ಈ ದೇಶಕ್ಕೆ ಭಾವೈಕ್ಯತೆಯ ವಿಷಯದಲ್ಲಿ ಸೂಫಿ ಸಂತರ ಕೊಡುಗೆ ಅಪಾರ. ಉದಾಹರಣೆ ಎಂಬಂತೆ ನಾಡಿನಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಅನೇಕ ಕಡೆ ಸೂಫಿ ಸಂತರ ಹಾಗೂ ಶರಣರ ಹೆಸರು ಕೇಳಿ ಬರುತ್ತವೆ. ಅವರ ದರ್ಗಾಗಳು ಶರಣರ ದೇವಾಲಯಗಳು ಇಂದಿಗೂ ಸಾಮರಸ್ಯದ ಭಾವೈಕ್ಯತೆಯ ಕೇಂದ್ರಗಳಾಗಿ ಜನಜನಿತವಾಗಿವೆ.
ಹೌದು, ಈ ಮಾತಿಗೊಂದು ದಿವ್ಯ ಸಾಕ್ಷಿ ಗುಲ್ಬರ್ಗಾ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಹೈದ್ರಾ ಗ್ರಾಮದಲ್ಲಿರುವ ಸೂಫಿ ಸಂತ ಹಜರತ ಖ್ವಾಜಾ ಹಾಜಿ ಸೈಫನ ಮುಲ್ಕ ಅವರ ದರ್ಗಾ ಇದೆ. ಇವರ ಗುರುಗಳಾದ ಹುಸಮಾನಿ ಹಾರೋನ್ ಅವರು ಭೋದಿಸಿದ ಆದೇಶದಂತೆ ಕ್ರಿ. ಶ 1100 ರಲ್ಲಿ ಸಿಂದಗಿಗೆ ಆಗಮಿಸಿದ್ದರು ಎಂದು ಹೇಳಲಾಗುತ್ತಿದೆ. ತಮ್ಮದೇ ಆದ ದೈವಿಶಕ್ತಿಯಿಂದ ಹಲವರ ಅನೇಕ ನಾನಾ ಬಗೆಯ ಸಮಸ್ಯೆಗಳನ್ನು ಇಂದಿಗೂ ನಿವಾರಿಸುತ್ತಿದ್ದಾರೆ. ಈ ಮೂಲಕ ಸಾಕ್ಷಾತ ದೈವಿ ಪುರುಷರಾಗಿ ಎಲ್ಲ ಧರ್ಮದ ಜನರಿಂದ ಅಂದಿನಿಂದ ಇಂದಿನವರೆಗೂ ಅಸಂಖ್ಯಾತ ಜನರಿಂದ ಆರಾಧಿಸಲ್ಪಡುತ್ತಿದ್ದಾರೆ.
ಹಜರತ ಖ್ವಾಜಾ ಹಾಜಿ ಸೈಫನ ಮುಲ್ಕ ಇವರು ಕನಸಿನಲ್ಲಿ ಬಂದು ಆದೇಶಿಸಿದಂತೆ ಮತ್ತು ಇವರ ಪ್ರಚಂಡ ಫ್ರಭಾವಕ್ಕೆ ಹಾಗೂ ದೈವಿ ಶಕ್ತಿಗೆ ಒಳಗಾಗಿ ಹಿಂದೂ ಸಂಪ್ರದಾಯಸ್ಥ ಮಹಾದೇವಪ್ಪಾ ಮಿನಾಜಿರಾವ ಗಾಯಕವಾಡ ಹಾಗೂ ಕುಟುಂಬ ವರ್ಗದವರಿಂದ ಸೂಫಿಸಂತ ಹಜರತ ಖ್ವಾಜಾ ಹಾಜಿ ಸೈಫನ ಮುಲ್ಕರ ನೂತನ ದರ್ಗಾವನ್ನು ಜೇವರ್ಗಿ ರೋಡ ಸಿಂದಗಿ ಬಸ್ ಡಿಪೋದ ಎದುರಿಗೆ ಇರುವ ಸ್ವಂತ ಹೊಲದಲ್ಲಿ ನಿರ್ಮಿಸಿ 6 ವರ್ಷಗಳಿಂದ ಜಾತ್ರೆ ಮಾಡುವ ಮೂಲಕ ಹಲವರ ಕಷ್ಟ ಕಾರ್ಪಣ್ಯ ನಿವಾರಣೆಗೆ ಕಾರಣೀಕರ್ತರಾಗಿದ್ದಾರೆ.
ಮಾ. 2ರ ಬುಧವಾರ ಮಹಾದೇವಪ್ಪಾ ಎಂ ಗಾಯಕವಾಡ ಇವರ ಮನೆಯಿಂದ ಮದ್ಯಾಹ್ನ 4 ಗಂಟೆಗೆ ಗಂಧದ ಮೆರವಣಿಗೆಯು ದರ್ಗಾದವರೆಗೆ ವಿವಿಧ ವಾಧ್ಯ ಮೇಳಗಳೊಂದಿಗೆ ಸಾಗುವುದು. ಸಂಜೆ 7:00 ಘಂಟೆಗೆ ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಗಂಧ, ಗಲೀಫನ್ನು ಏರಿಸುವರು.
ಮಾ. 3ರ ಗುರುವಾರ ರಂದು ಬೆಳಿಗ್ಗೆ 10 ಘಂಟೆಗೆ ಪಟ್ಟಣದ ಸಾರಂಗಮಠದ ಗುರುಕುಲ ಬಾಸ್ಕರ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು, ಆಲಮೇಲ ವಿರಕ್ತಮಠದ ಪೂಜ್ಯಶ್ರೀ ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ಸಾನ್ನಿಧ್ಯ ದಲ್ಲಿ ಶಾಸಕ ರಮೇಶ ಭೂಸನೂರ ಸರ್ವಧರ್ಮ ಸಮಾವೇಶವನ್ನು ಉದ್ಘಾಟಿಸಲಿದ್ದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಜ್ಯೋತಿ ಬೆಳಗಿಸುವವರು. ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲಿಕಾರ ಉದ್ಘಾಟಿಸಲಿದ್ದಾರೆ. ಅಶೋಕ ಅಲ್ಲಾಪುರ, ಕಸಾಪ ತಾಲೂಕಾಧ್ಯಕ್ಷ ರಾಜಶೇಖರ ಕೂಚಬಾಳ, ಗುತ್ತಿಗೆದಾರ ಎಂಆರ್‍ಟಿ, ಮಹಾದೇವಪ್ಪ ಗಾಯಕವಾಡ ಅಧ್ಯಕ್ಷತೆಯಲ್ಲಿ ಶಿಕ್ಷಕ ಸಾಹಿತಿ ನಾಲಸಾಬ ಚಪ್ಪರಬಂದ ಅವರ ಕವನ ಸಂಕಲನ ಬಿಡುಗಡೆಗೊಳ್ಳಲಿದೆ. ಅಲ್ಲದೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈದ ಮಹನೀಯರ ಸನ್ಮಾನ ಸಮಾರಂಭ ಜರುಗುವುದು.
ಮಾ.2 ಮತ್ತು 3 ಈ ಎರಡು ದಿವಸ ದಾಸೋಹ ನಡೆಸಲಾಗುತ್ತಿದೆ ಕಾರಣ ಯಾವತ್ತು ಸರ್ವ ಜನಾಂಗದ ಬಂಧುಗಳು ಹಾಗೂ ಸಧ್ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಹಾಜರಾಗಿ ಸೂಫಿಸಂತ ಹಜರತ ಖ್ವಾಜಾ ಹಾಜಿ ಸೈಪನ ಮುಲ್ಕ ಬಾಬಾ ರವರ ಆಶೀರ್ವಾದ ಫಲಗಳನ್ನು ಪಡೆಯಲು ಕೋರಲಾಗಿದೆ.
ವರದಿ: ಪಂಡಿತ್ ಯಂಪೂರೆ, ಸಿಂದಗಿ