- Advertisement -
ತೇಜಸ್ಸು !!
ಮಾಡಿದ್ದು ಪ್ರಖರ
ಮಹೋನ್ನತ ಕಾರ್ಯ
ಹೋದ ಜೀವ ಬರುವದಿಲ್ಲ ಬಿಡಿ
ಅದೆಷ್ಟೋ ಜೀವಗಳಿಗೆ ನೀನಾದೆ ತೇಜ.
ಅಗೋ ಆ ಭಂಡರೋ
ಮತಾವಲಂಬಿ ಠಕ್ಕರೋ
ಆಗಲೇ ಅವರ ನಾಲಿಗೆಯೋ
ಕೆನ್ನಾಲಿಗೆಯಾಗಿ ದೌಡಾಯಿಸುತ್ತಿವೆ
ನಿನ್ನ ತೇಜಸ್ಸಿಗೆ
ಲಂಡರ ಅಂಡಿಗೆ ಉರಿಯಾಗಿ.
ಅಲ್ಲಿರುವವರೆಲ್ಲರ ದೋಸೆ ತೂತುಗಳೇ
ಮಿಲಾಪಿ ಕುಸ್ತಿಯವರೇ
ಪಗಡೆ ಆಟವೂ ಅಲ್ಲಡಗಿದೆ !
ಲಫಂಗ-ಡಕಾಯಿತ-ಅನಕ್ಷರಸ್ತ ಪಡೆಯೇ
ಹರಿಯಾಯಲು
ದೀಪದ ಬೆಳಕಿಗೆ ಕಾಡಿಗೆ ಕಾರಣ !!
- Advertisement -
ನಿನ್ನ ದೇಶಾಭಿಮಾನ ಬೆಳಗಲಿ
ನಿನ್ನ ಪ್ರದೇಶಾಭಿಮಾನ ಬೆಳಗಲಿ
ನಿನ್ನ ಸ್ವಾಭಿಮಾನ ಬೆಳಗಲಿ
ನಿನ್ನ ಸೇವೆ ಪ್ರಜ್ವಲಿಸಲಿ
ಪುಂಡು-ಪೋಕರಿಗಳ ಮಧ್ಶ
ತೇಜಸ್ವಿ ಸೂರ್ಯ
ನೊಂದವರಿಗೆ ಬೆಳಕಾಗಲಿ!!
ಅಮರ್ಜಾ
ಅಮರೇಗೌಡ ಪಾಟೀಲ ಜಾಲಿಹಾಳ
ಬು.ಬ.ನಗರ, ಕುಷ್ಟಗಿ
9900504639