ಪಟ್ಟಣದ ಸ್ವಚ್ಚತೆಗೆ ಎಲ್ಲರ ಸಹಕಾರ ಅಗತ್ಯವಾಗಿ ಬೇಕು – ಆನಂದ ಮಾಮನಿ

Must Read

ಸವದತ್ತಿ: “ಪಟ್ಟಣದ ಸ್ವಚ್ಚತೆಗೆ ಎಲ್ಲರ ಸಹಕಾರ ಅಗತ್ಯವಾಗಿ ಬೇಕು ಸ್ವಚ್ಛವಾದ ವಾತಾವರಣ ಎಲ್ಲರಿಗೂ ಅವಶ್ಯವಾಗಿ ಬೇಕು. ಆ ನಿಟ್ಟಿನಲ್ಲಿ ಸಾರ್ವಜನಿಕರು ಪುರಸಭೆಯವರು ಮಾಡುವ ಕಾರ್ಯಕ್ಕೆ ಸಹಕಾರ ನೀಡಬೇಕು. ಪುರಸಭೆಯವರು ನೀಡುತ್ತಿರುವ ಬಕೀಟುಗಳಲ್ಲಿ ತಮ್ಮ ಮನೆಯ ಕಸವನ್ನು ಹಾಕಿ ನಂತರ ಕಸ ತುಂಬಿಸಿಕೊಳ್ಳುವ ವಾಹನ ತಮ್ಮ ಮನೆ ಬಾಗಿಲಿಗೆ ಬಂದಾಗ ಅದರಲ್ಲಿ ಕಸ ಹಾಕಬೇಕು ಸ್ವಚ್ಛವಾದ ವಾತಾವರಣ ನಿರ್ಮಿಸಲು ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿ ಬೇಕು” ಎಂದು ವಿಧಾನ ಸಭೆ ಉಪಸಭಾಧ್ಯಕ್ಷ ಆನಂದ ಮಾಮನಿಯವರು ಮಾತನಾಡಿದರು

ಅವರು ಪುರಸಭೆ ಮುಂಭಾಗದಲ್ಲಿರುವ ದೀವಟಗೇರಿ ಓಣಿಯಲ್ಲಿ ಪುರಸಭೆಯವರು ಏರ್ಪಡಿಸಿದ ‘ಡಸ್ಟ ಬಿನ್ ವಿತರಣಾ ಕಾರ್ಯಕ್ರಮ’ದಲ್ಲಿ ಸಾರ್ವಜನಿಕರಿಗೆ ಕಸ ಹಾಕುವ ಬಕೀಟುಗಳನ್ನು ವಿತರಿಸಿ ನಂತರ ಮಾಧ್ಯಮದವರೂಂದಿಗೆ ಮಾತನಾಡಿದರು

ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ. ಉಪಾಧ್ಯಕ್ಷ ದೀಪಕ ಜಾನ್ವೇಕರ. ತಹಶೀಲ್ದಾರ ಪ್ರಶಾಂತ ಬಿ ಪಾಟೀಲ. ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಎಮ್ ಚನ್ನಪ್ಪನವರ.ಪುರಸಭೆ ಸದಸ್ಯರಾದ ಸಂಗಮೇಶ ಹಾದೀಮನಿ. ದರೆಪ್ಪ ಮಡ್ಲಿ ಲಕ್ಷ್ಮಣರಾವ ಕುಲಕರ್ಣಿ. ಬಾಬು ಕಾಳೆ. ಆಯ್ ಪಿ ಪಾಟೀಲ. ದ್ಯಾಮಣ್ಣ ಸುತಗಟ್ಟಿ. ಶಿವನಗೌಡಾ ಪಾಟೀಲ. ಸೇರಿದಂತೆ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

Latest News

ಮನುಕುಲದ ಉದ್ಧಾರಕ್ಕಾಗಿ ವಚನಗಳು ಇವೆ – ಶಾಸಕ ಮನಗೂಳಿ

ಸಿಂದಗಿ; ೧೨ ನೇ ಶತಮಾನದಲ್ಲಿ ಶರಣರು ಸಂತರು ಜನಜಾಗೃತಿ ಮಾಡುವ ಮೂಲಕ ಮನಕುಲವನ್ನು ಉದ್ದಾರ ಮಾಡಲು ವಚನಗಳನ್ನು ಬರೆದಿದ್ದಾರೆ ಅವುಗಳನ್ನು ಓದುವ ಪ್ರವೃತ್ತಿಯನ್ನು ಬೆಳೆಸುವ ಕಾರ್ಯಕ್ಕೆ...

More Articles Like This

error: Content is protected !!
Join WhatsApp Group