ಕವನ: ಆತ್ಮ ವಿಮರ್ಶೆ ಆಗಬೇಕಿದೆ

Must Read

ಆತ್ಮ ವಿಮರ್ಶೆ ಆಗಬೇಕಿದೆ

ಕವನ ಬರೆಯುವ ಭರದಲ್ಲಿ ಬುರುಡೆಯ ಬರಡನ್ನೂ ಭುವನವನವೆಂದು ಬಿಂಬಿಸುತ್ತೇವೆ ಇದು ನಮಗೆ ಸರಿಯೇ.

ಬೂಟಿನ ಬತ್ತಳಿಕೆಯ ಮಿತಿ ಅರಿಯದೆ ಬೂಟಾಟಿಕೆಯಲ್ಲಿ ವರ್ಣಿಸಿ ಬರೆಯುತ್ತೇವೆ ಇದು ನಮಗೆ ಸರಿಯೇ.

ರೂಪಕಗಳ ಬಣ್ಣಿಸುವ ತರಾತುರಿಯಲ್ಲಿ ಅಂತರಂಗ ಅರಿಯದೆ ಬಾಹ್ಯಾಂಶಕ್ಕೆ ಮಣೆ ಹಾಕುವುದು ಇದು ನಮಗೆ ಸರಿಯೇ.

ಹಳ್ಳದ ದಂಡೆಯ ಮೇಲೆ ಕುಳಿತು ನೀರಿನ ಆಳಕ್ಕೆ ಕಲ್ಪನೆಯ ಮೇಳೈಸಿ ಪರಾಮರ್ಶಿಸದೆ ಗೀಚುತ್ತೇವೆ ಇದು ನಮಗೆ ಸರಿಯೇ.

ಶಬ್ಧಗಳನ್ನು ನಿಶ್ಶಸ್ತ್ರ ಮಾಡಿ ರಸಭರಿತ ಲೇಖನದ ಖಡ್ಗವನ್ನು ನಿರುಪಯುಕ್ತನ ಮುಕುಟದಲ್ಲಿಡುತ್ತೇವೆ ಇದು ನಮಗೆ ಸರಿಯೇ.

ಕರ್ಮದ ಫಲವನ್ನು ತಿಳಿಯದೆ ಮರ್ಮದ ತೊಗಲಿನ ಮುಸುಕನ್ನು ಮಸುಕಾದ ಅಕ್ಷರಗಳಿಂದ ಮಸಿಯುತ್ತೇವೆ ಇದು ನಮಗೆ ಸರಿಯೇ.

ದುರ್ದಂಧೆ ಚೋರರ ಅಂಧ ಅಭಿಮಾನಿಗಳಾಗಿ ವರ್ಣಮಾಲೆಯ ಹೂಹಾರ ಮೂಡಿಸುತ ನಮ್ಮ ಬರವಣಿಗೆಗೆ ನಾವೇ ಮಸಿಬಳಿದು ಕೊಳ್ಳೋದು ಇದು ನಮಗೆ ಸರಿಯೇ.


ಅನುಪಮ. ಪಿ
ಶಿಕ್ಷಕಿ, ಸಿಂದಗಿ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group