spot_img
spot_img

ಕೊರೋನಾ ಸಾಂಕ್ರಾಮಿಕದಲ್ಲಿ ಮನಸ್ಸನ್ನು ಹೇಗೆ ಸ್ಥಿರವಾಗಿಡಬೇಕು ?

Must Read

- Advertisement -

ಪ್ರಾರ್ಥನೆ ಮತ್ತು ಅಗ್ನಿಹೋತ್ರವನ್ನು ಅಳವಡಿಸಿಕೊಂಡು ನಿಯಮಿತವಾಗಿ ಸಾಧನೆ ಮಾಡಿ !

– ಸದ್ಗುರು ನಂದಕುಮಾರ ಜಾಧವ್, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಕೊರೋನಾ ಸಾಂಕ್ರಾಮಿಕದಿಂದ ಉದ್ಭವಿಸಿರುವ ಪರಿಸ್ಥಿತಿಯಲ್ಲಿ ಅನೇಕರ ಮನಸ್ಸಿನಲ್ಲಿ ಭಯ, ನಕಾರಾತ್ಮಕತೆ ಮತ್ತು ನಿರಾಶೆ ಹೆಚ್ಚಾಗಿದೆ, ಜೊತೆಗೆ ಕೆಲವರ ಮಾನಸಿಕ ಸಮತೋಲನದ ಮೇಲೆಯೂ ವಿಪರೀತವಾಗಿ ಪರಿಣಾಮ ಬೀರಿದೆ. ಇಂತಹ ಸ್ಥಿತಿಯಲ್ಲಿ ನಿಯಮಿತವಾಗಿ ಸಾಧನೆ ಮಾಡುವುದರಿಂದ ಮಾನಸಿಕ ಒತ್ತಡ, ಭಯಗಳು ಕಡಿಮೆಯಾಗಿ ಮನಸ್ಸು ಚಿಂತೆಯಿಂದ ಮುಕ್ತವಾಗುತ್ತದೆ ಮತ್ತು ಆನಂದದಲ್ಲಿರಬಹುದು.

- Advertisement -

ಈಶ್ವರನಿಗೆ ಮಾಡಿದ ಪ್ರಾರ್ಥನೆಯಿಂದಾಗಿ ನಮಗೆ ಅಸಾಧಾರಣ ಶಕ್ತಿ ಸಿಗುತ್ತದೆ. ಪ್ರಾರ್ಥನೆಯಿಂದ ರೋಗನಿವಾರಣೆಯಾಗುತ್ತದೆ ಎಂಬುದನ್ನು ಈಗ ಆಧುನಿಕ ವಿಜ್ಞಾನವು ಸಹ ವಿವಿಧ ಪ್ರಯೋಗಗಳ ಮೂಲಕ ಒಪ್ಪಿಕೊಂಡಿದೆ. ನಿಮ್ಮ ಸ್ಥೈರ್ಯ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸಲು ಪ್ರಾರ್ಥನೆಯನ್ನು ನಿಮ್ಮ ಜೀವನದಲ್ಲಿ ಅಳವಡಿಸಬೇಕು.

ಪ್ರಸ್ತುತ ಕಲುಷಿತ ವಾತಾವರಣದಲ್ಲಿ ಗಾಳಿಯನ್ನು ಶುದ್ಧೀಕರಿಸುವುದರ ಜೊತೆಗೆ, ವಿಷಕಾರಿ ಗಾಳಿಗಳು ಮತ್ತು ವಿಕಿರಣಗಳಿಂದ ರಕ್ಷಿಸುವ ‘ಅಗ್ನಿಹೋತ್ರ’ ಈ ವಿಧಿಯೂ ಸಹ ಅಗತ್ಯವಾಗಿ ಮಾಡಬೇಕು. ಪ್ರಸಕ್ತ ಆಪತ್ಕಾಲದಲ್ಲಿ ವಿವಿಧ ಉಪಾಯಗಳನ್ನು ಕೈಗೊಳ್ಳುವ ಮೂಲಕ ನಿಯಮಿತವಾಗಿ ಸಾಧನೆ ಮಾಡಬೇಕು

ದೈನಂದಿನ ದಿನಚರಿಯಲ್ಲಿ ಆಯುರ್ವೇದ ಸೂತ್ರಗಳನ್ನು ಅಳವಡಿಸಿ ಧರ್ಮಪಾಲನೆ ಮಾಡಿ !- ವೈದ್ಯ ಭೂಪೇಶ ಶರ್ಮಾ, ಹರಿಯಾಣ
‘ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ನಮ್ಮ ಆರೋಗ್ಯಕ್ಕಾಗಿ ತಾತ್ಕಾಲಿಕ ಪರಿಹಾರಗಳನ್ನು ಆಶ್ರಯಿಸದೆ ನಿಮ್ಮ ದೈನಂದಿನ ದಿನಚರಿಯಲ್ಲಿ ಆಯುರ್ವೇದ ಸೂತ್ರಗಳನ್ನು ಅನುಸರಿಸಿದರೆ, ನಮಗೆ ದೈಹಿಕ ಮತ್ತು ಮಾನಸಿಕ ಶಕ್ತಿ ಸಿಗುತ್ತದೆ. ಆಮ್ಲಜನಕ ಸಿಲಿಂಡರ್‌ಗಳ ಮೂಲಕ ದೇಹಕ್ಕೆ ಪ್ರಾಣವಾಯು (ಆಮ್ಲಜನಕ) ನೀಡುವುದು, ಈ ತಾತ್ಕಾಲಿಕ ಉಪಾಯವನ್ನು ಅವಲಂಬಿಸದೆ, ನಮ್ಮ ಆಹಾರದಲ್ಲಿ ಶುದ್ಧ ಎಣ್ಣೆ, ತುಪ್ಪಗಳಂತಹ ವಸ್ತುಗಳನ್ನು ಅಳವಡಿಸಿಕೊಂಡರೆ ದೇಹದ ವಾಯುವನ್ನು ನಿಯಂತ್ರಿಸಲು ಸಾಧ್ಯ.

- Advertisement -

ಇದಲ್ಲದೆ, ದೇಹದ ಮೇಲೆ ಅಭ್ಯಂಗ (ಎಣ್ಣೆ) ಬಳಸಿದರೆ ಆಮ್ಲಜನಕದ ಮಟ್ಟವನ್ನು ಸುಧಾರಿಸುತ್ತದೆ. ತಂಗಳು ಅನ್ನವನ್ನು ಸೇವಿಸದೇ ಯೋಗ್ಯ ಆಹಾರದೊಂದಿಗೆ ನಿಯಮಿತವಾದ ವ್ಯಾಯಾಮ, ಯೋಗ, ಪ್ರಾಣಾಯಾಮಗಳನ್ನು ಮಾಡಿದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಜನರು ಧರ್ಮಪಾಲನೆ ಅಂದರೆ ಜೀವನ ನಡೆಸಲು ನಿಗದಿಪಡಿಸಿದ ನಿಯಮಗಳನ್ನು ಪಾಲಿಸಬೇಕು.

ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಪಡೆಯಲು ಸರಿಯಾದ ದಿನಚರಿ ಅನುಸರಿಸಿ ! – ಶ್ರೀ. ಆನಂದ ಜಖೋಟಿಯಾ, ಮಧ್ಯಪ್ರದೇಶ ಮತ್ತು ರಾಜಸ್ಥಾನದ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ
‘ಪ್ರಸ್ತುತ ಕಾಲದಲ್ಲಿ ಕೊರೋನಾದ ರೋಗಾಣುವಿನಿಂದ ಬಳಲುತ್ತಿದ್ದ ಅನೇಕ ಜನರಿಗೆ ಸಹಾಯ ಮಾಡಲು ಜನರು ಮುಂದಾಗುತ್ತಿದ್ದಾರೆ; ಆದರೆ ಇದೇ ಸಮಯದಲ್ಲಿ ಸ್ವಾರ್ಥವನ್ನು ಸಾಧಿಸಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ, ಔಷಧಿಗಳ ಕಾಳಸಂತೆ, ಲಾಭದಾಯಕತೆ ಸೇರಿದಂತೆ ಅನೇಕ ಅಕ್ರಮಗಳು ನಡೆಯುತ್ತಿದೆ.

ಈ ಅಕ್ರಮಗಳನ್ನು ಬೆಳಕಿಗೆ ತರಲು ಸಾರ್ವಜನಿಕರು ಮುಂದಾಗಬೇಕು. ಪ್ರಸ್ತುತ ಕಾಲದಲ್ಲಿ ಎಲ್ಲರೂ ಶಿಸ್ತು ಪಾಲಿಸುವುದು ಅಗತ್ಯವಿದೆ. ಪ್ರಸ್ತುತ ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿದರೆ, ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಪಡೆಯಲು ಸರಿಯಾದ ದಿನಚರಿಯು ನಿಮಗೆ ಖಂಡಿತವಾಗಿಯೂ ಪ್ರಯೋಜನವನ್ನು ನೀಡುತ್ತದೆ.’ ಎಂದು ಹೇಳಿದರು.

(ಕೃಪೆ : ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ‘ಕೊರೋನಾ ಜಾಗತಿಕ ಸಾಂಕ್ರಾಮಿಕ : ಮನಸ್ಸನ್ನು ಸ್ಥಿರಗೊಳಿಸುವುದು ಹೇಗೆ ? – ಭಾಗ ೨’ ಈ ಆನ್‌ಲೈನ್ ವಿಶೇಷ ಚರ್ಚಾಕೂಟ. ಈ ಕಾರ್ಯಕ್ರಮವನ್ನು ‘ಫೇಸ್‌ಬುಕ್’ನಲ್ಲಿ ಮತ್ತು ‘ಯೂಟ್ಯೂಬ್’ ಮೂಲಕ ೭೮೨೭ ಜನರು ವೀಕ್ಷಿಸಿದರು.)


ನಿಮ್ಮ ವಿಶ್ವಾಸಿ,
ಶ್ರೀ. ರಮೇಶ ಶಿಂದೆ
ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
(ಸಂಪರ್ಕಕ್ಕೆ: 9987966666)

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಧನಕನಕ‌ ನವರತ್ನ ನಿನ್ನೊಡವೆಯಲ್ಲಬಿಡು ನಿನ್ನೊಡವೆಯೆಂಬುವುದು ಜ್ಞಾನರತ್ನ ಈ ರತ್ನ ಧರಿಸಿದೊಡೆ ಲೋಕದಲಿ‌ ನಿನಗಿಂತ ಸಿರಿವಂತರಾರಿಲ್ಲ - ಎಮ್ಮೆತಮ್ಮ ||೧೩೧|| ಶಬ್ಧಾರ್ಥ ಧನಕನಕ = ಹಣ ಬಂಗಾರ. ನವರತ್ನ = ಒಂಬತ್ತು ಹರಳು ತಾತ್ಪರ್ಯ ಗಳಿಸಿರುವ ಹಣ‌...
- Advertisement -

More Articles Like This

- Advertisement -
close
error: Content is protected !!
Join WhatsApp Group