ಕವನ – ಕಿರಣ ಯಲಿಗಾರ

Must Read

ಗುರಿ ಮತ್ತು ಕನಸು

ಕನಸು ಕಾಣುತ ಯೋಜನೆಗಳ
ಬೆನ್ನೇರಿ
ಬೇರೆ ಆಸೆಗಳಿಗೆ ಬಿದ್ದು
ಜಾರದಿರಿ
ಅಪಮಾನಗಳಿಗೆ ನೀವೇಕೆ
ಅಂಜುವಿರಿ
ಗೆದ್ದರೆ ಜೀವನದಲ್ಲಿ ನಕ್ಷತ್ರ
ಆಗುವಿರಿ
ಸೋತರೆ ಇನ್ನೊಬ್ಬರಿಗೆ
ಪಾಠವಾಗುವಿರಿ
ಕೇವಲ ಕನಸು ಕಾಣುತ
ಮಲಗಬೇಡಿರಿ
ಜೀವನದಲ್ಲಿ ಎಂದೆಂದು
ಸಾಧಕರಾಗಿರಿ
ಕಳೆದ ಸಮಯ ಬಾರದು
ಮರೆಯದಿರಿ
ನಮ್ಮ ಹಣೆಬರಹವನ್ನು
ದೂಷಿಸದಿರಿ
ಹೋರಾಡಿ ಆತ್ಮವಿಶ್ವಾಸದ
ರಥವನ್ನೇರಿ
ಕುಳಿತು ಆಗಬೇಡಿ
ಸೋಮಾರಿ
ಸಾಧನೆಯ ಮೆಟ್ಟಿಲನ್ನು
ಸಾವಧಾನವಾಗಿ ಏರಿ
ಒಂದೂಂದೆ ಹೆಜ್ಜೆ ಇಡುತ
ಮುಟ್ಟು ನೀ ಗುರಿ


ವೀರ ಯೋಧರು

ಕಾರ್ಗಿಲ್ ಕಣಿವೆಯ
ಕತ್ತಲಲ್ಲಿ
ಮೈಕೊರೆಯುವ
ಚಳಿಯಲ್ಲಿ
ಸುಂಯ್ ಎಂದು ಸೀಳಿ
ಬರುವ ಶೆಲ್ ದಾಳಿಗೆ
ನಡುಗಬೇಕು ಎಂಥವರ
ಎದೆ ಗುಂಡಿಗೆ
ಬಂದೂಕು ಹಿಡಿದ ಕೈ
ಬೆರಳುಗಳು
ಸಿದ್ಧವಾಗಿವೆ ವೈರಿಗಳ
ಎದೆ ಸೀಳಲು
ವೈರಿಗಳ ಸರ-ಸರ
ಸಪ್ಪಳಕೆ
ಗರ್ಜಿಸಿತು ಸೈನಿಕರ
ತುಪಾಕಿ
ಉರುಳಿದವು ಶತ್ರುಗಳ
ಹೆಣಗಳು ಧರೆಗೆ
ವಿಮೋಚನೆ ಸಿಕ್ಕಿತು
ಕಾರ್ಗಿಲ್ ಭೂಮಿಗೆ
ದೇಶ ನಮಿಸಿತ್ತು ಎಲ್ಲ
ವೀರ ಯೋಧರಿಗೆ
ಹೆಮ್ಮೆಯ ನಮ್ಮ ಭಾರತಾಂಬೆಯ
ಪುತ್ರರಿಗೆ

ಕಿರಣ.ಯಲಿಗಾರ
ಮುನವಳ್ಳಿ
9972370802

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group