ಜಾನುವಾರು ಸಂತೆ ಭಾನುವಾರದ ಬದಲು ಬುಧವಾರ ಅನುಮತಿಗೆ ಮನವಿ

Must Read

ಮೂಡಲಗಿ: ಪ್ರತಿ ಶನಿವಾರ ಹಾಗೂ ಭಾನುವಾರ ವಿಕೆಂಡ್ ಕರ್ಫ್ಯೂ ಜಾರಿ ಇರುವ ಈ ದಿನಗಳಲ್ಲೇ ನಡೆಯುವ ಇಲ್ಲಿನ ಪ್ರಖ್ಯಾತ ಜಾನುವಾರು ಸಂತೆ ಕೊರೋನಾ ಮಹಾಮಾರಿಯಿಂದ ಸ್ಥಗಿತಗೊಂಡು ವ್ಯಾಪಾರಸ್ಥರು,ದಲ್ಲಾಳಿಗಳು,ಗ್ರಾಮಸ್ಥರು ಆರ್ಥಿಕ ಸಂಕಷ್ಟಕ್ಕೀಡಾಗಿ ಉಪ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಪುರಸಭೆ ಸದಸ್ಯ ಹುಸೇನಸಾಬ ಶೇಖ ಹೇಳಿದರು.

ತಹಸೀಲದಾರರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಈ ಸಂತೆಯಿಂದ ಅದೆಷ್ಟೋ ಬಡಬಗ್ಗರು ತಮ್ಮ ಉಪಜೀವನ ಸಾಗಿಸುತ್ತಿದ್ದು ವಿಕೆಂಡ್ ಕರ್ಫ್ಯೂದಿಂದ ಸಂತೆ ನಡೆಯದೆ ಹೊಟ್ಟೆಗೆ ಬರೆ ಎಳೆದಂತಾಗಿದ್ದು ಸದ್ಯ ಅನ್‍ಲಾಕ್ ಇದ್ದರೂ ಸಂತೆ ನಡೆಯುವ ದಿನದಂದೆ ವಿಕೆಂಡ್ ಕರ್ಫ್ಯೂ ಇರುವುದರಿಂದ ಸಂತೆ ಹಾಗೂ ಜಾನುವಾರು ಸಂತೆ ನಡೆಯುತಿಲ್ಲ ಕಾರಣ ಇಲ್ಲಿ ವ್ಯಾಪಾರ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದ ವ್ಯಾಪಾರಸ್ಥರು, ಇನ್ನಿತರ ಕೂಲಿ ಕಾರ್ಮಿಕರು ಬೀದಿಗೆ ಬಿದ್ದಂತಾಗಿದೆ.

ಆದ್ದರಿಂದ ವಿಕೆಂಡ ಕರ್ಫ್ಯೂ ಮುಗಿಯುವವರೆಗೆ ಭಾನುವಾರದಂದು ನಡೆಯುವ ಸಂತೆಯ ದಿನವನ್ನು ಬದಲಿಸಿ ಬುಧವಾರದಂದು ದನಗಳ ಸಂತೆ ಹಾಗೂ ವ್ಯಾಪಾರ ಮಾಡಲು ಅನುಮತಿ ನೀಡಬೇಕೆಂದು ವ್ಯಾಪಾರಸ್ಥರ ಹಾಗೂ ಗ್ರಾಮಸ್ಥರ ಪರವಾಗಿ ಮನವಿ ಮಾಡಿದರು.

ಗುಜನಟ್ಟಿ ಮಾಜಿ ತಾಪಂ ಸದಸ್ಯ ಬಭ್ರುವಾಹನ ಬಂಡ್ರೋಳಿ, ಇಬ್ರಾಹಿಮ ಹುಣಶ್ಯಾಳ ಮಾತನಾಡಿದರು.

ಈ ಸಂದರ್ಭದಲ್ಲಿ ರಮೇಶ ಸಣ್ಣಕ್ಕಿ, ರವೀಂದ್ರ ಸಣ್ಣಕ್ಕಿ, ಪ್ರಭು ಬಂಗೆನ್ನವರ, ರಾಮು ಝಂಡೆಕುರಬರ,ಮೆಹಬೂಬ ಶೇಖ ಹಾಗೂ ಅನೇಕ ವ್ಯಾಪಾರಸ್ಥರು, ಗ್ರಾಮಸ್ಥರು ಇದ್ದರು.

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...

More Articles Like This

error: Content is protected !!
Join WhatsApp Group