ಪೌರಕಾರ್ಮಿಕರೊಂದಿಗೆ ಜನ್ಮ ದಿನ ಆಚರಿಸಿಕೊಂಡ ಇಜಾಜ

Must Read

ಮೂಡಲಗಿ : ಪೌರಕಾರ್ಮಿಕರು ಪಟ್ಟಣವನ್ನು ಸ್ವಚ್ಛವಾಗುಡುವುದರಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದ್ದಾರೆ.ಸ್ವಚ್ಛತೆ ಇದ್ದಲ್ಲಿ ಆರೋಗ್ಯವಿರುತ್ತದೆ ಪರೋಕ್ಷವಾಗಿ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ಪೌರಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ಗಮನ ಕೊಡುವುದುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಬೆಳಗಾವಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಉಪಾಧ್ಯಕ್ಷ ಇಜಾಜ ಕೊಟ್ಟಲಗಿ ಹೇಳಿದರುು.

ಪಟ್ಟಣದ ಥರಥರಿ ಸಭಾ ಭವನದಲ್ಲಿ ತಮ್ಮ ಜನ್ಮದಿನಾಚರಣೆ ಹಾಗೂ ಹೊಸ ವರ್ಷಾಚರಣೆ ನಿಮಿತ್ಯವಾಗಿ ಪೌರಕಾರ್ಮಿಕ ಮಹಿಳೆಯರಿಂದ ಕೇಕ್ ಕತ್ತರಿಸುವುದರೊಂದಿಗೆ ಅವರಿಗೆ ಸೀರೆಯನ್ನು ವಿತರಿಸಿ ಅವರು ಮಾತನಾಡಿದರು.

ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರೈತ ಹಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ ನಾಯ್ಕ,ಚಿಕ್ಕ ವಯಸ್ಸಿನಲ್ಲೇ ಕೊಟ್ಟಲಗಿಯವರು ಸಮಾಜ ಮುಖಿಯಾದ ಅನೇಕ ಕಾರ್ಯಗಳನ್ನು ಮಾಡುತ್ತಿದ್ದಾರೆ.ಕಳೆದ ಪ್ರವಾಹದ ದಿನಗಳಲ್ಲಿಯೂ ಕೂಡ ಇಜಾಜ ಅವರು ಮುನ್ಯಾಳ, ಪಟಗುಂದಿ,‌ ಕಮಲದಿನ್ನಿ ಸೇರಿದಂತೆ ಅನೇಕ ಗ್ರಾಮಗಳಿಗೆ ಭೇಟಿ ಕೊಟ್ಟು ಪ್ರವಾಹ ಸಂತ್ರಸ್ತರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ.ತಾವು ಬಡವರಾಗಿದ್ದರು ತಮಗೆ ಬಂದ ಆದಾಯದಲ್ಲಿ ಸ್ವಲ್ಪ ಹಣ ಸಮಾಜ ಸೇವೆಯಲ್ಲಿ ತೊಡಗಿಸುತ್ತಿರುವ ಕೊಟ್ಟಲಗಿಯವರ ಕಾರ್ಯ ಶ್ಲಾಘನೀಯ,ನಮ್ಮ ಸಹಕಾರ ಸದಾ ಅವರಿಗೆ ಇರುತ್ತದೆ ಎಂದು ಭರವಸೆ ಕೊಟ್ಟರು.

ಈ ಸಂಧರ್ಭದಲ್ಲಿ ನವ ನಿರ್ಮಾಣ ಸೇನೆ ಜಿಲ್ಲಾ ಉಪಾಧ್ಯಕ್ಷ ಭರತರಾಜ ಪಾಟೀಲ್,ಕರವೇ ಸ್ವಾಭಿಮಾನ ತಾಲೂಕಾ ಯುವ ಘಟಕದ ಅಧ್ಯಕ್ಷ ಮಂಜುನಾಥ ಫಿರೋಜಿ,ಜೈಹೋ ಜನತಾ ವೇದಿಕೆ ಜಂಟಿ ಕಾರ್ಯದರ್ಶಿ ಅಬ್ಧುಲ್ ಪೈಲವಾನ್,ಲಗಮಣ್ಣ ನಾಯ್ಕ,ಶ್ರೀಕಾಂತ ಇಳಿಗೇರ ಸೇರಿದಂತೆ ಅನೇಕ ಪೌರಕಾರ್ಮಿಕ ಮಹಿಳೆಯರು ಉಪಸ್ತಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group