spot_img
spot_img

ಪುಸ್ತಕ ಪರಿಚಯ: ಅಂದಗಾತಿ (ಕವನ ಸಂಕಲನ)

Must Read

- Advertisement -

ಅಂದಗಾತಿ (ಕವನ ಸಂಕಲನ)

ಪುಸ್ತಕದ ಹೆಸರು: ಅಂದಗಾತಿ(ಕವನ ಸಂಕಲನ)

ಲೇಖಕರು: ವಿದ್ಯಾರೆಡ್ಡಿ , ಕನ್ನಡ ಪ್ರಾಧ್ಯಾಪಕರು ಎಸ್ ಎಸ್ ಎ ಪದವಿ ಕಾಲೇಜು ಗೋಕಾಕ

ಮುದ್ರಣ: 2020 ಪುಟಗಳು 84

- Advertisement -

ಪ್ರಕಾಸಕರು: ಶ್ರೇಯಾ ಪ್ರಿಂಟರ್ಸ್ ಬೆಂಗಳೂರು.


ವಿದ್ಯಾ ರೆಡ್ಡಿಯವರ ‘ಅಂದಗಾತಿ” ಕವನ ಸಂಕಲನದಲ್ಲಿ 65 ಕವನಗಳಿವೆ ವಂದನೆಯಿಂದ ಪ್ರಾರಂಭಿಸಿ ಬಾಳಕಡಲು ವರೆಗೆ ಒಂದಕ್ಕಿಂತ ಒಂದು ಚೆನ್ನ ಹೆಣಿದಿದ್ದಾರೆ ಮುಖಪುಟವನ್ನು ಜಯಾನಂದ ಮಾದರ ಅವರು ಅಂದಗಾತಿಗೆ ಅಂದವಾದ ಸ್ತ್ರೀ ಮುಖಪುಟ ವಿನ್ಯಾಸ ಮಾಡಿದ್ದಾರೆ. ಈ ಕವನ ಸಂಕಲನವನ್ನು ವಿದ್ಯಾ ರೆಡ್ಡಿ ಅವರು ತಂದೆ ತಾಯಿಗೆ ಅರ್ಪಣೆ ಮಾಡಿದ್ದಾರೆ. ಮುನ್ನುಡಿಯನ್ನು ಕ್ರಿಯಾಶೀಲ ಮಕ್ಕಳ ಸಾಹಿತಿ ಲಕ್ಷ್ಮಣ ಎನ್ ಚೌರಿ ಬರೆದಿದ್ದಾರೆ ಪ್ರೋ. ಆರ್ ಎನ್ ಡುಮ್ಮಗೊಳ ಆಡಳಿತಾಧಿಕಾರಿಗಳು ಸತೀಶ ಸುಗರ್ಸ ಅಕಾಡೆಮಿ ಗೋಕಾಕ ಅವರು ಹಾರೈಕೆಯನ್ನು ಹಾರೈಸಿದ್ದಾರೆ. ಜಿ ಬಿ ಬಳಿಗಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು , ಗೋಕಾಕ ಅಭಿಮಾನದ ಆಶಯ ನುಡಿ ಬರೆದಿದ್ದಾರೆ. ಕಾವ್ಯ ಚಿಗುರು ಬೆನ್ನುಡಿಯನ್ನು ಪ್ರಾ. ಜಯಾನಂದ ಮಾದರ, ಸದಸ್ಯರು ಕ ಲ ಅಕಾಡೆಮಿ ಬೆಂಗಳೂರು ಅವರು ಬರೆದಿದ್ದಾರೆ.

ವಿದ್ಯಾರೆಡ್ಡಿಯವರ ಅಂದಗಾತಿ ಕವನ ಸಂಕಲನ ನಿಜಕ್ಕೂ ಜೀವನದ ಸರ್ವ ಆಯಾಮಗಳನ್ನು ತನ್ನಲ್ಲಿ ಆವರಿಸಿಕೊಂಡು ಓದುಗರನ್ನು ಸೆಳೆಯುತ್ತಾ ಮುಂದೆ ಸಾಗುವಂತಿದೆ ಈ ಅಂದಗಾತಿಯ ಪರಿಚಯ ಕಾವ್ಯರೂಪದಲ್ಲಿ ವಿನೂತನವಾಗಿ ಮಾಡಲಾಗಿ.

- Advertisement -

ವಂದಿಸುತಲೆ ಬಂದೆ ನೀ
ಓ ಅಂದಗಾತಿಯೇ
ಕನಸುಗಳ ಕಟ್ಟುತಾ
ಭರವಸೆಯಲಿ ಮುಂದೆ ನೀ ಸಾಗುವೆ
ಜೀವನ ತಿಳಿಸಿದ ಅಪ್ಪನ ನೆನೆದು
ತಿಳುವಳಿಕೆಯ ಸ್ನೇಹದಿ ನೀ ಮೌನವಾಗುವೆ
ತಾಯಿಯ ಮಮತೆ ನೆನೆದು
ಮಾತು ಬಾರದೆ ಮೌನಕೆ ಜಾರುವೆ
ಮೋಸಕೆ ಘಾಸಿಯಾಗಿ ಆಸೆಯಿಂದಲೇ
ಮನದ ಜೀವದೀಪ ಹಚ್ಚುತಾ
ಮನಸ್ಸು ಚಿಗುರಿಸುತಾ
ಪುಸ್ತಕವಾ ಹಿಡಿದು ನಿನ್ನ
ಪಯಣ ಸಾಗಿಸುವೆ. ಗೆಳತಿಯ
ಸ್ನೇಹ ಪಾಶದಿ ಗಾಯದ ಮರೆಯುವೆ
ಪ್ರೀತಿಯ ಬಲೆಯಲಿ ಬಿದ್ದನೀ
ಬಾಳುವುದನು ಗುರುತಿಸುತಾ
ವಂಚನೆಗಳ ಸಂಚು ಅರಿತು
ಬದಿಗೊತ್ತಿ ನೀ ಅಂತರಂಗ ಅರಿತು
ಉಲ್ಲಾಸದಿಂದ ಬದುಕುವೆ
ಕೊನೆಗೆ ನಿನ್ನ ನೀ ತಿಳಿದು
ಕಾಲ ಉರುಳಿದಂತೆ ಹೊಂಗನಸು
ಸಾಕಾರತೆಗೆ ಜೀವ ತೇಯುವೆ
ಪ್ರೀತಿಯ ಬಲೆಯಲಿ ಸಂಗಾತಿಯ ಉಸಿರಲಿ
ಉಸಿರಾಗಿ ನಿನ್ನ ಮುಗ್ದಮಗುವಿನ ನಗುವಲಿ
ಕನಸುಗಳ ನನಸಾಗಿಸುವೆ ವಿಧಿಯಾಟವ
ಹತ್ತಿಕ್ಕಿ ಒಳ್ಳೆಯ ಕಾಲಕೆ ನೀ ಕಾಯ್ದು
ನಿನ್ನ ಕನಸುಗಳ ನನಸಾಗಿಸಿ
ನಿನ್ನ ಸುಂದರಿದಿ ಜೀವನಕೆ
ಹೊಸ ಆಯಾಮದ ಹೆಜ್ಜೆಗುರುತು
ನೀ ಬಿಟ್ಟು ಹೋಗುವೆ
ಓ ಅಂದಗಾತಿ ನೀ ಬಾಳೆಂಬ
ಕಡಲನು ಈಜಿ ಯಶವೆಂಬ
ದಡವನು ನೀ ಸೇರುವೆ

ಎಂದು ಕವಯತ್ರಿ ಬಲು ಚೆನ್ನಾಗಿ ಅಂದಗಾತಿಯನ್ನು ಎಳೆ ಎಳೆಯಾಗಿ ಹೆಣೆದಿದ್ದಾರೆ.

ಅಕ್ಷರ ದರ್ಶನದಲ್ಲಿ ಆದರ್ಶ ಅವರಣವನ್ನು ನಿರ್ಮಿಸಿ ಅಕ್ಷರ ಬುತ್ತಿ ಜೀವನದ ಶಕ್ತಿಯಾಗಿವೆ. ಕೊಡವರು ಅನುಭವ ಸಾಹಿತ್ಯದಲ್ಲಿ ಸೊಗಸುತುಂಬಿ ಸೃಜನ ಶೀಲತೆಯನ್ನ ಅವಳಡಿಸಿ ಉತೃಷ್ಟ ಸಾಹಿತ್ಯವನ್ನು ಭಾವಗೀತೆ ಸಂಕಲನ ಮೂಲಕ ಕಟ್ಟಿಕೊಟ್ಟಿದ್ಧಾರೆ.

ಇನ್ನು ಹಲವಾರು ಕೃತಿಗಳು ಇವರಿಂದ ಮೂಡಿ ಬರಲಿ ಎಂಬ ಪ್ರೀತಿ ಪೂರ್ವಕವಾಗಿ ಹಾರೈಸುತ್ತೇನೆ ಇವರ ಚರವಾಣಿ : 9242252521


ಶ್ರೀ ಎಂ.ವೈ. ಮೆಣಸಿನಕಾಯಿ
7360/ ಬಿ.ಸಿ ಆಂಜನೇಯ ನಗರ ಬೆಳಗಾವಿ.
ಮೊ:9449209570

- Advertisement -
- Advertisement -

Latest News

ಸೌರ ವಿದ್ಯುತ್ ಉತ್ಪಾದನೆ ಮಾಹಿತಿ ಕಾರ್ಯಾಗಾರ

ಕ್ಯಾಷುಟೆಕ್ ನಿರ್ಮಿತಿ ಕೇಂದ್ರ ಶಕ್ತಿನಗರದ ಅಭಿಯಂತರುಗಳಿಗೆ ಹಾಗೂ, ರಾಯಚೂರು ಜಿಲ್ಲೆಯ ವಿವಿಧ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳಿಗೆ "ಸುಸ್ಥಿರ ಹಸಿರು ವಿದ್ಯುಚ್ಛಕ್ತಿ ಉತ್ಪಾದನೆಗೆ ಸೌರಶಕ್ತಿ ಬಳಕೆ"...
- Advertisement -

More Articles Like This

- Advertisement -
close
error: Content is protected !!
Join WhatsApp Group