Homeಸುದ್ದಿಗಳುವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮನವಿ

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮನವಿ

ಸಿಂದಗಿ: ತಾಲೂಕಿನ ಖಾನಾಪೂರ ಗ್ರಾಮದಲ್ಲಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಖಾನಾಪೂರ ಗ್ರಾಮದ ಸಂಘಗಳಾದ ಮತ್ತಾಬಿ ಮಹಿಳಾ ಸ್ವ ಸಹಾಯ ಸಂಘ, ರೇಣುಕಾದೇವಿ ಮಹಿಳಾ ಸ್ವ ಸಹಾಯ ಸಂಘ ಮತ್ತು ಭಾಗ್ಯವಂತಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಹೊನ್ನಳ್ಳಿಯ ಗ್ರಾಮ ಪಂಚಾಯತ ಕಾರ್ಯದರ್ಶಿ ಎಸ್ ಎಮ್ ಜೋಗೂರ ಹಾಗೂ ಗ್ರಾಮ ಪಂಚಾಯತ ಅಧ್ಯಕ್ಷೆ ದೇವೆಕ್ಕೆಮ್ಮ ದೇವಿಂದ್ರಪ್ಪ ತೊನಶ್ಯಾಳ ಇವರಿಗೆ ಮನವಿ ಸಲ್ಲಿಸಿದರು.

ತಾಲೂಕಿನ ಖಾನಾಪೂರ ಗ್ರಾಮದಲ್ಲಿ ರಸ್ತೆ ದುರಸ್ತಿ, ಚರಂಡಿ ದುರಸ್ತಿ , ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಊರಿನಲ್ಲಿ ಇರುವ ಕಾಲುವೆಯಿಂದ ಊರೊಳಗೆ ನೀರು ಬರದ ಹಾಗೆ ತಡೆಗೋಡೆ ನಿರ್ಮಿಸಬೇಕು ಒಂದು ವೇಳೆ ಈ ಕೆಲಸ ಆಗದಿದ್ದರೆ ತಾಲೂಕು ಹಾಗೂ ಜಿಲ್ಲಾ ಪಂಚಾಯತ ಮುಂದೆ ಧರಣಿ ಕೂಡಲಾಗುವುದು ಎಂದು ಖಾನಾಪೂರ ಗ್ರಾಮದ ಸಂಘಗಳಾದ ಮತ್ತಾಬಿ ಮಹಿಳಾ ಸ್ವ ಸಹಾಯ ಸಂಘ, ರೇಣುಕಾದೇವಿ ಮಹಿಳಾ ಸ್ವ ಸಹಾಯ ಸಂಘ, ಮತ್ತು ಭಾಗ್ಯಾವಂತಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಎಚ್ಚರಿಕೆ ನೀಡಿದರು.

RELATED ARTICLES

Most Popular

error: Content is protected !!
Join WhatsApp Group