ಗೃಹ ನಿರ್ಮಾಣ ಅನುದಾನ ಹೆಚ್ಚಿಸಿದ ಸಚಿವರಿಗೆ ಅಭಿನಂದನೆ – ಮಂಜುನಾಥ ದೊಡಮನಿ

Must Read

ಸಿಂದಗಿ: ಪರಿಶಿಷ್ಟ ಜಾತಿಯ ಜನರಿಗೆ ಗೃಹ ನಿರ್ಮಾಣದ ಅನುದಾನವನ್ನು ೧.೭೦ ಲಕ್ಷದಿಂದ ೫. ಲಕ್ಷದವರೆಗೂ ಹೆಚ್ಚಿಗೆ ಮಾಡಿರುವ ನೂತನ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬಿಜೆಪಿ ಎಸ್ಸಿ ಮೋರ್ಚಾ ತಾಲೂಕು ಉಪಾಧ್ಯಕ್ಷ ಮಂಜುನಾಥ ದೊಡಮನಿ ಅಭಿನಂದಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದಲ್ಲಿ ನೂತನವಾಗಿ ಸಚಿವ ಸಂಪುಟ ಸೇರ್ಪಡೆಯಾದ ಸಮಾಜ ಕಲ್ಯಾಣ ಇಲಾಖೆಯ ಸಚಿವರು ಸ್ವತಃ ಬಡವರ ಕಷ್ಟಗಳನ್ನು ಅರಿತವರು ಅದಕ್ಕೆ ೧.೭೦ ಲಕ್ಷ ರೂ.ಗಳು ಇದ್ದ ಎಸ್ಸಿ, ಎಸ್ಟಿ ಮನೆಗಳ ಬಿಲ್ಲನ್ನು ೫ ಲಕ್ಷ ರೂ ಗಳಿಗೆ ಏರಿಕೆ ಮಾಡಿ ಜನಮಾನಸಕ್ಕೆ ಆಶ್ರಯವಾದಂತಾಗಿದೆ. ಅಲ್ಲದೆ ಉತ್ತರ ಕರ್ನಾಟಕ ಭಾಗವು ಬಹಳ ಹಿಂದುಳಿದ ಭಾಗವಾಗಿದ್ದು. ಅದರಲ್ಲೂ ಎಸ್ಸಿ ಎಸ್ಟಿ ಜನರು, ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಬಹಳ ಹಿಂದುಳಿದ ಜನಾಂಗಗಳಾಗಿವೆ.

ಅವರು ದುಡಿಮೆ ಮಾಡಿಕೊಂಡು ತಮ್ಮ ದೈನಂದಿನ ಸಂಸಾರವನ್ನು ತೂಗಿಸಬೇಕು, ಹೀಗಿರುವಾಗ ಸರ್ಕಾರದಲ್ಲಿ ಎಸ್ಸಿ ಜನರು ಸ್ವಂತ ಸೂರು ನಿರ್ಮಿಸಿಕೊಳ್ಳುವುದಕ್ಕಾಗಿ ರೂ. 1.70 ರೂಗಳನ್ನು ಸಹಾಯಧನ ನೀಡಲಾಗುತ್ತಿತ್ತು, ಆದರೆ ಅದು ಸಾಕಾಗುತ್ತಿರಲಿಲ್ಲ ಅದನ್ನು ಹೆಚ್ಚಿಸಿರುವ ಸಚಿವರ ಈ ಮಹತ್ಕಾರ್ಯವನ್ನು ಜನತೆ ಯಾವತ್ತಿಗೂ ಮರೆಯುವುದಿಲ್ಲ. ಇನ್ನೂ ಕೆಲವು ಒಳ್ಳೊಳ್ಳೆ ಜನಪರ ಯೋಜನೆಗಳನ್ನು ಸಚಿವರು ಜಾರಿಗೆ ತರಲಿ ಎನ್ನುವ ಸದಾಶಯದೊಂದಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವರದಿ: ಪಂಡಿತ್ ಯಂಪೂರೆ,ಸಿಂದಗಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group