ಕನ್ನಡದ ಕಟ್ಟಾಳು ಡೆಪ್ಯೂಟಿ ಚೆನ್ನಬಸಪ್ಪನವರ ಪುತ್ಥಳಿಗೆ ಉಸ್ತುವಾರಿ ಸಚಿವರಿಂದ ಪುಷ್ಪನಮನ

Must Read

ಧಾರವಾಡ: ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ವಿಕಾಸಕ್ಕಾಗಿ ಈಗ್ಗೆ ಸುಮಾರು ೧೭೦ ವರ್ಷಗಳ ಹಿಂದೆಯೇ ಧ್ವನಿ ಎತ್ತಿ ನಿರಂತರ ಶ್ರಮಿಸಿ ತಮ್ಮ ಒಟ್ಟು ಬದುಕನ್ನೇ ಸಮರ್ಪಣೆ ಮಾಡಿ ಕೀರ್ತಿಶೇಷರಾಗಿರುವ ಕನ್ನಡದ ಕಟ್ಟಾಳು, ಕನ್ನಡದ ಶಕಪುರುಷ ಡೆಪ್ಯೂಟಿ ಚೆನ್ನಬಸಪ್ಪನವರ ಪುತ್ಥಳಿಗೆ ೭೩ನೇ ಪ್ರಜಾರಾಜ್ಯೋತ್ಸವದ ಸಂದರ್ಭದಲ್ಲಿ ಬುಧವಾರ ಜಿಲ್ಲಾ ನೂತನ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ರಾಜ್ಯ ಸರಕಾರದ ಪರವಾಗಿ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು.

ಜಿಲ್ಲೆಯ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿರ‍್ದೇಶಕಿ ಎನ್.ಕೆ. ಸಾವಕಾರ ಈ ಸಂದರ್ಭದಲ್ಲಿ ಮಾತನಾಡಿ, ಡಯಟ್ ಕಳೆದ ೧೫೬ ವರ್ಷಗಳಿಂದ ಪ್ರಕಟಿಸುತ್ತಿರುವ ‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಸಂಚಿಕೆಗಳನ್ನು ಸಚಿವ ಹಾಲಪ್ಪ ಅವರಿಗೆ ನೀಡಿದರು. ಡಯಟ್ ಹಿರಿಯ ಉಪನ್ಯಾಸಕರುಗಳಾದ ವೈ.ಬಿ. ಬಾದವಾಡಗಿ, ಜಯಶ್ರೀ ಕಾರೇಕರ, ಪಾರ‍್ವತಿ ವಸ್ತ್ರದ, ಶೋಭಾವತಿ ನಾಯ್ಕರ, ಜೆ.ಜಿ.ಸೈಯ್ಯದ, ಡಯಟ್ ಏಳೂ ವಿಭಾಗಗಳ ಉಪನ್ಯಾಸಕರು, ಲಿಪಿಕ ನೌಕರರು ಹಾಗೂ ಇತರೇ ಸಿಬ್ಬಂದಿ ವರ್ಗ ಹಾಜರಿದ್ದು ಡೆಪ್ಯೂಟಿ ಚೆನ್ನಬಸಪ್ಪನವರ ಪುತ್ಥಳಿಗೆ ತಮ್ಮ ನಮನ ಸಲ್ಲಿಸಿ ಗೌರವ ಸಮರ‍್ಪಿಸಿದರು.

‘ಜೀವನ ಶಿಕ್ಷಣ’ ಮಾಸಪತ್ರಿಕೆಯ ಜಂಟಿ ಸಂಪಾದಕ ಡಾ.ಗುರುಮೂರ್ತಿ ಯರಗಂಬಳಿಮಠ ವಂದಿಸಿದರು.

Latest News

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ

ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮಮೂಡಲಗಿ: ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ...

More Articles Like This

error: Content is protected !!
Join WhatsApp Group