spot_img
spot_img

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

Must Read

spot_img
- Advertisement -

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ 1ರಲ್ಲಿವಿದ್ಯಾರ್ಥಿಗಳಿಗೆ ಬಿಡ್ರೆ ಸರಕಾರಿ ಸೌಲಭ್ಯ ಸಿಗುತ್ತಿಲ್ಲ ಎಂದು ರಾಜ್ಯ ಪಿಂಜಾರ ಸಮಾಜದ ಅದ್ಯಕ್ಷ ಅಬ್ದುಲ್ ರಜಾಕ್ ನದಾಫ್ ಹೇಳಿದರು.

ಪಟ್ಟಣದ ಅಪ್ಪಾಜಿ ಹೋಟೆಲಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೃಹತ್ ಪ್ರತಿಭಟನೆಯ ಫಲವಾಗಿ ಸಮುದಾಯದ ಪ್ರಮುಖ ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆಗಳನ್ನು ಆಯಾ ಇಲಾಖೆಗಳ ಮುಖಾಂತರ ಸರಕಾರ ಬೇಡಿಕೆ ಈಡೇರಿಕೆಯ ಆದೇಶ ಪತ್ರವನ್ನು  ನೀಡಿದೆ. ಅದರಲ್ಲಿ ಪಿಂಜಾರ, ನದಾಫ, ಮನ್ಸೂರಿ, ದೂದೇಕುಲ ಸಮುದಾಯದ ಹಾಸಿಗೆ ಕೂಲಿ ಕಾರ್ಮಿಕರಿಗೆ ಕಾರ್ಮಿಕರ ಕಾರ್ಡನ್ನು ವಿತರಿಸುವಂತೆ. ಹಾಗೂ  ಬೆಂಗಳೂರ ಜಿಲ್ಲೆಯಲ್ಲಿರುವ ಈ ಸಮುದಾಯದವರಿಗೆ ಪ್ರವರ್ಗ 1 ರ ಪ್ರಮಾಣ ಪತ್ರ ನೀಡುವುದರ ಕುರಿತು ಸರಕಾರ ತಕ್ಷಣ ಸ್ಪಂದಿಸಿ ಆದೇಶ ಪತ್ರವನ್ನು ಮಹಾಮಂಡಳದ ಕೇಂದ್ರ ಕಛೇರಿಗೆ ರವಾನಿಸಿದ್ದಾರೆ.

ಮಹಾಮಂಡಳದ ಅತೀ ಮುಖ್ಯ ಹಾಗೂ  ಪ್ರಮುಖ ಬೇಡಿಕೆಯಾದ ಪಿಂಜಾರ ಅಭಿವೃದ್ದಿ ನಿಗಮ ಸ್ಥಾಪನೆ ಬೇಡಿಕೆ ಹಾಗೆಯೇ ಉಳಿದಿದ್ದು ಬರಲಿರುವ ದಿನಮಾನದಲ್ಲಿ ಸಮುದಾಯದ ಎಲ್ಲರು ಸೇರಿ ಇನ್ನುಳಿದ ಸಮುದಾಯದ ಸಹಕಾರದೊಂದಿಗೆ ಪ್ರಮುಖ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಮತ್ತೋಮ್ಮೆ ಮನವಿ ಸಲ್ಲಿಸುವ ಮೂಲಕ ಪಡೆದುಕೊಳ್ಳಬೇಕಾಗಿದ್ದು ರಾಜ್ಯದಲ್ಲಿರುವ ಪಿಂಜಾರ, ನದಾಫ, ಮನ್ಸೂರಿ, ದೂದೇಕುಲ ಸಮುದಾಯದವರು ಸರಕಾರ ಈಡೇರಿಸಿದಂತಹ ಬೇಡಿಕೆಗಳ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

- Advertisement -

ಅಭಿನಂದನೆ: ಸರಕಾರ ನಮ್ಮ ಮೂರು ಬೇಡಿಕೆಯಲ್ಲಿ ಎರಡು ಬೇಡಿಕೆಗಳನ್ನು ಈಡೇರಿಸಿರುವುದಕ್ಕೆ ಮಹಾಮಂಡಳದಿಂದ ಸರಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಹಾಗೂ ಈ ಪ್ರತಿಭಟನೆಯಲ್ಲಿ ಭಾಗವಹಿಸಿದಂತಹ ವಿವಿಧ ಸಂಘಟನೆಯ ಪದಾಧಿಕಾರಿಗಳು ಹಾಗೂ ಮುಖಂಡರಿಗೆ ಮಹಾಮಂಡಳದಿಂದ ತುಂಬಾ ಹೃದಯದ ಕೃತಜ್ಞತೆಗಳನ್ನು ಸಲ್ಲಿಸಿದರು.

ಇದೆ ಸಂದರ್ಭದಲ್ಲಿ ಡಾ. ದಸ್ತಗಿರಿ ಮುಲ್ಲಾ, ರಫೀಕ್ ಅರಳಗುಂಡಗಿ, ಗರಿಬಸಾಬ್ ನದಾಫ್,ಪೈಗಂಬರ್ ನದಾಫ್,ಶಾರುಖ್ ನದಾಫ್,ಜಾಕಿರ್ ನದಾಫ್ ಇದ್ದರು

- Advertisement -
- Advertisement -

Latest News

ನ.೨೭ರಂದು ಬಲಮುರಿ ಗಣಪತಿ ಪ್ರಾಣ ಪ್ರತಿಷ್ಠಾಪನೆ

ಮೈಸೂರು -ನಗರದ ಗೋಕುಲಂ ೧ನೇ ಹಂತ ಮುಖ್ಯರಸ್ತೆ, ವಿ.ವಿ.ಮೊಹಲ್ಲಾದಲ್ಲಿರುವ ಶ್ರೀರಾಮ ಮಂದಿರದಲ್ಲಿ ನ.೨೭ರಂದು ಬುಧವಾರ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಬಲಮುರಿ ಗಣಪತಿ ಪ್ರಾಣ ಪ್ರತಿಷ್ಠಾಪನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರ...
- Advertisement -

More Articles Like This

- Advertisement -
close
error: Content is protected !!
Join WhatsApp Group