- Advertisement -
ಹುಡುಕುತಿರುವೆ ಇಲ್ಲದ ಅಪ್ಪನನು
ತಾಯಿಯ ಪ್ರೀತಿ,ಮಮತೆಯಲ್ಲಿ
ಅಣ್ಣನ ತ್ಯಾಗ,ಜವಾಬ್ದಾರಿಗಳಲ್ಲಿ
ಸಂಬಂಧಿಕರ ವಿಶ್ವಾಸ,ನಂಬಿಕೆಗಳಲ್ಲಿ
ಹುಡುಕುತಿರುವೆ ಇಲ್ಲದ ಅಪ್ಪನನು
ಹಿರಿಯರ ಬುದ್ದಿ ಮಾತುಗಳಲ್ಲಿ
ಮಡದಿಯ ಪೆದ್ದು ಪ್ರೇಮದಲಿ
ಮಗುವಿನ ಮುದ್ದು ಮುಖದಲ್ಲಿ
ಹುಡುಕುತಿರುವೆ ಇಲ್ಲದ ಅಪ್ಪನನು
ಗೊಡೆಯ ಗುಡಿ ಗುಂಡಾರದಲಿ
ಜನದಟ್ಟನೆಯ ಸಂತೆ ಬಜಾರಗಳಲಿ
ಜಗದ ಊರು ಕೇರಿಗಳಲಿ
ಹುಡುಕುತಿರುವೆ ಇಲ್ಲದ ಅಪ್ಪನನು
- Advertisement -
ಮೈ ಮನಗಳ ಮರೆಯಲ್ಲಿ
ರಕ್ತದ ಪ್ರತಿ ಅಣು-ಅಣುವಿನಲಿ
ಹೇಳಿಕೊಟ್ಟ ವಿಚಾರಧಾರೆಯಲಿ
ಎಂದಿಗೂ ಜೊತೆಗೆ ಇರುವಾಗ
ಎಲ್ಲೋ ಹುಡುಕಿದೆ ಇಲ್ಲದ ದೇವರನು
ಮಂಜುನಾಥ ಸಿಂಗನ್ನವರ
ಪ್ರಥಮ ದರ್ಜೆ ಸಹಾಯಕ ಯರಗಟ್ಟಿ, ಆರೋಗ್ಯ ಇಲಾಖೆ
ಸಾ|| ತೆಗ್ಗಿಹಾಳ
ತಾ||ಸವದತ್ತಿ
Thanks for post sir