ಧನ್ವಂತರಿ ಜಯಂತಿ

Must Read

ಚಂದ್ರ ವಂಶದಲ್ಲಿ ಹುಟ್ಟಿದ ಧೀರ್ಘತಮನ ಮಗನಾಗಿ ಹುಟ್ಟಿದವ ಈ ಧನ್ವ0ತರಿ ದೇವ.‌ ಚಂದ್ರನಂತಹ ಹಾಲಿನ ಬೆಳಕಿನ ಬಣ್ಣ ಹೊಂದಿದವ. ಆ ಚಂದ್ರ ಮಂಡಲದಲ್ಲಿ ಧನ್ವಂತರಿ ಎರಡು ಕೈಗಳಲ್ಲಿ ಅಮೃತ ಕಲಶಗಳನ್ನು ಹಿಡಿದಿದ್ದಾನೆ.

ಇವನು ಕಮಲದಂತೆ ಅಗಲವಾದ  ಕಣ್ಣುವುಳ್ಳ , ಅಶ್ವಿನಿ ದೇವತೆಗಳಿಂದ ಸ್ತೋತ್ರಿಸಿಕೊಂಡು ಪೂಜಿತನಾಗಿ ಅನುಗ್ರಹಿಸಿದವನು. ಚಂದ್ರನ ಮೂಲಕ ಧರೆಯ  ತಾಪವನ್ನು ಓಡಿಸಿ , ಚಂದ್ರನಿಂದ ಜನಿಸಿದ ಗಿಡ ‌ಬಳ್ಳಿ , ಪೊದೆಗಳ ಬೆಳಿಸಿ ಔಷಧಯನ್ನು‌ ಧನ್ವಂತರಿ‌ ಕೊಡುವನು.

ತುಳಸಿಯ ಜನಕ ಧನ್ವಂತರಿ.  ಧನ್ವಂತರಿಯ ಆನಂದ ಭಾಷ್ಪಗಳು ಅಮೃತ ಕಲಶದಲ್ಲಿ ಬಿದ್ದಾಗ ಅದರಿಂದ ಜನಿಸಿದವಳೆ ತುಳಸಿ.

ಮುಂದೆ ಸುರಾಸುರರು ಮಂದಾರ ಪರ್ವತ  ತಂದು ಸಮುದ್ರದಲ್ಲಿ ಮಥಿಸಿದಾಗ  ನಗುನಗುತ್ತಾ ಅಮೃತ  ಕಲಶ ಹಿಡಿದು ಹುಟ್ಟಿದ ಈ ಧನ್ವಂತರಿ ದೇವಗೆ ಸಮನಾರು ಇಲ್ಲ. ಅಂತಹ ನಿನ್ನ ಮಹಿಮೆಗೆ ನಮಸ್ಕಾರಗಳು. ಬ್ರಹ್ಮ , ರುದ್ರಾದಿ , ದೇವತಾ ಸಮೂಹ , ಋಷಿಗಳು ಕೂಡಿ ಎಲ್ಲರೂ ಸ್ತುತಿಸುವರು. ದಶ ದಿಕ್ಕುಗಳಲ್ಲಿ ವೈದ್ಯಮೂರ್ತಿ ಸರ್ವ ಪ್ರಾಣಿಗಳ ಇಂದ್ರಿಯ ರೋಗಗಳನ್ನು ಕಳೆಯುತ್ತಾನೆ.

ಪ್ರತಿ ಮನುಷ್ಯನು ತಾನು ಮಾಡಬೇಕಾದ ಕರ್ಮಗಳಲ್ಲಿ ಅನುಕ್ಷಣವು ಅವನ ನೆನೆದರೆ , ಆರೋಗ್ಯ ಶುಭದಾಯಕ ಆಗುವದು.


ಪ್ರಿಯಾ ಪ್ರಾಣೇಶ ಹರಿದಾಸ‌ ಆದರ್ಶ ನಗರ ವಿಜಯಪುರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group