಿಸಲಾಗಿದೆ. ಹೀಗಾಗಿ ಈ ಬಾರಿ ಹನುಮ ಜಯಂತಿಯನ್ನು ಆರ್ಚಕರಷ್ಟೇ ಜಯಂತಿಯನ್ನು ಸರಳವಾಗಿ ಆಚರಿಸಿದೆವು’ ಎಂದು ಆರ್ಚಕ ಸುಭಾಷ ಪೂಜೇರಿ ತಿಳಿಸಿದರು.
- Advertisement -
ಬೆಳಿಗ್ಗೆ ಭಕ್ತರು ದೇವಸ್ಥಾನದ ಹೊರಗಿನಿಂದ ನಮಿಸಿ, ತಮ್ಮ ಭಕ್ತಿಯನ್ನು ಸಮರ್ಪಿಸಿದರು.