ಅಕ್ಟೋಬರ್ ೩೦ ರಂದು ವೈ.ಬಿ.ಕಡಕೋಳರ ಐದು ಕೃತಿಗಳ ಲೋಕಾರ್ಪಣೆ

Must Read

ಸವದತ್ತಿ: ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಬಿಐಇಆರ್‌ಟಿ ಯಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳರ ಐದು ಕೃತಿಗಳು ಬರುವ ಅಕ್ಟೋಬರ್ ೩೦ ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮದ್ಯಾಹ್ನ ೨.೩೦ ಕ್ಕೆ ಅಕ್ಷರತಾಯಿ ಲೂಸಿ ಸಾಲ್ಡಾನಾ ಸೇವಾ ಸಂಸ್ಥೆ (ರಿ) ಧಾರವಾಡ ಇವರ ಶಿಕ್ಷಕ ರತ್ನ ಶ್ರಮಿಕ ರತ್ನ ಶಾಲಾ ಸಿರಿ ರಾಜ್ಯ ಪ್ರಶಸ್ತಿ ಸಮಾರಂಭದಲ್ಲಿ ಲೋಕಾರ್ಪಣೆಗೊಳ್ಳಲಿವೆ.

ವೈ.ಬಿ.ಕಡಕೋಳ ಸಂಪಾದಿತ ‘ಲೂಸಿ ಸಾಲ್ಡಾನಾ ಬದುಕು ಬರಹ’ ಕೃತಿಯನ್ನು ಸುವರ್ಣವಾಹಿನಿ ಬೆಂಗಳೂರಿನ ಮುಖ್ಯ ಸಂಪಾದಕರಾದ ಅಜಿತ ಹನುಮಕ್ಕನವರ ಲೋಕಾರ್ಪಣೆಗೊಳಿಸಲಿದ್ದಾರೆ.

ಅದೇ ರೀತಿ ‘ಲೂಸಿ ಸಲ್ಡಾನಾರ ಅಡುಗೆ ವೈವಿಧ್ಯ’ ಸಂಪಾದಿತ ಕೃತಿಯನ್ನು ಧಾರವಾಡ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಿದ್ಯಾ ನಾಡಿಗೇರ ಲೋಕಾರ್ಪಣೆಗೊಳಿಸುವರು. ಮಕ್ಕಳ ಕಥಾಸಂಕಲನ ‘ಸ್ವರ್ಗ ನರಕ’ ವನ್ನು ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ.ಸಂಕನೂರ ಲೋಕಾರ್ಪಣೆಗೊಳಿಸುವರು.

 

ವೈ.ಬಿ.ಕಡಕೋಳರ ಲೇಖನಗಳ ಸಂಗ್ರಹದ ‘ಹಬ್ಬಗಳ ಸಿರಿ’ ಕೃತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡದ ಅಪರ ಆಯುಕ್ತರಾದ ಎಸ್.ಎಸ್.ಬಿರಾದಾರ ಲೋಕಾರ್ಪಣೆಗೊಳಿಸುವರು.

ಇನ್ನೊಂದು ಲೇಖನಗಳ ಸಂಗ್ರಹ ಕೃತಿ ‘ ತುಂಬಿದ ಹೊಳೆ’ ಯನ್ನು ಧಾರವಾಡ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಬಮ್ಮಕ್ಕನವರ ಲೋಕಾರ್ಪಣೆಗೊಳಿಸುವರು.

ಹೀಗೆ ವೈ.ಬಿ.ಕಡಕೋಳರ ಐದು ಕೃತಿಗಳು ಬಿಡುಗಡೆಗೊಳ್ಳಲಿದ್ದು ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಉಪ್ಪಿನ ಬೆಟಗೇರಿಯ ಪರಮ ಪೂಜ್ಯ ಶ್ರೀ.ಮ.ನಿ.ಪ್ರ.ಕುಮಾರ ಮಹಾಸ್ವಾಮಿಗಳು ವಹಿಸಲಿದ್ದು ಕಾರ್ಯಕ್ರಮವನ್ನು ಧಾರವಾಡದ ಶಾಸಕರಾದ ಅಮೃತ ದೇಸಾಯಿ ಉದ್ಘಾಟಿಸುವರು.

ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಶಿಕ್ಷಕ ರತ್ನ ಪ್ರಶಸ್ತಿ ಪುರಸ್ಕಾರವನ್ನು. ಧಾರವಾಡ ಶಹರದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗಿರೀಶ ಪದಕಿ, ಶಾಲಾ ಸಿರಿ ಪ್ರಶಸ್ತಿ ಸಮಾರಂಭವನ್ನು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮೋಹನಕುಮಾರ ಹಂಚಾಟೆ, ಶ್ರಮಿಕ ರತ್ನ ಪ್ರಶಸ್ತಿ ಪುರಸ್ಕಾರವನ್ನು ಮಕ್ಕಳ ಸಾಹಿತಿಗಳಾದ ಶಂಕರ ಹಲಗತ್ತಿಯವರು ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷರತಾಯಿ ದತ್ತಿದಾನಿ ಲೂಸಿ ಸಾಲ್ಡಾನಾ ವಹಿಸುವರು. ಮುಖ್ಯ ಅತಿಥಿಗಳಾಗಿ ಹುಲಿಕಲ್ ನಟರಾಜ್ಡಾ, .ರೇಣುಕಾ ಅಮಲಝರಿ,  ಡಾ.ಗುರುಮೂರ್ತಿ ಯರಗಂಬಳಿಮಠ, ಜಿ.ಟಿ.ಶಿರೋಳ, ಬಾಬಾಜಾನ್ ಮುಲ್ಲಾ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿರುವರು ಎಂದು ಲೂಸಿ ಸಾಲ್ಡಾನಾ ದತ್ತಿ ಸೇವಾ ಸಂಸ್ಥೆಯ ಅಧ್ಯಕ್ಷರಾದ ಭೀಮಪ್ಪ ಕಾಸಾಯಿ ಪ್ರಕಟಣೆಯಲ್ಲಿ ತಿಳಿಸಿರುವರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group