ಕವನ: ಪಂಚಮಿ

Must Read

ಪಂಚಮಿ

ಪಂಚಮಿ ಹಬ್ಬ ಬಂದೇ ಬಿಟ್ಟಿತು
ಹೆಂಗಳೆಯರಿಗೆ ಸಂತಸ ತಂದಿತು|
ತವರಿನ ಅಣ್ಣನ ಕರೆಯು ಬಂದಿತು
ಮುತೈದೆಯರಾ ಮುಖವು ಅರಳಿತು ೧

ಸಡಗರದಿಂದ ಮಡಿಯನು ಉಟ್ಟು
ಮಣ್ಣಿನ ನಾಗಗೆ ತನಿಯನು ಎರೆಯಲು
ನೈವೇದ್ಯಕ್ಕೆ ಎಳ್ಳುಂಡೆ ತಂಬಿಟ್ಟಿಡಲು
ಸಂತಸದಿಂದ ಕುಣಿಯುತಲಿಹರು ೨

ಸೋದರರೆಲ್ಲರ ಒಳಿತಿಗೆ ಪ್ರಾರ್ಥನೆ
ಪತಿಯಾಯುಷ್ಯಕೆ ಭಜನೆ ವಂದನೆ
ಹೆಣ್ಮಕ್ಕಳ ಈ ಹಬ್ಬವೇ ಪಂಚಮಿ
ಸಂಭ್ರಮಿಸುವಳು ಮನೆಯಲಿ ಗೌತಮಿ ೩

ಜೋಕಾಲಿಯನು ಕಟ್ಟಿಹರಲ್ಲ
ಶರತ್ತಿನೊಂದಿಗೆ ಹತ್ತುವರಲ್ಲ
ಆಡಲು ವಯಸಿನ ಮಿತಿಯೇ ಇಲ್ಲ
ಹಾಡುತ ಆಡುತ ಜೀಕುವರಲ್ಲ ೪

ಕಾಲದೊಂದಿಗೆ ಬದಲಾವಣೆಯು
ಉತ್ಸಾಹ ಮೋಜುಗಳ ಕಟಾವಣೆಯು
ಫೇಸ್ಬುಕ್ ವಾಟ್ಸಪ್ ಟ್ವಿಟರ್ ಇನ್ಸ್ಟಾಗ್ರಾಮ್
ಇದರಲ್ಲೇ ಹಬ್ಬಗಳ ಸಡಗರ ಕಾಣುತಿಹೆವು ೫


ಶ್ರೀಮತಿ ಜ್ಯೋತಿ ಕೋಟಗಿ,
ಬಿ ಆರ್ ಪಿ ಕಿತ್ತೂರು

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group