ಕವನ: ಕಿತ್ತೂರಿನ ಕಲಿಯಿವಳು

Must Read

ಕಿತ್ತೂರಿನ ಕಲಿಯಿವಳು

ಕಿತ್ತೂರಿನ ಕಲಿಯಿವಳು ಕತ್ತಿಯನು ಹಿಡಿದವಳು
ಸುತ್ತೇಳು ನಾಡಿನೊಳು ಹೆಸರಾದವಳು
ಉತ್ತುವರು ನಾವುಗಳು ಬಿತ್ತುವರು ನಾವಿರಲು
ಮತ್ತೇತಕೆ ಕಪ್ಪವದು ಎಂದವಳು//ಪ

ಮಲ್ಲಸರ್ಜನ ಮಡದಿ ಬಿಲ್ವಿದ್ಯೆ ಕಲಿತವಳು
ಭಲ್ಲೆಯಲಿ ಗುರಿಯಿಟ್ಟು ಹೊಡೆದವಳು
ಕ್ಷುಲ್ಲತನದಾಂಗ್ಲರ ಸೊಲ್ಲನಡಗಿಸಿದಂತ
ಬಲ್ಲಿದನು ರಾಯಣ್ಣನ ರಾಜಮಾತೆ//1

ಮಕ್ಕಳನು ಹೊಂದಿರದೆ ಕಕ್ಕುಲತೆ ಹೊಂದುತಲಿ
ತಕ್ಕಮಗು ದತ್ತಕ್ಕೆ ಪಡೆದಂತವಳು
ಹಕ್ಕದುವೆ ಇಲ್ಲವೆನೊ ದತ್ತುಮಕ್ಕಳಿಗೆಂಬ
ಸೊಕ್ಕಿನ ಥ್ಯಾಕರೆಯನೆದುರಿಸಿದಳು//2

ಕನ್ನಡದ ನಾಡಿನೊಳು ಕುನ್ನಿಗಳು ಆಂಗ್ಲರಿಗೆ
ಮನ್ನಣೆಯ ಕೊಡದಿರುತ ಪ್ರತಿಭಟಿಸಿ
ತನ್ನತನ ಮರೆಯದೆ ಕನ್ನಡದ ನೆಲಕಾಗಿ
ಚೆನ್ನಮ್ಮ ಪ್ರಾಣವ ತೆತ್ತಿಹಳು//3

ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತ್ಯುತ್ಸವದ
ಶುಭಾಶಯಗಳು


ಶ್ರೀಮತಿ ಬಸಮ್ಮ ಏಗನಗೌಡ್ರ
ಶಿಕ್ಷಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚವಢಾಳ
ತಾ ಸವಣೂರು ಜಿ ಹಾವೇರಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group