ವೃದ್ಧನ ಹೃದಯ
- Advertisement -
ಆ ದಾರಿಯ ಉದ್ದಕ್ಕೂ ಕೇಕೆ ಹಾಕಿತು ವೃದ್ಧನ ಹೃದಯ ಸಂಬಂಧಗಳ ನೆನೆದು ಕಂಬನಿಯ ಮಿಡಿದು
ನಾನೇ ಸಾಕಿದ ಮಕ್ಕಳು ನೋಡಿಕೊಳ್ಳಲು ಆಗದೆ ಹೊರದಬ್ಬಿದ್ದಾರೆ ಜವಾಬ್ದಾರಿ ಮರೆತು ಹಣದ ಬೆನ್ನುಹತ್ತಿ
ಸಪ್ತಪದಿ ತುಳಿದು ನನ್ನೊಂದಿಗೆ ನಡೆದು ಬಂದವಳು ನನ್ನನ್ನು ಯಾವತ್ತೋ ಬಿಟ್ಟು ಬಾರದ ಲೋಕಕ್ಕೆ ಹೊರಟು ಹೋದಳು ಭಯಾನಕ ಕಾಯಿಲೆಗೆ ತುತ್ತಾಗಿ
- Advertisement -
ಸೊಸೆ ಮಕ್ಕಳು ಹೊರದಬ್ಬಿದ್ದಾರೆ ಜಗಳವಾಡಿ ಭೂಮಿಗೆ ಭಾರವಾಗಿ ಬೀದಿಯ ಹೆಣವಾಗಿದೆ ಆ ವೃದ್ಧನ ಹೃದಯ ಗತಿಸಿಹೋದ ದಿನಗಳ ನೆನೆದು ಕಣ್ಣಂಚಿನಲ್ಲಿ ಕಂಬನಿಯ ಮಿಡಿದು
ಕೈ ಗೋಲೆ ತನ್ನ ಆಸರೆ ಆಗಿಸಿಕೊಂಡು ಸರಕಾರದಿಂದ ಬಂದ ಪಿಂಚಣಿ ಔಷಧೋಪಚಾರಕ್ಕೆ ಬಳಸಿಕೊಂಡು ಎಲ್ಲರೊಂದಿಗಿನ ಬೈಗುಳ ಅವಮಾನಗಳ ಅರಗಿಸಿಕೊಂಡಿಹುದು ಬೀದಿಯ ಹೆಣವಾಗಿ ಆ ವೃದ್ಧನ ಹೃದಯ
ರಾಹುಲ್ ಸುಭಾಷ್ ಸರೋದೆ