spot_img
spot_img

“ಅತ್ಯುತ್ತಮ ವಿಜ್ಞಾನ ಶಿಕ್ಷಕ ಅಗ್ನಿ “

Must Read

- Advertisement -

ಸಿಂದಗಿ: ತಾಲೂಕಿನ ಸರ್ಕಾರಿ ಪ್ರೌಢಶಾಲೆ ಚಟ್ಟರಕಿಯ ವಿಜ್ಞಾನ ಶಿಕ್ಷಕ ಪಿ ಎಸ್  ಅಗ್ನಿ ಅವರಿಗೆ  ವಿಜಯಪುರ ಸಾರ್ವಜನಿಕ ಶಿಕ್ಷಣ ಇಲಾಖೆ 13 ವರ್ಷಗಳ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ 2020-21 ನೇ ಸಾಲಿನ ವಿಜಯಪುರ ಜಿಲ್ಲೆಯ ಅತ್ಯುತ್ತಮ ಶಿಕ್ಷಕ ಎಂದು ಗುರುತಿಸಿ ಸಪ್ಟೆಂಬರ್ 5 ಶಿಕ್ಷಕರ ದಿನೋತ್ಸವದಂದು ಪ್ರಶಸ್ತಿಯನ್ನು ನೀಡಿ ಹರ್ಷಿಸಿದೆ.

ಸದರಿ ಶಿಕ್ಷಕರಿಗೆ ಗೌರವಪೂರ್ವಕವಾಗಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ  ಶಿಕ್ಷಕರ ಸಂಘದ ಅಧ್ಯಕ್ಷ  ಆರ್ ಎಚ್ ಬಿರಾದಾರ್ ಹಾಗೂ ಕಾರ್ಯದರ್ಶಿ ರಮೇಶ್ ಬಿರಾದಾರ್ ಸಹಕಾರ್ಯದರ್ಶಿ ಶಿವಾನಂದ ಶಹಾಪುರ, ಸಂಘಟನಾ ಕಾರ್ಯದರ್ಶಿ  ಎಸ್.ಆರ್.ನಾಯಕ್,  ಸಿದ್ದರಾಮ ಮಲಗೊಂಡ ಅವರು ಪ್ರಶಸ್ತಿ ಪಡೆದ  ವಿಜ್ಞಾನ ಶಿಕ್ಷಕ ಅಗ್ನಿ ಅವರಿಗೆ ಚಟ್ಟರಕಿ ಪ್ರೌಢ ಶಾಲೆಗೆ ತೆರಳಿ ಅದ್ದುರಿಯಾಗಿ ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕರ ಸಂಘ ಇಂಡಿ ತಾಲೂಕ ಅಧ್ಯಕ್ಷ  ಸಂಗನಗೌಡ  ಹಚ್ಚಡದ,  ಸಂಜು ಎಸ್ ಬುಲ್ ಬುಲೆ, ಅರ್ಜುನ್ ಮಲ್ಲೆವಾಡಿ, ಸಿದ್ದು ಕಂಟಿಗೊಂಡ ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು. ಚಟ್ಟರಕಿ ಸರ್ಕಾರಿ ಪ್ರೌಢಶಾಲೆಯ ಸಮಸ್ತ ಸಿಬ್ಬಂದಿವರ್ಗದವರು ಶಾಲೆಗೆ ಸನ್ಮಾನಿಸಲು ಬಂದ ಅತಿಥಿಗಳಿಗೆ ಉತ್ತಮವಾದ ಸತ್ಕಾರಮಾಡಿ ಗೌರವಿಸಿದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಧನಕನಕ‌ ನವರತ್ನ ನಿನ್ನೊಡವೆಯಲ್ಲಬಿಡು ನಿನ್ನೊಡವೆಯೆಂಬುವುದು ಜ್ಞಾನರತ್ನ ಈ ರತ್ನ ಧರಿಸಿದೊಡೆ ಲೋಕದಲಿ‌ ನಿನಗಿಂತ ಸಿರಿವಂತರಾರಿಲ್ಲ - ಎಮ್ಮೆತಮ್ಮ ||೧೩೧|| ಶಬ್ಧಾರ್ಥ ಧನಕನಕ = ಹಣ ಬಂಗಾರ. ನವರತ್ನ = ಒಂಬತ್ತು ಹರಳು ತಾತ್ಪರ್ಯ ಗಳಿಸಿರುವ ಹಣ‌...
- Advertisement -

More Articles Like This

- Advertisement -
close
error: Content is protected !!
Join WhatsApp Group