ಕೊರೋನಾ, ಕೊರೋನಾ…
ಗೆಳೆಯರೊಬ್ಬರು ಹೇಳಿದರು
ಕೊರೋನಾ ಮೇಲೊಂದು ಕವನ
ಬರೆ ಎಂದು
ಏನು ? ಕೊರೋನಾ ನಾ ?
ಇದರ ಮೂಲ ಚೀನಾ ?
ಇದರಿಂದ ತಾನೆ
ಈ ರೋನಾ, ಧೋನಾ ?
ನಮ್ಮದು ಹಾಗಲ್ಲ
ನಾವು ಭಕ್ತರು, ಶಕ್ತರು
ನಂಬಿಕೆಯಿಟ್ಟು ನಡೆದವರು
ಬಾರ್ಡರಿನಲ್ಲಿ ತಂಟೆ ತಕರಾರು ಮೀರಿದವರು
ಇನ್ನೊಬ್ಬರ ಗೊಡವೆ ನಮಗಿಲ್ಲ
ಆದರೂ ನಮ್ಮೊಳಗಿನ
ದ್ರೋಹಿಗಳಿಗೇನೂ ಕಡಿಮೆಯಿಲ್ಲ
ಕೊರೋನಾಕೆ ಇಲ್ಲ ಕರುಣ
ಜನಿಸಿದ್ದು ಮಾತ್ರ ಮಾರಣಹೋಮದ ಕಾರಣ
ಈಗ ಹೊರಬಿತ್ತು ನೋಡಿ
ಈ ಭೂಕಳ್ಳ ಚೀನಾದ ಹೂರಣ.
ವೈರಿ ನಾಶಕೆಂದು ಜನ್ಮ ತಳೆದ
ವೈರಾಣು
ಬೆರಳು ತೋರಿಸಿದವರ ಹಸ್ತ ನುಂಗುವ ಸ್ವಾಹಾಣು, ಮೂಲ ವುಹಾನು
ಎಲೆ ಕೊರೋನಾ
ಯಾಕೆ ನಿನಗಿಷ್ಟು ರೋಷಾವೇಶ
ಸಾಕು ಮಾಡು
ನಿನ್ನಿಂದಾಗಿ ಮಾನವ ಕೂಡ ಧರಿಸಿದ್ದಾನೆ
ಯಮನ ಪಾಶ
ತೆಗೆಯುತ್ತ ಅಮಾಯಕರ ಪ್ರಾಣ
ಸುಲಿಯುತ್ತಿದ್ದಾನೆ ಹಣ, ಧನ
ದರೋಡೆಗೆ ನಿಂತಿದ್ದಾನೆ
ಮರೆತು ಮಾನಧನ, ಅಭಿಮಾನ
ಆದರೂ
ಬಯಲಾಯಿತು ನಿನ್ನಿಂದ
ಹೂರಣ
ಯಾರು ಸಾಚಾ, ಯಾರು ಕಳ್ಳ
ಯಾರು ಸುಳ್ಳ, ಮಳ್ಳ, ಜೊಳ್ಳ ಎಂದು !
ಇದಕೆಲ್ಲ ನೀನೇ ಕಾರಣ
ಇದಕೆಲ್ಲ ನೀನೇ ಕಾರಣ
ಉಮೇಶ ಬೆಳಕೂಡ