Homeಕವನಕವನ: ಸಖಿ

ಕವನ: ಸಖಿ

spot_img

ಸಖಿ

ಬಾರೆ ಬಾ ನೀ ಎನ್ನ ಸಖಿ
ನೀನಿದ್ದರೆ ಬಾಳು ಹಸನ್ಮುಖಿ
ಬಂದು ಎನ್ನೆದೆಯ ತುಂಬು ಪ್ರಿಯತಮೆ
ನೀ ನನಗಾಗ ಬೇಡ ಗಗನ ಕುಸುಮ

ಇಬ್ಬರಲಿ ತುಂಬಿಕೊಂಡಿರುವ ನೂರೆಂಟು ಆಸೆಗಳು
ಮನಬಿಚ್ಚಿ ಗರಿಗೆದರಿ ಬಾನಂಗಳಕೆ ಜಿಗಿಯಲು
ನನ್ನಾಸೆ ನಿನ್ನಾಸೆ ಬೆಸೆಯಲು ಬಾಂದಳಕೆ ಸುಂದರ
ಬಿಡಿಸೋಣ ಬಣ್ಣ ಬಣ್ಣ ಏಳು ಬಣ್ಣಗಳ ಚಿತ್ತಾರ.

ಏಳೇಳು ಜನ್ಮಕೆ ಬಿಡದ ಗಂಟಿನ ನಂಟು
ಬಂಧನದಲಿ ಸುಡು ಭಾವ ಪರವಶೆ ಎನಗುಂಟು
ಶ್ರೇಷ್ಠತೆ ಹಾದಿ ಸವಿಯುತಾ ಸಾಧಿಸೋಣ
ಭವಿತಕೆ ಲಾಲಿತ್ಶದ ಭಾಷೆ ಬರೆಯೋಣ

ನಮ್ಮೊಲವಿನ ಕವನಗಳ ಇಂಚರಕೆ
ಮೈದುಂಬಿ ತೊನೆಯೋಣ ಹೂ ಗೊಂಚಲಂತೆ
ಜಗವೆಲ್ಲ ಮಾಧುರ್ಯ ತುಂಬಿ ಬರುವಂತೆ
ಇರಲಿ ನಮ್ಮಿಬ್ಬರ ಬಾಳು ಜೇನ ಹನಿಯಂತೆ

ಪ್ರಕೃತಿ ಮಡಿಲ ಮಿತಿಯಲಿ ಗೂಡೊಂದು ಕಟ್ಟೋಣ
ಪೋಷಿಸಿ ಬೆಳೆಸಲು ನಮ್ಮಭಿಲಾಷೆಯ ಕಂದಮ್ಮಗಳನು
ನಿರ್ಮಲ ಬದುಕಿನೆಡೆ ನಿರ್ಭೀತದಿಂದ ಹಾರಲು ಕಲಿಸೋಣ
ಅವರಂದದ ಭವಿಷ್ಶಕೆ ಇಂಬಾಗೋಣ
ಸಖಿ,ಯಾವ ಫಲಾಪೇಕ್ಷೆ ಇಲ್ಲದೆ ಬದುಕೋಣ.


ಅಮರ್ಜಾ
ಅಮರೇಗೌಡ ಪಾಟೀಲ
ಬುಬನ, ಕುಷ್ಟಗಿ
9900504639

RELATED ARTICLES

Most Popular

error: Content is protected !!
Join WhatsApp Group