spot_img
spot_img

ಇಲ್ಲಿ ‘ಪ್ರಭು’ ಅಲ್ಲಿ ‘ಭಗವಂತ’ ಇಬ್ಬರಿಗೂ ಮಂತ್ರಿ ಭಾಗ್ಯ, ಕಲ್ಲರಳಿ ಹೂವಾದ ರೋಚಕ ಕಥೆ…!

Must Read

- Advertisement -

ಬೀದರ: ಅವರಿಬ್ಬರೂ ಬೀದರ್ ಜಿಲ್ಲೆಯ ರಾಜಕೀಯದಲ್ಲಿ ಹೊಸಬರು. ಬೀದರ್ ಬಿಜೆಪಿಯ ಜೋಡೆತ್ತುಗಳೆಂದರೆ ತಪ್ಪಾಗದು. ಒಂದು ದಶಕದಲ್ಲೆ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡು‌ ರಾಜಕೀಯ ಮನೆತನದ ಬೆನ್ನೆಲುಬೆ ಇಲ್ಲದೆ ಕಡಿಮೆ ಅವಧಿಯಲ್ಲಿ ಇಬ್ಬರು ಮಂತ್ರಿಗಳಾದರು. ಒಬ್ಬರು ರಾಜ್ಯ ಸಂಪುಟಕ್ಕೆ ಸೇರಿದ್ದರೆ ಮತ್ತೊಬ್ಬರು ಕೇಂದ್ರ ಸಂಪುಟದ ಖಾತೆ ಹೆಗಲಿಗೆ ಎರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದ ಹಾಗೆ ಬೀದರ್ ಜಿಲ್ಲೆಯ ಔರಾದ್ ವಿಧಾನಸಭೆ ಕ್ಷೇತ್ರದ ಶಾಸಕ ಪ್ರಭು ಚವ್ಹಾಣ ಹಾಗೂ ಸಂಸದ ಭಗವಂತ ಖೂಬಾ ಅವರ ಜೋಡಿ ನಡೆದುಕೊಂಡು ಬಂದ ದಾರಿ ರೋಚಕವಾಗಿದೆ. ಇಬ್ಬರು ಔರಾದ್ ನವರೆ ಆಗಿದ್ದು ಜಿಲ್ಲಾ ರಾಜಕಾರಣದಲ್ಲಿ ಮೊದಲು ಗುರುತಿಸಿಕೊಂಡು ರಾಜ್ಯ ರಾಜಕಾರಣ ಈಗ ಕೇಂದ್ರ ಹೀಗೆ ಎಲ್ಲಾ ಮೆಟ್ಟಿಲುಗಳು ಯಶಸ್ವಿಯಾಗಿ ಹತ್ತಿದ್ದಾರೆ. ಇದೀಗ ಸಂಸದ ಭಗವಂತ ಖೂಬಾ ಅವರು ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

2008 ರಲ್ಲಿ ಮುಂಬೈ ಮೂಲದ ಉದ್ಯಮಿಯಾಗಿದ್ದ ಪ್ರಭು ಚವ್ಹಾಣ ಅವರನ್ನು ಔರಾದ್ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಅವರ ಗೆಲುವಿಗೆ ಬೆನ್ನೆಲುಬಾಗಿ ನಿಂತಿದ್ದ ಭಗವಂತ ಖೂಬಾ ಅವರು ಪಕ್ಷದ ಜಿಲ್ಲಾ ಉಪಾಧ್ಯಕ್ಷರಾಗಿದ್ದರು ಸಾಮಾನ್ಯ ಕಾರ್ಯಕರ್ತನಂತೆ ಕ್ಷೇತ್ರದ ಲೆಕ್ಕಾಚಾರ ಹಾಕಿಕೊಟ್ಟು ದಿಗ್ಗಜ ನಾಯಕರನ್ನು ಸೊಲಿಸಿ ಪ್ರಭು ಚವ್ಹಾಣ ಅವರ ಗೆಲುವಿಗೆ ಸಾಕ್ಷಿಯಾದರು. ಚವ್ಹಾಣ ಅವರು ಸತತ ಮೂರನೆ ಬಾರಿ ಗೆಲುವಿನಲ್ಲಿ ಸಂಸದ ಭಗವಂತ ಖೂಬಾ ಅವರ ಪಾತ್ರ ದೊಡ್ಡದು ಎಂಬುದು ಜಿಲ್ಲೆಯಾದ್ಯಂತ ಚರ್ಚೆಯಲ್ಲಿರುವುದು ಸ್ಮರಣೀಯ.

- Advertisement -

ಅದರಂತೆ 2014 ಹಾಗೂ 2019 ರ ಎರಡು ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ದಿ. ಧರಂಸಿಂಗ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಂತಹ ದಿಗ್ಗಜ ನಾಯಕರ ಎದುರಲ್ಲಿ ಭರ್ಜರಿ ಗೆಲುವು ಸಾಧಿಸುವಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಮಾಡಿದ ಕೆಲಸ ಸಾಕಷ್ಟಿದೆ.

ಇಬ್ಬರು ಹೊಸಬರು ಮಂತ್ರಿಯಾದ್ರು:

ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಏಳು ಬೀಳುಗಳಿಂದ ಸಮ್ಮಿಶ್ರ ಸರ್ಕಾರ ಪತನದ ನಂತರ ಅಸ್ತಿತ್ವಕ್ಕೆ ಬಂದ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದ ಸಂಪುಟದಲ್ಲಿ ಆಶ್ವರ್ಯಕರ ಬೆಳವಣಿಗೆಯೊಂದರಲ್ಲಿ ಪ್ರಭು ಚವ್ಹಾಣ ಅವರು ಪಶು ಸಂಗೋಪನೆ ಖಾತೆಯೊಂದಿಗೆ ಸಚಿವರಾದರು. ಅದರಂತೆ ಇಂದು ದೇಶದ ರಾಜಕೀಯ ಜಟಿಲವಾದರೂ ಘಟಾನುಘಟಿ ನಾಯಕರ ರೇಸ್ ನಲ್ಲಿ ಭಗವಂತ ಖೂಬಾ ಅವರು ಪ್ರಧಾನಿ ನರೇಂದ್ರ ಮೊದಿ ಅವರ ಸಂಪುಟದ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವುದು ವಿಶೇಷ.

- Advertisement -

ಇಬ್ಬರು ನಾಯಕರಲ್ಲಿ ವೈಮನಸ್ಸು:

ಸಚಿವ ಪ್ರಭು ಚವ್ಹಾಣ ಹಾಗೂ ಕೇಂದ್ರ ಸಚಿವ ಭಗವಂತ ಖೂಬಾ ಅವರ ನಡುವೆ ಕಳೆದ ನಾಲ್ಕಾರು ವರ್ಷಗಳಿಂದ ಸಾಕಷ್ಟು ವೈಮನಸ್ಸುಗಳು ಬೆಂಕಿ ಕೆಂಡದಂತೆ ಧಗ ಧಗ ಉರಿಯುತ್ತಿವೆ. ಅದೆಷ್ಟೊ ಬಾರಿ ಪಕ್ಷದ ವೇದಿಕೆಯಲ್ಲೆ ಅಸಮಾಧಾನ ಬಯಲಾಗಿವೆ. ಆದರೂ ಪಕ್ಷದ ಕೆಲಸಗಳು ಬಂದಾಗ ಈ ಜೋಡೆತ್ತುಗಳು ಸಕ್ರಿಯವಾಗಿ ಕೆಲಸ ಮಾಡುತ್ತಲೆ ಹೊರ ಬರ್ತಿರುವುದರಿಂದ ಯಶಸ್ಸು ಇವರ ಬೆನ್ನತ್ತಿ ಬಂದಿದೆ ಅಂತಾರೆ ಜನರು.

ಇಬ್ಬರು ಒಂದೇ ತಾಲೂಕಿನವರು:

ಪ್ರಭು ಚವ್ಹಾಣ ಹಾಗೂ ಭಗವಂತ ಖೂಬಾ ಇಬ್ಬರು ನಾಯಕರು ಬೀದರ್ ಜಿಲ್ಲೆಯ ಔರಾದ್ ತಾಲೂಕಿನವರೆ. ಔರಾದ್ ಪಟ್ಟಣದ ಬುಟ್ಟೆ ಗಲ್ಲಿ ನಿವಾಸಿ ಭಗವಂತ ಖೂಬಾ ಆದ್ರೆ ಪ್ರಭು ಚವ್ಹಾಣ ಅವರು ಔರಾದ್ ತಾಲೂಕಿನ ಘಮಸುಬಾಯಿ ತಾಂಡದ ನಿವಾಸಿಗರು. ಇಬ್ಬರು ನಾಯಕರು ಜಿಲ್ಲಾ ರಾಜಕಾರಣದಲ್ಲಿ ಅಂಬೆಗಾಲು ಹಾಕಿದ ನಂತರ ಸತತವಾಗಿ ಬೆಳೆಯುತ್ತಲೆ ನಡೆಯುತ್ತಿರುವುದು ವಿಶೇಷ.

ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಮತ ಯಾರಿಗಾದರೂ ಹಾಕಿ ಆದರೆ NOTA ಕ್ಕೆ ಹಾಕಬೇಡಿ !

ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ನೀವು ಯಾವುದೋ ಒಂದು ಗೊಂದಲದಲ್ಲಿ ಇರುತ್ತೀರಿ. ವಿವಿಧ ಪಕ್ಷಗಳು ತಮ್ಮ ಪ್ರಚಾರದ ವೈಖರಿಯಿಂದ ನಿಮ್ಮನ್ನು ಹಿಡಿದಿಟ್ಟುಕೊಂಡಿವೆ. ಒಂದು ಪಕ್ಷದ ಪ್ರಚಾರ ಸಭೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group