ಪತ್ರಿ ಮಠದಲ್ಲಿ ನಾಗನಿಗೆ ಅಭಿಷೇಕ

Must Read

ಮೂಡಲಗಿ: ತಾಲೂಕಿನ ಯಾದವಾಡ ಗ್ರಾಮದ ಶ್ರೀ ಪತ್ರಿ ಮಠದಲ್ಲಿ  ನಾಗರಪಂಚಮಿ ನಿಮಿತ್ತವಾಗಿ ಸರ್ಪದೋಷ ನಿವಾರಣಾ ಕಂಕಣ ಕಟ್ಟುವ ಕಾರ್ಯಕ್ರಮ ನಡೆಯಿತು.

ಪತ್ರಿ ಮಠದ ಶ್ರೀ ಶಿವಾನಂದ ಮಹಾರಾಜರು  ಪ್ರತಿವರ್ಷದಂತೆ ಈ ವರ್ಷವೂ ಕೂಡ ನಾಗದೇವರಿಗೆ ಹಾಲುತುಪ್ಪ ಎರೆದು ಪೂಜೆ ಸಲ್ಲಿಸಿ  ಭಕ್ತರಿಗೆ ಸರ್ಪದೋಷ ನಿವಾರಣೆ ಕಂಕಣ ಕಟ್ಟಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕಲ್ಮೇಶ್ ಗಾಣಿಗಿ,  ಕಲ್ಲಪ್ಪ ಮಾಲಮನಿ ಬಸಯ್ಯ ಗಂಟಿ, ಪ್ರಕಾಶ್ ತೋಟಗಿ,ತುಳಜಪ್ಪ ಜಾಧವ್, ಪಕೀರಪ್ಪ ದುಮ್ಮಳ್ಳಿ, ಸೈದುಸಾಬ ಚಿಪ್ಪಲಕಟ್ಟಿ, ಬಸಪ್ಪ ವಜ್ಜರಮಟ್ಟಿ,ರಫೀಕ್ ಶೇಕ್ ಮತ್ತು ಅನೇಕ ಭಕ್ತಾದಿಗಳು  ಕಾರ್ಯಕ್ರಮದಲ್ಲಿ ಭಾಗವಹಿಸಿ ಪೂಜಾರಿಗಳಿಂದ ಕಂಕಣ ಕಟ್ಟಿಸಿಕೊಂಡು ಆಶೀರ್ವಾದ ಪಡೆದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group