ಅಪ್ಪು: ಯಾವ ಅಭಿಮಾನಿ ಬರೆದನೋ ಗೊತ್ತಿಲ್ಲ…

Must Read

ಅಪ್ಪು ಅಗಲಿಕೆಯ ನೋವನ್ನು ಚುಟುಕುಗಳಲ್ಲಿ ವ್ಯಕ್ತಪಡಿಸಿದ್ದಾರೆ. ವಾಟ್ಸಪ್ ನಲ್ಲಿ ಬಂದ ಈ ಹೃದಯಸ್ಪರ್ಶಿ ಚುಟುಕುಗಳು……


ಅಪ್ಪು

.
ಗಾಜನೂರಿನ
ಗಾಜು ಒಡೆದುಹೋಯಿತು..
ಕನ್ನಡಿಗರ ಮನಸ್ಸೂ
ಚೂರುಚೂರಾಯಿತು !!!


.
ಅಪ್ಪನಂತೆ ಹಾಡುತ್ತಿದ್ದ..
ಅಪ್ಪನಂತೆ ನಟಿಸುತ್ತಿದ್ದ..
ಅಪ್ಪನಂತೆ ಹೊರಟುಹೋದ !!!


.
ಹೃದಯಾಘಾತ
ಇಡೀ ನಾಡಿಗೆ ಆಗಿದೆ..
ಎದೆನೋವು ಬಂದದ್ದು
ಅವನಿಗೆ ಮಾತ್ರ!!!


.
ಕನ್ನಡ ರಾಜ್ಯೋತ್ಸವಕ್ಕೆ
ಅಣ್ಣಾ ಬಾಂಡಿಲ್ಲ !!
ಬೊಂಬೆ ಹಾಡುತೈತೆ
ಅರಮನೆಯಲ್ಲಿ ರಾಜಕುಮಾರನಿಲ್ಲ !!!


.
ಲೋಕದ ಹಣೆಬರಹವಿಷ್ಟೆ,
ಪಾಪಿಗಳು ಬೇಗ ಸಾಯುವುದಿಲ್ಲ…
ಅಜಾತಶತ್ರುಗಳಿಗೆ ದೇವರು
ಆಯುಷ್ಯ ಕೊಡುವುದಿಲ್ಲ !!!


೬.
ಇದೊಂದು ಸೀನನ್ನು
ಕಟ್ ಮಾಡಿಬಿಡಿ..
ಅಪ್ಪು ರೀಟೇಕ್ ಮಾಡುತ್ತಾರೆ
ಒಮ್ಮೆ ಯ್ಯಾಕ್ಷನ್ ಅಂದುಬಿಡಿ !!!


.
ಇನ್ನೂ ಇಂಟರ್ವಲ್ಲೇ
ಆದಂತಿಲ್ಲ…
ಹಾಡು ಮುಗಿಯುವ ಮೊದಲೇ
ಕುಣಿತ ನಿಲ್ಲಿಸಿದೆಯಲ್ಲ?!!

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group