- Advertisement -
ಅಸ್ತಿತ್ವ
ಸತ್ತಹೋಗಿದ್ದ ಆತ್ಮೀಯರೊಬ್ಬರ
ಮೊಬೈಲ್ ಗೆ
ಅಕಸ್ಮಾತ್ ಆಗಿ
ಕರೆ ಮಾಡಿದಾಗ
ದೊರೆತ ಉತ್ತರ
ಈ ಸಂಖ್ಯೆ ಅಸ್ತಿತ್ವದಲ್ಲಿಲ್ಲ..
ಅವರು ಅಸ್ತಿತ್ವ ಕಳೆದುಕೊಂಡಿದ್ದು
(ಅವರ ಮನೆಯವರ ಮನದಲ್ಲಿ)
ಕೇಳಿ,ನೋಡಿ,ಗಮನಿಸಿ
ಕಣ್ಣಲ್ಲಿ ಹನಿ ಜಿನುಗಿತು..
ಸತ್ತವ ತನ್ನ ಅಸ್ತಿತ್ವ
ಕಳೆದುಕೊಳ್ಳುವುದಾದರೆ,
ಬದುಕಿದ್ದಾಗ ಪ್ರೀತಿಯ ನಾಟಕ ಏಕೆ ಬೇಕು…..?
ಸಮಾಜ ನೆನಪಿಸಿಕೊಳ್ಳುವಂಥ
ಏನಾದರೂ ಕೆಲಸ ಮಾಡೋಣ…
ಮನೆಯವರು ಮರೆತರೂ,
ಸಮುದಾಯದ ನೆನಪಲ್ಲಿ
ಚಿರಕಾಲ ಉಳಿದುಬಿಡೋಣ..
ಡಾ.ಭೇರ್ಯ ರಾಮಕುಮಾರ್
ಮೈಸೂರು