ಲೂಸಿ ಸಾಲ್ಡಾನಾ ಕೇವಲ ಒಂದು ವ್ಯಕ್ತಿ ಅಲ್ಲ! ಅದೊಂದು ಅದ್ಭುತ ಶಕ್ತಿ: ಗಿರೀಶ ಪದಕಿ

Must Read

ಧಾರವಾಡ: ” ಲೂಸಿ ಸಾಲ್ಡಾನ ಕೇವಲ ಒಂದು ವ್ಯಕ್ತಿ ಯಲ್ಲ. ಅದೊಂದು ಅದ್ಭುತ ಶಕ್ತಿ.ಗಂಧದ ಕೊರಡನ್ನು ತೇದಷ್ಟು ಪರಿಮಳ ಹೇಗೆ ಹೊರಹೊಮ್ಮುವುದೋ, ವೈಯಕ್ತಿಕ ಜೀವನದಲ್ಲಿ ಅಪಾರ ನೋವನ್ನುಂಡರೂ ಸ್ವಂತ ಪರಿಶ್ರಮದಿಂದ ಜ್ಞಾನ ಸಂಪಾದಿಸಿ ಶಿಕ್ಷಕಿಯಾಗಿ ಸಾರ್ಥಕ ಸೇವೆಯನ್ನು ಸಲ್ಲಿಸಿ, ನಿವೃತ್ತಿಯ ನಂತರವೂ ಪಿಂಚಣಿ ಹಣದಲ್ಲಿ ಲಕ್ಷಾಂತರ ರೂ. ಗಳನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ದತ್ತಿಯನ್ನು ನೀಡಿರುವ ಕಾರ್ಯ ಇಡೀ ನಾಡಿಗೆ ಮಾದರಿಯಾದದ್ದು,ಲೂಸಿ ಸಾಲ್ಡಾನಾ ಸೇವಾ ಸಂಸ್ಥೆಯ ವತಿಯಿಂದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿರುವುದು ತುಂಬಾ ಶ್ಲಾಘನೀಯವಾದುದು.” ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಧಾರವಾಡ ಶಹರ ವಲಯದ ಕ್ಷೇತ್ರಶಿಕ್ಷಣಾಧಿಕಾರಿ ಗಿರೀಶ ಪದಕಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಅವರು ಧಾರವಾಡದ ದುರ್ಗಾಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೆಯ ತರಗತಿಗೆ ದಾಖಲಾದ ಎಲ್ಲಾ ಮಕ್ಕಳಿಗೆ ಹಾಗೂ ಪ್ರತಿಭಾವಂತ ಮಕ್ಕಳಿಗೆ ಲೂಸಿ ಸಾಲ್ಡಾನ ಅವರು ನೀಡಿದ ಕಲಿಕಾ ಸಾಮಗ್ರಿಗಳನ್ನು ಮತ್ತು ಸ್ಕೂಲ್ ಬ್ಯಾಗ ವಿತರಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಈ ಸಂದರ್ಭದಲ್ಲಿ ಲೂಸಿ ಸಾಲ್ಡಾನ ಅವರ ಜೀವನ ವೃತ್ತಾಂತದ ಚಲನಚಿತ್ರ ಬದುಕು ಬಂಡಿ ನಿರ್ದೇಶಕರಾದ ಬಾಬಾಜಾನ ಮುಲ್ಲಾ,ಮಾತನಾಡಿ “ಸಾಲ್ಡಾನ ಮಾತೆ ಬಡ ಮಕ್ಕಳ ಆಶಾಕಿರಣ ಲಕ್ಷಾಂತರ ರೂಪಾಯಿ ದತ್ತಿನಿಧಿ ಯನ್ನು ನಾಡಿನಾದ್ಯಂತ ಶಾಲೆಗಳಿಗೆ ನೀಡುವ ಜೊತೆಗೆ ನಿವೃತ್ತಿ ಯಾದರೂ ಪ್ರತಿ ದಿನ ಮನೆಯ ಹತ್ತಿರ ದ ಶಾಲಾ ಮಕ್ಕಳಿಗೆ ಪಾಠ ಹೇಳುವ ಮೂಲಕ ಬರುತ್ತಿರುವ ಸಾಮಾಜಿಕ ಸೇವಾ ಮನೋಭಾವದ ಅವರ ಬದುಕು ನಮಗೆ ಮಾದರಿ” ನುಡಿದರು.

ಚಿತ್ರದ ಸಾಹಿತಿ ಬರಹಗಾರ ಸವದತ್ತಿ ತಾಲೂಕಿನ ವಿಕಲಚೇತನ ಮಕ್ಕಳ ಸಂಪನ್ಮೂಲ ಶಿಕ್ಷಕ ವಾಯ್ ಬಿ ಕಡಕೋಳ,ಮಾತನಾಡಿ ” ಈ ಶಾಲೆಯ ಎಸ್. ಡಿ. ಎಂ. ಸಿ ಸದಸ್ಯರ ತನು ಮನ ಧನದಿಂದ ಶಾಲೆಯ ಅಭ್ಯುದಯಕ್ಕಾಗಿ ದುಡಿಯುತ್ತಿರುವ ಅವರ ಸೇವಾ ಮನೋಭಾವ ನಿಜಕ್ಕೂ ಅಭಿನಂದನಾರ್ಹ. ಇಂತಹ ಶಾಲೆಯ ಶಿಕ್ಷಕರು ಕೂಡ ನಿಸ್ವಾರ್ಥ ಮನೋಭಾವನೆ ಯಿಂದ ದುಡಿಯುತ್ತಿರುವುದು ಅಭಿನಂದನಾರ್ಹ ” ಎಂದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ನಂತರ ಲೂಸಿ ಸಾಲ್ಡಾನ ಸಂಸ್ಥೆಯ ಗೌರವಾಧ್ಯಕ್ಷರು ಭೀಮಪ್ಪ ಕಾಸಾಯಿ,ಮಾತನಾಡಿದರು, ಶಾಲಾಭಿವೃದ್ದಿ ಸಮಿತಿಯ ಉಪಾದ್ಯಕ್ಷ ಗದಿಗೆಪ್ಪ ಈಟಿ ,ಅಶೋಕ ಗರಗದ ,ಮಲಿಕ ಬಿಸ್ತಿ,ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ಅದ್ಯಕ್ಷರಾದ ಎಲ್ ಐ ಲಕ್ಕಮ್ಮನವರ, ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ತಿಗಡಿ, ಸಂಪನ್ಮೂಲ ಶಿಕ್ಷಕಿ ವಿ ಎನ್ ಕೀರ್ತಿವತಿ, ರುದ್ರೇಶ ಕುರ್ಲಿ, ಅಜೀತಸಿಂಗ ರಜಪೂತ ಮುಂತಾದವರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಅಕ್ಷರತಾಯಿ ಲೂಸಿ ಸಾಲ್ಡಾನ ಅವರನ್ನು ಶಾಲೆಯ ವತಿಯಿಂದ ಸತ್ಕರಿಸಲಾಯಿತು ಹಾಗೂ ಹುಬ್ಬಳ್ಳಿಯ ಶಿಕ್ಷಕ ಸಾಹಿತಿ ಶ್ರೀ ಯಲ್ಲಪ್ಪ ಕರೆಣ್ಣವರ, ಗಾಯಕ ಶ್ರೀ ಮೈಲಾರಿ ಸುಣಗಾರ ಇವರನ್ನು ಲೂಸಿ ಸಾಲ್ಡಾನ ಸೇವಾ ಸಂಸ್ಥೆಯ ವತಿಯಿಂದ ಸತ್ಕರಿಸಲಾಯಿತು.

ಎಸ್ ಡಿ ಎಂ ಸಿ ಅದ್ಯಕ್ಷ ಉಡಚಪ್ಪ ಚಲವಾದಿ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಸಂಪನ್ಮೂಲ ಶಿಕ್ಷಕಿ ವಿ ಎನ್ ಕೀರ್ತಿವತಿ ಮಾತನಾಡಿದರು,, ಶಿಕ್ಷಕಿ ಸಿ ಡಿ ಬುಯ್ಯಾರ ಸ್ವಾಗತಿಸಿದರು, ಶಾಲಾ ಮುಖ್ಯ ಗುರು ನಂದಪ್ಪಗೌಡ ದ್ಯಾಪೂರ ನಿರೂಪಿಸಿದರು. ಚಂದ್ರಶೇಖರ ತಿಗಡಿ ವಂದಿಸಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group