ಲೇಖಕಿಯರ ಸಂಘದ ವತಿಯಿಂದ ದತ್ತಿನಿಧಿ ಕಾರ್ಯಕ್ರಮ

Must Read

ಬೆಳಗಾವಿ – ಇದೇ ದಿ.16 ರಂದು ಸೋಮವಾರ ಸಂ.6 ಗಂಟೆಗೆ ಬೆಳಗಾವಿಯ ಕಾರಂಜಿ ಮಠದಲ್ಲಿ ‘ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ’ ಮತ್ತು ‘ಕಾರಂಜಿಮಠ ಬೆಳಗಾವಿ’ ಇವರ ಸಂಯುಕ್ತ ಆಶ್ರಯದಲ್ಲಿ ಲಿಂ. ಶ್ರೀ ಉಳವೀಶ ಹುಲೆಪ್ಪನವರಮಠ ಇವರ ಸ್ಮರಣಾರ್ಥ ದತ್ತಿನಿಧಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಾರಂಜಿಮಠದ ಶ್ರೀ.ಮ. ನಿ.ಪ್ರ ಗುರುಸಿದ್ಧ ಮಹಾಸ್ವಾಮಿಗಳು ವಹಿಸುವರು. ಅಧ್ಯಕ್ಷತೆಯನ್ನು ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೋಳ್ಳಿ ವಹಿಸುವರು.

ವಿಶೇಷ ಅತಿಥಿ ಉಪನ್ಯಾಸಕರಾಗಿ ಸಾಹಿತಿಗಳಾದ ಸುನಂದಾ ಎಮ್ಮಿ ಮತ್ತು ಹಮೀದಾಬೇಗಂ ದೇಸಾಯಿ ಭಾಗವಹಿಸುವರು. ಇದೇ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ದತ್ತಿದಾನಿಗಳು ಮತ್ತು ಹಿರಿಯ ಸಾಹಿತಿಗಳಾದ ಗುರುದೇವಿ ಹುಲೆಪ್ಪನವರಮಠ, ಸಾಹಿತಿ ಬಿ.ಎಸ್. ಗವಿಮಠ, ಇಂದಿರಾ ಮೋಟೆಬೆನ್ನೂರ ಉಪಸ್ಥಿತರಿರುವರು ಎಂದು ಕಾರ್ಯದರ್ಶಿಗಳಾದ ರಾಜನಂದಾ ಗಾರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...

More Articles Like This

error: Content is protected !!
Join WhatsApp Group