spot_img
spot_img

ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೆ

Must Read

- Advertisement -

ಮೂಡಲಗಿ ಜ.1 :- ದೇಶ ವಿದೇಶಗಳಲ್ಲಿ ಪ್ರಖ್ಯಾತಿಯಾಗಿರುವ ಭಾರತದ ಶಿಲ್ಪ ಕಲೆಗೆ ಅಮರ ಶಿಲ್ಪಿ ಜಕಣಾಚಾರಿಯವರ ಕೊಡುಗೆ ಅಪಾರವಾಗಿದೆ ಎಂದು ತಹಶೀಲ್ದಾರರಾದ ಡಿ.ಜೆ.ಮಹಾತ್ ಹೇಳಿದರು.

ಶನಿವಾರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿಯವರ ಸಂಸ್ಮರಣೆ ದಿನದ ಅಂಗವಾಗಿ ಮಾತನಾಡಿದ ಅವರು, ಭಾರತ ಶಿಲ್ಪ ಕಲೆಯ ತವರೂರು,ದೇಶದ ಶಿಲ್ಪ ಕಲಾ ಶ್ರೀಮಂತಿಕೆ ಹೆಚ್ಚಿಸಲು ಅನೇಕ ಶಿಲ್ಪಿಗಳ ಪಾತ್ರವಿದೆ.ಅಂತಹ ಶಿಲ್ಪಿಗಳಲ್ಲಿ ಜಕಣಾಚಾರಿಯವರ ಪಾತ್ರ ಮಹತ್ತರವಾದದ್ದು ಎಂದರು.

ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಕಾಳಿಕಾ ದೇವಸ್ಥಾನ ಟ್ರಸ್ಟ ಸದಸ್ಯರಾದ ಚಂದ್ರಶೇಖರ್ ಪತ್ತಾರ್ ಅವರು ರಾಜರ ಕಾಲದಿಂದ ಹಿಡಿದು ಪ್ರಸಕ್ತ ದಿನಗಳವರೆಗೂ ಅನೇಕ ವಿದೇಶಿ ಪ್ರವಾಸಿಗರು ಭಾರತದ ಸಂಸ್ಕೃತಿ ಹಾಗೂ ಇಲ್ಲಿರುವ ಶಿಲ್ಪ ಕಲೆಯನ್ನು ವೀಕ್ಷಿಸಿ ಅಭ್ಯಸಿಸಲು ನಮ್ಮ ದೇಶಕ್ಕೆ ಬರುತ್ತಾರೆ.ಪ್ರಪಂಚದಲ್ಲೇ ಭಾರತ ಶಿಲ್ಪಕಲೆ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ.ಇಂತಹ ವೈಭವಯುತವಾದ ಶಿಲ್ಪ ಕಲೆಯನ್ನು ಕೊಡಮಾಡಿದ ಅಮರಶಿಲ್ಪಿ ಜಕಣಾಚಾರಿಯ ಸಂಸ್ಮರಣಾ ದಿನವನ್ನು ಆಚರಿಸುತ್ತ,ವಿಶ್ವಕರ್ಮರಿಗೆ ರಕ್ತಗತವಾಗಿ ಬಂದಿರುವ ಈ ಕಲೆ ಉಳಿಸಿ,ಬೆಳೆಸಿಕೊಂಡು ಹೋಗುವ ಹೊಣೆ ಸರಕಾರ ಹಾಗೂ ನಮ್ಮೆಲ್ಲರ ಮೇಲಿದೆ ಎಂದರು.

- Advertisement -

ಕಾರ್ಯಕ್ರಮದಲ್ಲಿ ಪುರೋಹಿತ ಅಜಾತಮೂರ್ತಿಆಚಾರ್ಯರು ಹಾಗೂ ಶಿಲ್ಪಿಗಳಾದ ವೀರೇಶ ಬಡಿಗೇರ ಜಕಣಾಚಾರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಈ ಸಂಧರ್ಭದಲ್ಲಿ ಶ್ರೀ ಕಾಳಿಕಾ ದೇವಸ್ಥಾನ ಟ್ರಸ್ಟ್ ಅಧ್ಯಕ್ಷರಾದ ರವೀಂದ್ರ ಪತ್ತಾರ,ಮೌನೇಶ ಪತ್ತಾರ,ಕಾಳಪ್ಪ ಬಡಿಗೇರ,ಪ್ರವೀಣ ನವಿಲೂರು,ಅರುಣ ಪತ್ತಾರ,ಧರೆಪ್ಪ ಕಂಬಾರ,ಸಚಿನ್ ಪತ್ತಾರ ಸೇರಿದಂತೆ ಅನೇಕ ವಿಶ್ವಕರ್ಮ ಬಾಂಧವರು ಹಾಗೂ ತಾಲೂಕಾ ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಮತ ಯಾರಿಗಾದರೂ ಹಾಕಿ ಆದರೆ NOTA ಕ್ಕೆ ಹಾಕಬೇಡಿ !

ಲೋಕಸಭಾ ಚುನಾವಣೆ ಘೋಷಣೆಯಾದಾಗಿನಿಂದ ನೀವು ಯಾವುದೋ ಒಂದು ಗೊಂದಲದಲ್ಲಿ ಇರುತ್ತೀರಿ. ವಿವಿಧ ಪಕ್ಷಗಳು ತಮ್ಮ ಪ್ರಚಾರದ ವೈಖರಿಯಿಂದ ನಿಮ್ಮನ್ನು ಹಿಡಿದಿಟ್ಟುಕೊಂಡಿವೆ. ಒಂದು ಪಕ್ಷದ ಪ್ರಚಾರ ಸಭೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group