ಕವನ: ಶಿಕ್ಷಕರ ದಿನಾಚರಣೆ

Must Read

ಗುರುವೀಗ ಸುಗಮಕಾರ,
ಮರೆಯದಿರಿ ಎಂದಿಗೂ ಗುರುವಿನಿಂದಲೇ ಸಾಕ್ಷಾತ್ಕಾರ
ಗುರು ಎಂಬ ಎರಡಕ್ಷರದ ಜಾದೂಗಾರ
ಎಲ್ಲರ ಭವಿಷ್ಯಕ್ಕೆ ರೂಪು ಕೊಡುವ ಕಲಾಕಾರ||

ಶತಮಾನ ಯಾವುದಾದರೇನು?
ತಂತ್ರಜ್ಞಾನ ಎಷ್ಟು ಮುಂದುವರೆದರೇನು?
ಗುರು ಸ್ಥಾನದ ಬೆಲೆ ಕಟ್ಟಲಾದೀತೇ?
ಗುರು ಪಾವಿತ್ರ್ಯ ಸುಳ್ಳಾದೀತೆ?

ಇದು ಒಂದು ದಿನದ ಆಚರಣೆಯಲ್ಲ
ನಮ್ಮ ಪ್ರತಿದಿನದ,ಪ್ರತಿಕ್ಷಣದ  ಅನುಕರಣೆ
ಪ್ರತೀ ಹೃದಯದ ಬಡಿತದ ಮಿಡಿತ
ಓ!ಗುರುವೇ ನೀನಿರದ ಬಾಳು ಅನಿಶ್ಚಿತ||

ತಂದೆ- ತಾಯಿ ,ಬಂಧು-ಬಳಗದ ಪರಿಛಾಯೆ ನೀನು
ಎಲ್ಲ ಸಂಬಂಧಗಳಿಗೂ ಮೀರಿದ  ಬಂಧನವು ನೀನು
ನಿನ್ನ ನೆನೆಯುವ  ಪ್ರತೀ ಗಳಿಗೆಯೂ ಪಾವನ
ನಿನ್ನ ಸನ್ನಿಧಾನವೇ ಸುಕ್ಷೇತ್ರದ ಪುಣ್ಯ ತಾಣ||

ಗುರುನಮನ ಸಲ್ಲಿಸುವ  ಸದವಕಾಶವಿಂದು
ದೊರಕಿಸಿದ ಮಹಾಮಹಿಮನ ಜನುಮದಿನವಿಂದು
ಬನ್ನಿ ನಾವೆಲ್ಲ ಸ್ಮರಿಸೋಣ ಆ ಮಹಾತ್ಮನ
ಗುರುಸ್ಥಾನಕೆ  ಬೆಲೆ ತಂದುಕೊಟ್ಟ ರಾಧಾಕೃಷ್ಣನ್ ನ||


ಶ್ರೀಮತಿ.ಗುರುದೇವಿ.ಮಲಕಣ್ಣವರ.
ಸಿ ಆರ್ ಪಿ.ತಲ್ಲೂರ.

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group