ವಿಜಯಪುರ: ಹಿರಿಯ ಪತ್ರಿಕೋದ್ಯಮಿ ಹಾಗೂ ಅಪರಾಧಕ್ಕೆ ಸವಾಲು ಕನ್ನಡ ದಿನಪತ್ರಿಕೆ ವಿಜಯಪುರ ಪತ್ರಿಕೆಯ ಸಂಪಾದಕರಾದ ಟಿ. ಕೆ. ಮಲಗೊಂಡ ಅವರಿಗೆ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರದ ಅನುಪಮ ಸೇವೆ ಪರಿಗಣಿಸಿ “ಹರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್” ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇವರಿಗೆ ಬೆಳಕು ಟ್ರಸ್ಟ್ ವತಿಯಿಂದ ಇದೆ ಡಿಸೆಂಬರ್ 29 ರಂದು ಮಾನ್ವಿ ಪಟ್ಟಣದಲ್ಲಿ ಜರುಗುವ ಕಾಲೇಜು ಸಾಹಿತ್ಯ ಸಂಭ್ರಮದಲ್ಲಿ “ಹರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್ ರಾಜ್ಯ ಪ್ರಶಸ್ತಿ” ನೀಡಿ ಗೌರವಿಸಲಾಗುವುದು ಎಂದು ಬೆಳಕು ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.