ಕವನ: ಶಾಲೆಗೆ ಬನ್ನಿರಿ ಮಕ್ಕಳೆ

Must Read

ಶಾಲೆಗೆ ಬನ್ನಿರಿ ಮಕ್ಕಳೆ

ಚಿಣ್ಣರ ಲೋಕದ ಬಣ್ಣದ ಮಕ್ಕಳೆ
ಶಾಲೆಗೆ ನೀವು ಬನ್ನಿರಿ
ಭಯವನು ಬಿಟ್ಟು, ದೈರ್ಯವ ತೊಟ್ಟು
ಶಾಲೆಗೆ ನೀವು ಬನ್ನಿರಿ ||2||

ಹೂಗಳೇ ಇಲ್ಲದ ತೋಟದ ಹಾಗೆ
ಬಣ ಬಣ ಎಂದಿತು ಈ ಶಾಲೆ
ನಮ್ಮಯ ಶಾಲೆಯ ಹೂಗಳು ನೀವು
ನಿಮ್ಮಿಂದ ನಲಿಯಿತು ಈ ಶಾಲೆ ||1||

ಪಾಠವ ಓದುತ, ಆಟವ ಆಡುತ
ಕಲಿಯುತ ಕುಣಿ ಕುಣಿದಾಡೋಣ
ಶಬ್ದವ ಬರೆಯುತ, ಲೆಕ್ಕವ ಬಿಡಿಸುತ
ಹಿಗ್ಗುತ ಶಾಲೆಗೆ ಬನ್ನಿರಿ ||1||

ಗುರುಗಳು ಹೇಳುವ, ಮಾತಿಗೆ ತಪ್ಪದೇ
ಸ್ವಚ್ಛತೆಯನ್ನು ಹೊಂದೋಣ
ಎಲ್ಲರೂ ಮರೆಯದೇ ಮಾಸ್ಕ್ ಧರಿಸಿ
ಕುಣಿಯುತ ಶಾಲೆಯ ಕಲಿಯೋಣ ||1||

ಕೈಗಳ ತೊಳೆಯುತ, ಬಿಸಿ ನೀರನು ಕುಡಿಯುತ
ರೋಗದಿಂದ ದೂರಾಗೋಣ
ಅಂತರ ಹೊಂದುತ, ಬೇಡದ ಮುಟ್ಟದೆ
ಹಾಡುತ ಶಾಲೆಗೆ ಬನ್ನಿರಿ ||1||

ನಿಮ್ಮಯ ಶಾಲೆ ಜ್ಞಾನದ ಸೆಲೆಯು
ಅಕ್ಷರ ಮಾಲೆಯ ಧರಿಸೋಣ
ನೀವೇ ನಮ್ಮ ದೇಶದ ಬೆಲೆಯು
ಹರುಷದಿ ಶಾಲೆಗೆ ಬನ್ನಿರಿ||1||


ಮಹೇಶ ಬೆಳವಡಿ.
ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು.
ಸರಕಾರಿ ಮಾದರಿ ಪ್ರಾಥಮಿಕ ಶಾಲೆ,ಬೆಟಸೂರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group