ಖಾನಟ್ಟಿಯಲ್ಲಿ ಹೊನಲು ಬೆಳಕಿನ ಪಗಡೆ ಸ್ಪರ್ಧೆ

Must Read

ಮೂಡಲಗಿ: ತಾಲ್ಲೂಕಿನ ಖಾನಟ್ಟಿ ಗ್ರಾಮದಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಐದೇಶಿ ಅಂಗವಾಗಿ ಏ. 11ರಂದು ರಾತ್ರಿ 10ಕ್ಕೆ ಹೊನಲು ಬೆಳಕಿನ ಪಗಡೆ ಸ್ಪರ್ಧೆಯನ್ನು ಏರ್ಪಡಿಸಿರುವರು.

ವಿಜೇತ ತಂಡಗಳಿಗೆ ಪ್ರಥಮ ರೂ. 10,001, ದ್ವಿತೀಯ ರೂ. 7,501, ತೃತೀಯ ರೂ. 5001 ಹಗೂ ಚತುರ್ಥ ರೂ. 3001 ನಗದು ಬಹುಮಾನಗಳೊಂದಿಗೆ ಶೀಲ್ಡ್ ಗಳನ್ನು ಕೊಡುವರು.

ಹೆಸರು ನೊಂದಣಿಗಾಗಿ ಸಂಘಟಕ ಮಲ್ಲಪ್ಪ ಕೌಜಲಗಿ ಮೊ. 9916688501, ಶಿವನಪ್ಪ ಗುದಗನ್ನವರ ಮೊ. 8123762128 ಸಂಪರ್ಕಿಸಲು ತಿಳಿಸಿರುವರು.

ಉದ್ಘಾಟನೆ: ಏ. 11ರಂದು ರಾತ್ರಿ 8 ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಬಸವಾನಂದ ಸ್ವಾಮೀಜಿ ವಹಿಸುವರು. ಬಾಳಯ್ಯ ಮಠದ ಅಧ್ಯಕ್ಷತೆ ವಹಿಸುವರು. ಸದಾಶಿವ ತುಪ್ಪದ ಉದ್ಘಾಟಿಸುವರು, ಮಲ್ಲೇಶ ರಡ್ಡೇರಟ್ಟಿ ಜ್ಯೋತಿ ಬೆಳಗಿಸುವರು. ಮುಖ್ಯ ಅತಿಥಿಗಳಾಗಿ ಸಾಹಿತಿ ಬಾಲಶೇಖರ ಬಂದಿ ಭಾಗವಹಿಸುವರು.

ಪಗಡೆ ಪಟ್ಟಾ ಉದ್ಘಾಟನೆಯನ್ನು ಮಾಯವ್ವ ಲಂಗೋಟಿ ಮಾಡುವರು. ಅತಿಥಿಗಳಾಗಿ ವಂದನಾ ಸೋನಾರ, ಮಹಾದೇವಿ ತುಪ್ಪದ, ಚೇತನ ರಡ್ಢೇರಟ್ಟಿ, ಗೋಪಾಲ ನಿಂಗನೂರ, ನಿಂಬೆವ್ವ ಮೇತ್ರಿ ಭಾಗವಹಿಸುವರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group