ಅ.ರಾ.ಮಿತ್ರರ ಮಹತ್ವದ ಕೃತಿಗಳು

Must Read

ಕನ್ನಡ ಸಾಹಿತ್ಯ-ವಿದ್ವತ್ ಕ್ಷೇತ್ರದಲ್ಲಿ ಪರಿಚಿತ ಹೆಸರು, ಪ್ರೊ|| ಅ. ರಾ. ಮಿತ್ರ ಅವರದ್ದು. ಉಪನ್ಯಾಸಕರಾಗಿ, ಭಾಷಣಕಾರರಾಗಿ, ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರಾಗಿ, ಹಾಸ್ಯೋತ್ಸವಗಳಲ್ಲಿ ಮುಖ್ಯ ಕಲಾವಿದರಾಗಿ _ ಹೀಗೆ ಕನ್ನಡದ ಕೆಲಸದಲ್ಲಿ ನಿರಂತರ ತೊಡಗಿಕೊಂಡಿರುವ ಮಿತ್ರರ ಬರವಣಿಗೆ ನವುರಾದದ್ದು, ಸುಲಲಿತವಾದದ್ದು. ಹೆಸರಿನಲ್ಲಷ್ಟೇ ಅಲ್ಲ, ಭಾಷೆ-ಶೈಲಿ-ಕಥನಕಲೆಗಳಲ್ಲಿ ಅವರು ಓದುಗರ ನಿಜವಾದ ಮಿತ್ರರು! ಹಾಗಾಗಿ ಅವರ ಬರಹಗಳನ್ನು ಓದುವುದೇ ಸೊಗಸು.

ರಾಮಾಯಣ ಮಿತ್ರ ಮತ್ತು ಮಹಾಭಾರತದ ಪಾತ್ರ-ಸಂಗತಿಗಳು ಇವೆರಡೂ ಅ. ರಾ. ಮಿತ್ರರ ಮಹತ್ತ್ವದ ಕೃತಿಗಳು. “ತರ್ಕ, ಸಂವಾದ, ಅಂತರೀಕ್ಷಣೆ – ಈ ಕಿಟಕಿಗಳಿಂದ ರಾಮಾಯಣಗೃಹವನ್ನು ಸ-ಹೃದಯನಾಗಿ ಪ್ರವೇಶಿಸುತ್ತಿದ್ದೇನೆ” ಎಂದು ಹೇಳುತ್ತ, ರಾಮಾಯಣದ ಪಾತ್ರ-ಸನ್ನಿವೇಶಗಳ ವಿವರವನ್ನು ನಮ್ಮೆದುರು ಹರಡುವ ಅವರ ಪರಿ ಅನನ್ಯವಾದದ್ದು.

ಮಹಾಭಾರತವಂತೂ ವಿಸ್ತಾರವಾದದ್ದು. ಎರಡೆರಡು ಬಾರಿ ಓದಿದರೂ ಯಾವ ಪಾತ್ರ ಯಾವ ಸಂದರ್ಭದ್ದು ಎಂದು ನೆನಪು ಮಾಡಿಕೊಳ್ಳಲು, ಆ ಪಾತ್ರದ ಸಂದರ್ಭವನ್ನು ಮೆಲುಕುಹಾಕಲು ನಮಗೆ ಬೇರೊಂದು ಸಹಾಯ ಬೇಕು. ಅದಕ್ಕೆ ಒದಗಿಬರುವಂಥದ್ದು, ಮಹಾಭಾರತದ ಪಾತ್ರ-ಸಂಗತಿಗಳು.

492 ಪುಟಗಳ ರಾಮಾಯಣ ಮಿತ್ರ ಪುಸ್ತಕದ ಬೆಲೆ: ರೂ.380.00

440 ಪುಟಗಳ ಮಹಾಭಾರತದ ಪಾತ್ರ-ಸಂಗತಿಗಳು ಪುಸ್ತಕದ ಬೆಲೆ: ರೂ.340.00

ಈ ಎರಡೂ ಪುಸ್ತಕಗಳನ್ನು ಕೊಳ್ಳಲು WhatsApp ಮಾಡಿ: 7483681708

Latest News

ಮಹಿಳೆಯರ ಅಬಲೆಯರ ಅನಾಥರ ಆಶಾಕಿರಣ ಎಸ್. ಜಿ. ಸುಶೀಲಮ್ಮ

ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜವನ್ನು ಕಟ್ಟ ಬಯಸಿದ ಅಣ್ಣ ಬಸವಣ್ಣನವರ ಆದರ್ಶ ವ್ಯಕ್ತಿತ್ವಗಳಿಗೆ ಮಾರು ಹೋಗಿ ತಮ್ಮ ಬದುಕಿನ ಆರು...

More Articles Like This

error: Content is protected !!
Join WhatsApp Group