ಬಸವ ತತ್ವ, ವಚನ ಸಾಹಿತ್ಯ ಕುರಿತು ಉಪನ್ಯಾಸ

Must Read

ಸಿಂದಗಿ: 12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣನವರು ಕಾಯಕ, ದಾಸೋಹ, ಸಮಾನತೆ ನೀಡಿ ಇಂದಿನ ಯುಗಕ್ಕೆ ಸೂಕ್ತವಾದ ದಾರಿ ತೋರಿಸಿ ಅಂದೇ ಮಹಿಳೆಯರಿಗೆ ಸಮಾನತೆಯನ್ನು ಸಾಧಿಸಿ ತೋರಿಸಿದ್ದಾರೆ ಎಂದು ಶೈಲಜಾ ಜಗದೀಶ ಪಟ್ಟಣಶೆಟ್ಟಿ ಹೇಳಿದರು.

ಪಟ್ಟಣದ ಕಲ್ಯಾಣ ನಗರದ ಬಸವಮಂಟಪದಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ ಮತ್ತು ರಾಷ್ಟ್ರೀಯ ಬಸವದಳ ಸಿಂದಗಿ ಇವರ ಸಂಯುಕ್ತ ಆಶ್ರಯದಲ್ಲಿ ಬಸವಧರ್ಮ ಪೀಠದ ಪ್ರಥಮ ಮಹಿಳಾ ಜಗದ್ಗುರು ಲಿಂ.ಡಾ|| ಮಾತೆ ಮಹಾದೇವಿ ಅವರ 76 ನೇ ಜನ್ಮ ದಿನಾಚರಣೆ ಅಂಗವಾಗಿ ಲಿಂ.ಮಲ್ಲೇಶಪ್ಪ ಮರೆಪ್ಪ ಶಹಾಪೂರ ಹಾಗೂ ಲಿಂ.ಸಿದ್ದಮ್ಮ ಮತ್ತು ಲಿಂ.ಸಿದ್ರಾಮಪ್ಪ ಹನಮಶೆಟ್ಟಿ ಸ್ಮರಣಾರ್ಥ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಅವರು ವಚನ ವಿಶ್ಲೇಷಿಸಿ ಲಿಂ. ಮಲ್ಲೇಶಪ್ಪ ಮರೆಪ್ಪ ಶಹಾಪೂರ ಕುರಿತು ಮಾತನಾಡಿದರು.

ಶ್ರೀಮತಿ ಶಕುಂತಲಾ ಎಸ್.ಹಿರೇಮಠ ರವರು ಬಸವತತ್ವ, ವಚನಸಾಹಿತ್ಯ ಲಿಂ.ಸಿದ್ದಮ್ಮ ಮತ್ತು ಲಿಂ.ಸಿದ್ರಾಮಪ್ಪ ಹನಮಶೆಟ್ಟಿ ಕುರಿತು ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನಪ್ಪ ಕತ್ತಿ ಅವರು ಮಾತನಾಡಿ, 12ನೇ ಶತಮಾನದ ಶರಣರು ದಾಸೋಹ ಸೇವೆಯಿಂದ ಅನೇಕ ಮಠ-ಮಂದಿರಗಳನ್ನು ಸ್ಥಾಪಿಸಿ ವಚನಗಳ ಮೂಲಕ ಸಮಾಜ ಸನ್ಮಾರ್ಗದತ್ತ ನಡೆಯುವಂತೆ ಜಾಗೃತಿ ಮೂಡಿಸಿದ್ದಾರೆ ಎಂದರು.

ಲಿಂ.ಮಲ್ಲೇಶಪ್ಪ ಮರೆಪ್ಪ ಶಹಾಪೂರ ಇವರ ಸ್ಮರಣಾರ್ಥ ದತ್ತಿ ದಾಸೋಹಿ ದೀಪಾ ಅರುಣ ಶಹಾಪೂರ ಹಾಗೂ ಲಿಂ.ಸಿದ್ದಮ್ಮ ಮತ್ತು ಲಿಂ.ಸಿದ್ರಾಮಪ್ಪ ಹನಮಶೆಟ್ಟಿ ಸ್ಮರಣಾರ್ಥ ದತ್ತಿ ದಾಹೋಹಿ ಬಸವರಾಜ.ಸಿ ಹನಮಶೆಟ್ಟಿ, ಮುಖ್ಯಗುರು ಎಂ.ಜಿ.ತಳವಾರ ರವರು ಹಾಗೂ ಗುರುಪಾದ ತಾರಾಪೂರ ರವರು ಮಾತೆ ವiಹಾದೇವಿಯವರ ಹಾಗೂ ಲಿಂ.ಪೂಜ್ಯಶ್ರೀ ಜಗದ್ಗುರು ಲಿಂಗಾನಂದ ಶ್ರೀಗಳ. ಲಿಂಗಾಯತ ಹೋರಾಟ, ಕಲ್ಯಾಣಪರ್ವ, ಶರಣಮೇಳ, ಬಸವತತ್ವ ಕುರಿತು, ಬಸವದಳದ ಅಧ್ಯಕ್ಷ ಶಿವಾನಂದ ಕಲಬುರಗಿ ಹಾಗೂ ವಿಜಯಪುರದ ಈರಣ್ಣ ತೊಂಡಿಕಟ್ಟಿ ಅವರು ಅತಿಥಿಗಳಾಗಿ ಮಾತನಾಡಿದರು.

ವಿಜಯಪುರದ ಶಿವಶಂಕರ ಯಾದಗಿರಿ, ಮಹಾದೇವ ಕುರೆ, ಸಂಗಮೇಶ ಹಿಟ್ಟಿ, ಸಿಂದಗಿಯ ವೀರೇಶ ಇವಣಿ, ಜಗದೀಶ ಕಲಬುರಗಿ, ಕಲ್ಲಪ್ಪ ತಾರಾಪೂರ, ಬಸವರಾಜ ಕಲಬುರಗಿ, ಮಹಾಂತೇಶ ತಳ್ಳೊಳ್ಳಿ, ಜಯಶ್ರೀ ಹೂಗಾರ, ಎಂ.ಜಿ.ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

ಶಿವಕುಮಾರ ಶಿವಸಿಂಪಿ ಸ್ವಾಗತಿಸಿದರು, ಶಂಕರ ಕಟ್ಟಿಮನಿ ನಿರೂಪಣೆ ಮಾಡಿದರು, ಸಂಗಣ್ಣ ಬ್ಯಾಕೋಡ ಶರಣು ಸಮರ್ಪಣೆ ಮಾಡಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group