ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಆಹ್ವಾನ

Must Read

ಮುನವಳ್ಳಿ : ಸಮೀಪದ ಉಗರಗೋಳ ಗ್ರಾಮದ ಶ್ರೀ ಗುರು ಶಿವಪ್ಪಯ್ಯ ಶಿವಯೋಗಿಗಳ ಮಠದಲ್ಲಿರುವ ಶ್ರೀಮದ್ ವೀರಶೈವ ಸಂಸ್ಕೃತ ವೇದ ಪಾಠಶಾಲೆ ಹಾಗೂ ಉಚಿತ ವಿದ್ಯಾರ್ಥಿ ನಿಲಯಕ್ಕೆ ೨೦೨೨-೨೩ನೇ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿರುವ ಸುಸಂಸ್ಕೃತ ಬಡ ಜಂಗಮ (ವೀರಮಹೇಶ್ವರ) ಕುಟುಂಬಗಳಿಗೆ ಸೇರಿದ ಮತ್ತು ಪ್ರಾಥಮಿಕ ೬ನೇ ತರಗತಿಯಿಂದ ಮುಂದಿನ ತರಗತಿಗಳ ಶಿಕ್ಷಣದ ವ್ಯಾಸಂಗ ಬಯಸುವ ವಿದ್ಯಾರ್ಥಿಗಳು ಪ್ರವೇಶ ಬಯಸಿ ಅರ್ಜಿ ಸಲ್ಲಿಸಬಹುದಾಗಿದೆ.

ಶ್ರೀಮಠದಲ್ಲಿ ಸುಸಜ್ಜಿತ ವಿದ್ಯಾರ್ಥಿನಿಲಯವಿದ್ದು, ಉಚಿತ ವಸತಿ ಹಾಗೂ ಪ್ರಸಾದ (ಊಟ)ದ ವ್ಯವಸ್ಥೆಯಿದೆ. ವೀರಶೈವ ಸಂಸ್ಕೃತ ವೇದಪಾಠಶಾಲೆ ಮೂಲಕ ಧಾರ್ಮಿಕ, ವೈದಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ನೀಡಲಾಗುವುದು. ಜೊತೆಗೆ ಶಾಲಾ ಶಿಕ್ಷಣಕ್ಕೂ ಅವಕಾಶವಿದೆ.

ವಿದ್ಯಾರ್ಥಿಗಳಿಗೆ ಜ್ಯೋತಿಷ್ಯಶಾಸ್ತ್ರ, ಯೋಗಶಿಕ್ಷಣ, ಆಧ್ಯಾತ್ಮಿಕ ಚಿಂತನೆಯ ವಿಶೇಷ ಕಲಿಕಾ ವರ್ಗಗಳನ್ನೂ ಸಹ ನಡೆಸಲಾಗುವುದು.

ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ವಿವರಗಳೊಂದಿಗೆ ಅಂಚೆ ವಿಳಾಸ, ಮೊಬೈಲ್ ಸಂಖ್ಯೆ ಸೇರಿ ಪೂರ್ಣ ಮಾಹಿತಿಯೊಂದಿಗೆ ದಿ.೦೮-೦೫-೨೦೨೨ ರವಿವಾರ ಮುಂಜಾನೆ ೧೧ ಗಂಟೆಗೆ ಉಗರಗೋಳ ಗ್ರಾಮದ ಮಠದಲ್ಲಿ ಜರುಗುವ ಪ್ರವೇಶ ಪರೀಕ್ಷೆಗೆ ಪಾಲಕರು ಅಥವಾ ಪೋಷಕರ ಸಮೇತ ಹಾಜರಾಗಬೇಕು.  ಹೆಚ್ಚಿನ ಮಾಹಿತಿಗೆ  ೯೬೬೩೫೧೧೦೨೨, ೯೮೪೫೪೮೦೬೭೫, ೮೦೭೩೩೭೮೨೯೨, ೯೯೪೫೮೦೧೪೨೨ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪಾಠಶಾಲೆಯ ಆಡಳಿತ ಮಂಡಳಿ ಸಿ.ಇ.ಓ. ಹಾಗೂ ನಿವೃತ್ತ ಕೆ.ಎ.ಎಸ್. ಅಧಿಕಾರಿ ಎಂ.ಆರ್.ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಓಂ ಸಂತಾಗೆ ಸಕಲ ಕಲಾ ವಲ್ಲಭ ಪ್ರಶಸ್ತಿ ಪ್ರದಾನ

ಮೂಡಲಗಿ : ಇತ್ತೀಚೆಗೆ ರಬಕವಿ-ಬನಹಟ್ಟಿ ತಾಲೂಕಿನ ಸೈದಾಪುರ ಗ್ರಾಮದ ಮಾಧವಾನಂದ ಆಶ್ರಮದಲ್ಲಿ ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟ, ಮಹಾಕವಿ ರನ್ನ ಫೌಂಡೇಶನ್...

More Articles Like This

error: Content is protected !!
Join WhatsApp Group