ಖಂಡ್ರೆ ವರ್ಸಸ್ ಖಂಡ್ರೆ; ಬೀದರ್ ನಲ್ಲಿ ಸಹೋದರ ಪೈಟ್

Must Read

ಕೆಪಿಸಿಸಿ ರಾಜ್ಯ ಕಾರ್ಯದ್ಯಕ್ಷ ಈಶ್ವರ ಖಂಡ್ರೆ ಹೋದಲ್ಲೆಲ್ಲ ಹಿಂಬಾಲಿಸಿದ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ

ಬಸವಣ್ಣನವರ ಕರ್ಮ ಭೂಮಿ ಬೀದರ್ ನಲ್ಲಿ ಸಹೋದರರ ಮಧ್ಯೆ ಜಂಗಿ ಕುಸ್ತಿಯೇ ನಡೆಯುತ್ತಿದೆಯೆನ್ನಬಹುದಾದ ವಾತಾವರಣ ಸೃಷ್ಟಿಯಾಗಿದೆ. ವಿಧಾನ ಪರಿಷತ್ ಚುನಾವಣೆ ಕಾವು ವ್ಯಯಕ್ತಿಕ ಟೀಕೆ ಟಿಪ್ಪಣಿಗಳ ಮಟ್ಟಕ್ಕೆ ಹೋಗಿದ್ದು ಜಗಜ್ಜಾಹೀರಾಗಿದ್ದು ಇವಾಗ ಕೈ ಕೈ ಮಿಲಾಯಿಸುವ ಹಂತಕ್ಕೆ ಬಂದಿದೆ. ತಮ್ಮ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ವಿರುದ್ಧ ಅಣ್ಣ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈಗ ಈಶ್ವರ ಖಂಡ್ರೆ ಬೀದರ್ ಜಿಲ್ಲೆಯಾದ್ಯಂತ ಯಾವ ಮತಗಟ್ಟೆ ಹೋದರೂ ಅಣ್ಣ ಹಿಂಬಾಲಿಸಿದರು.

ಇದರ ಹಿನ್ನೆಲೆಯೇನೆಂದರೆ, ನಿನ್ನೆ ಈಶ್ವರ ಖಂಡ್ರೆ ಮಾತನಾಡುತ್ತ ಬಿಜೆಪಿ ಪಕ್ಷಕ್ಕೆ ದಮ್ ಇದ್ದರೆ ನನ್ನನ್ನು ತಡೆಯಿರಿ ಎಂದು ಹೇಳಿ ಅಣ್ಣನ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿರುವ ಅಣ್ಣ ಪ್ರಕಾಶ್ ಖಂಡ್ರೆ ತಮ್ಮನಾದ ಈಶ್ವರ ಖಂಡ್ರೆ ಗೆ ತಿರುಗೇಟು ನೀಡಿದರು.ಈಶ್ವರ ಖಂಡ್ರೆ ಯಾವ ಮತಗಟ್ಟೆಗೆ ಹೋದರೂ ಪ್ರಕಾಶ್ ಖಂಡ್ರೆ ಹಿಂಬಾಲಿಸಿದರು. ಇತ್ತ ಇಬ್ಬರೂ ನಾಯಕರ ಬೆಂಬಲಿಗ ಕಾರ್ಯಕರ್ತರು ಜೈಕಾರ ಹಾಕಿದರು. ಹೀಗಾಗಿ ಅಲ್ಲಿ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೆಲ್ಲ ನೋಡುತ್ತಿದ್ದರೆ ಬೀದರ್ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆಯದ ಹಾಗೆ ಪೊಲೀಸ ಇಲಾಖೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಈ ನಡುವೆ ಅಣ್ಣ ತಮ್ಮರ ಗಲಾಟೆ ಯಾವ ಮಟ್ಟಕ್ಕೆ ಹೋಗುತ್ತದೆ ಎಂಬುದು ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group