ಭದ್ರಕೋಟೆಗೆ ಲಗ್ಗೆ ಇಡಲು ಬಿಜೆಪಿ ಪಕ್ಷ ಪ್ರಯತ್ನ

Must Read

ಕಲಬುರ್ಗಿ – ಬಿಸಿಲ ನಾಡು ತೊಗರಿ ಕಣಜ ಎಂದು ಕರೆಯಲ್ಪಡುವ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರ ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಜಿದ್ದಾಜಿದ್ದಿ ಕ್ಷೇತ್ರವಾಗುವ ಲಕ್ಷಣಗಳು ಎದ್ದು ಕಾಣುತ್ತಿವೆ.

ಸೋಲಿಲ್ಲದ ಸರದಾರ ಎಂಬಂತಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನೇ ಜಾಧವ ಅವರು ಸೋಲಿಸಿದ್ದು ಬಿಜೆಪಿಯಲ್ಲಿ ಉತ್ಸಾಹ ಮೂಡಿಸಿದೆ ಈ ಸಲ ಹೇಗಾದರೂ ಮಾಡಿ ಪ್ರಿಯಾಂಕ ಖರ್ಗೆಯ ಅವರನ್ನು ಚುನಾವಣೆಯಲ್ಲಿ ಸೋಲಿಸಲು ಬಿಜೆಪಿ ನಾಯಕರ ತಂತ್ರಗಾರಿಕೆ ವರ್ಕೌಟ ಆಗಬಹುದು ಎಂದು ಹೇಳಲಾಗುತ್ತಿದೆ.

ಪ್ರಿಯಾಂಕ ಖರ್ಗೆ ವರ್ಸಸ್ ಮಣಿಕಂಠ ರಾಥೋಡ ಹಾವು ಏಣಿ ಆಟ ಈಗ ಪ್ರಾರಂಭವಾಗಿದ್ದು ಪ್ರಿಯಾಂಕ ಗರ್ಖೆ ತನ್ನ ಕ್ಷೇತ್ರದ ಜನರಿಗೆ ಎಷ್ಟು ಮೋಸ ಮಾಡಿದ್ದಾರೆ ಎಂಬರ್ಥದಲ್ಲಿ ಯುವ ನಾಯಕ ಮಣಿಕಂಠ ರಾಥೋಡ ಜನರ ಮುಂದೆ ಇಡುತ್ತಾ ಇದ್ದಾರೆ ಇದನ್ನೆಲ್ಲ ನೋಡುತ್ತಿದ್ದರೆ ಚಿತ್ತಾಪುರ ಕ್ಷೇತ್ರದ ಜನರು ಇವಾಗ ಮಣಿಕಂಠ ರಾಥೋಡ ಅವರನ್ನು ಆ ದೇವರೆ ನಮ್ಮ ಕ್ಷೇತ್ರಕ್ಕೆ ಕಳಿಸಿರಬೇಕು ಎಂದು ಚಿತ್ತಾಪುರ ಕ್ಷೇತ್ರದ ಜನತೆ ಅಂದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಜನಜನಿತವಾಗುತ್ತಿವೆ.

ಚಿತ್ತಾಪುರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ಹಳ್ಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಮಣಿಕಂಠ ರಾಥೋಡ ಈಗಿನಿಂದಲೇ ಮಾಡುತ್ತ ಇರುವುದನ್ನು ನೋಡಿದರೆ ಎದುರಾಳಿ ಆಗಿದ್ದ ಪ್ರಿಯಾಂಕ ಖರ್ಗೆ ಅವರಿಗೆ ನಡುಕ ಹುಟ್ಟಿಸಿದೆಯೆನ್ನಲಾಗಿದೆ.

ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷೆ ಹೊಂದಿದ್ದ ಮಣಿಕಂಠ ರಾಥೋಡ ಪ್ರಿಯಾಂಕ ಖರ್ಗೆ ಭದ್ರಕೋಟೆಗೆ ಲಗ್ಗೆ ಇಡಲು ಹವಣಿಸುತ್ತಿದ್ದು ಬಿಜೆಪಿ ದೂರದೃಷ್ಟಿಯಿಟ್ಟುಕೊಂಡೇ ಈ ಪ್ಲಾನ್ ಮಾಡಿದೆ ಎನ್ನಲಾಗುತ್ತಿದೆ.

ಮಣಿಕಂಠ ಅವರು ಬಿಜೆಪಿಯ ಯಡಿಯೂರಪ್ಪ ಸೇರಿದಂತೆ ಹಿರಿಯ ನಾಯಕರೊಡನೆ ಉತ್ತಮ ಒಡನಾಟ ಹೊಂದಿದ್ದು ಜನಪ್ರಿಯ ನಾಯಕರೂ ಆಗಿ ಹೊರಹೊಮ್ಮುತ್ತಿದ್ದಾರೆ. ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಖರ್ಗೆಯವರಿಗೆ ಪ್ರಬಲ ಟಕ್ಕರ್ ಕೊಡುವುದರಲ್ಲಿ ರಾಥೋಡ ಪ್ರಯತ್ನಶಿಲರಾಗಿದ್ದು ಕಲಬುರ್ಗಿ ಜಿಲ್ಲೆಯಲ್ಲಿ ಬದಲಾವಣೆಯ ಗಾಳಿ ಮತ್ತೆ ಬೀಸುವುದೋ ಎಂಬುದನ್ನು ಕಾಲವೇ ಹೇಳಬೇಕು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group