- Advertisement -
ಹಣ್ಣುಗಳರಾಜ
ಮರದಲಿ ಜೋತು ಬಿದ್ದಿರುವ ಹಣ್ಣು/
ಹಣ್ಣಿನ ಮೇಲೆ ಎಲ್ಲರ ಕಣ್ಣು/
ಹಸಿರು,ತಿಳಿಗೆಂಪು,ಹಳದಿ
ಬಣ್ಣದ ಹಣ್ಣು/
ಎಷ್ಟು ತಿಂದರೂ ಬೇಕೆನಿಸುವ ರಸಪೂರಿಹಣ್ಣು//1//
ಹಣ್ಣುಗಳ ರಾಜಾ ಮಾವಿನ ಹಣ್ಣು/
ಬೇಸಿಗೆಗೆ ಸಿಗುವುದು ಭರಪೂರ ಹಣ್ಣು/
ಪೇಟೆಯ ತುಂಬ ಘಮಘಮ ಹಣ್ಣು/
ವ್ಯಾಪಾರಿಗೆ ಲಾಭವ ತರುವ ಹಣ್ಣು//2//
ಹಲವು ತಳಿಯ ಮಾವಿನ ಹಣ್ಣು/
ಗೊಜ್ಜು,ಚೆಟ್ನಿ,ಉಪ್ಪಿನಕಾಯಿಗೆ ಹಣ್ಣು/
ಜಾಮ್ ಜೆಲ್ಲಿ ಜ್ಯೂಸಿಗೆ ಹಣ್ಣು/
ಮಾರುಕಟ್ಟೆಯಲಿ ಭರ್ಜರಿ ಬೇಡಿಕೆಯ ಹಣ್ಣು//3//
- Advertisement -
ದೇಶ ವಿದೇಶದಲಿ ಬೇಡಿಕೆ ಹಣ್ಣು/
ಉದ್ಯೋಗ ಮೇಳ ವ್ಯಾಪಾರ ಸೃಷ್ಟಿಸಿದ ಹಣ್ಣು/
ಕಾಡಲಿ ಸಿಗುತ್ತಿತ್ತು ಅಡಿಕೆಮಾವಿನ ಹಣ್ಣು/
ಕಾಡೇಯಿಲ್ಲದ ಮೇಲೆ ಇಲ್ಲ ಹಣ್ಣು//4//
ಅನೇಕ ಹೆಸರು ನಿನಗುಂಟು /
ಸೀಕರಣೆ ಚಿತ್ರಾನ್ನ ಬಲುರುಚಿ ವ್ಯಂಜನವುಂಟು/
ಹಣ್ಣುಗಳ ರಾಜ ನಿನಗೆ ಸಮನಾರುಂಟು/
ಸುವಾಸನೆ ನಿನ್ನಲಿ ಭರಪೂರ ಉಂಟು//5//
ಗಾಯಿತ್ರಮ್ಮ, ಶಿವಮೊಗ್ಗ