ರಾಂಗ್ ನಂಬರ್ ಕಥೆ
ಬೆಳಗಿನ ಸುಪ್ರಭಾತ ದಿಂದಲೇ ನನ್ನ ಅಡಿಗೆ ಮನೆ ಒಡ್ಡೋಲಗ ದಲ್ಲಿ ತಕಥೈ ದಿಗ್ ಥೈ ಭರತ ನಾಟ್ಯ ಶುರುವಾಗುತ್ತಿತ್ತು. ಅತ್ತೆಮಾವರಿಗೆ ಕಷಾಯ,ಇವರಿಗೆ, ಮಗನಿಗೆ ಚಹಾ ನಂತರ ಅತ್ತೆ ಮಾವ ತಿಂಡಿ ತಿಂತಿರಲಿಲ್ಲ. ಹನ್ನೊಂದು ಗಂಟೆ ಅಷ್ಟೊತ್ತಿಗೆ ಅವರಿಗೆ ಊಟಕ್ಕೆ ರೆಡಿ ಮಾಡಬೇಕು.ಇವರಿಗೆ, ಮಗನಿಗೆ ತಿಂಡಿಯಾಗಿ ಊಟದ ಡಬ್ಬಿ ತಯಾರಿ ಆಗಬೇಕು. ಅದರಲ್ಲೇ ಈ ಫೋನುಗಳು ಹಾವಳಿ .ಬೇಕಾದ ಕರೆ ಕರೆಗಳಿಗಿಂತ ರಾಂಗ್ ನಂಬರ್ ಗಳೇ.ಒಮ್ಮೆ ಸಿಟ್ಟಿನಲ್ಲಿ ರಾಂಗ್ ನಂಬರ್ ರೀ… ಎಂದು ಫೋನ್ ಕುಕ್ಕಿದ್ದೆ.
ಆವತ್ತು ಇದೇ ಕೆಲಸದ ಗಡಿಬಿಡಿಯಲ್ಲಿ ಫೋನ್ ರಿಂಗಾಗಿ ದಾಪುಗಾಲಿಕ್ಕಿ ಹೊರಟಾಗ ನನ್ನ ಮಗ ರಾಧೇಶ್ ‘ ನಾ ನೋಡುತ್ತೇನೆ ‘ ಎಂದು ಫೋನ್ ತೊಗೊಂಡ ‘ಈದ ಮುಬಾರಕ್ ಸಾಬ್ ‘ ಎಂಬ ಧ್ವನಿ ರಾಧೇಶ್ ‘ ಎ ರಾಂಗ್ ನಂಬರ್ ಹೈ ದೇಖ ಲೀಜಿಯಯೇಗಾ. ಫಿರಭೀ ಆಪಕೋ ಭೀ ಈದಮುಬಾರಕ ‘ ಎಂದು ಹೇಳಿ ಫೋನ್ ಇಟ್ಟ ಮುಂದೆ ಒಂದು ಗಂಟೆಯಲ್ಲಿ ಒಬ್ಬ ಸುರದ್ರೂಪಿ ಹುಡುಗ ನಯೀಮ್ ಅಂತ ಹೆಸರು, ಬಾಗಿಲಲ್ಲಿ ನಿಂತಿದ್ದ. ತನ್ನ ಪರಿಚಯ ಹೇಳಿಕೊಂಡ.ರಾಧೇಶನು ಸಿಡುಕದೇ ಮಾತನಾಡಿದ ಪರಿ ಇಷ್ಟ ವಾಯಿತೆಂದ.
ಇಬ್ಬರೂ ಆತ್ಮೀಯ ಗೆಳೆಯ ರಾದರು ಬಕ್ರೀದ್ ಹಬ್ಬದ ಸುರಕುಂಬಾ ಖೀರನ್ನು ರಾಧೇಶನಿಗಾಗಿ ತಂದರೆ
ರಾಜೇಶ್ ಪಂಚಮಿ ಉಂಡಿ ಚಕ್ಕಲಿ ಅರಳು ತಂಬಿಟ್ಟನ್ನುಅವರಮನೆಗೆ ಕೊಡುತ್ತಿದ್ದ.
ಒಮ್ಮೆ ಬೆಳಗೆದ್ದು ನಯೀಮ್ ಓಡುತ್ತಾ ಮನೆಗೆ ಬಂದು ನನ್ನ ತಂದೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ‘ಎ ಪಾಜಿಟಿವ್ಹ’ ರಕ್ತ ಕೊಡಬೇಕಂತೆ ಎಲ್ಲೂ ಸಿಗುತ್ತಿಲ್ಲ. ರಾಧೇಶನಿಗೆ ಯಾರಾದರೂ ಪರಿಚಯದವರಿದ್ದಾರೆಯೇ ಎಂದು ಕೇಳಲು ಬಂದೆ ಎಂದಾಗ ಒಳಗಿನಿಂದ ಕೇಳಿಸಿ ಕೊಂಡು ರಾಧೇಶ ಅವನ್ನು ಎಳೆದು ಕೊಂಡು ಹೋಗುತ್ತ, ‘ ನನ್ನದು ಎ ಪಾಜಿಟಿವ್ಹ ನಡೆ ‘ ಎಂದ.
ಸಂಜೆ ಆಗುವಷ್ಟರಲ್ಲಿ ಅವರ ತಂದೆ ಗುಣಮುಖರಾಗಿದ್ದರು ನಾನು ನನ್ನ ಪತಿ ಅವರನ್ನುಭೇಟಿ ಆಗಲು ಹೋದೆವು.ಅವರ ಅಣ್ಣ
ಇವರನ್ನು ನೋಡುತ್ತಲೇ ತೆಕ್ಕೆ ಬಿದ್ದು, ‘ ತೇರಾ ಬೇಟಾ ಮೇರೆ ಭಾಯಿಕೊ ಬಚಾಲಿಯಾ ಸಾಬ್ ‘ ಎಂದ. ಇಬ್ಬರ ಕಣ್ಣಾಲಿಗಳೂ ತುಂಬಿ ಬಂದಿದ್ದವು. ನಾನೂ ಅಂದಿನಿಂದ ಫೋನಿನಲ್ಲಿ ಮೃದುವಾಗಿ ಮಾತನಾಡುವದನ್ನು ಕಲಿತೆ.
ರಾಧಾ ಶಾಮರಾವ