3.5 ಕೆಜಿ ತೂಕದ ಗರ್ಭಕೋಶಕ್ಕೆ ಸಂಬಂಧಿಸಿದ ಗಡ್ಡೆ ಹೊರ ತೆಗೆದ ವೈದ್ಯರು

Must Read

ಸತತ ಮೂರುವರೆ ಗಂಟೆ ನಡೆದ ಶಸ್ತ್ರ ಚಿಕಿತ್ಸೆ

ಸಿಂದಗಿ: ನಗರದ​ ಮನಗೂಳಿ ಆಸ್ಪತ್ರೆಯಲ್ಲಿ ವೈದ್ಯರಾದ ಡಾ.ಸಂಧ್ಯಾ ಮನಗೂಳಿ, ಡಾ.ಶಾಂತವೀರ ಮನಗೂಳಿ, ಡಾ.ರಮಾಕಾಂತ ತಂಡದ ನೇತೃತ್ವದಲ್ಲಿ ವೈದ್ಯರು ಸತತ 3 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಮಹಿಳೆ ಗರ್ಭಕೋಶಕ್ಕೆ ಸಂಬಂಧಿಸಿದ 3.5 ಕೆಜಿ ತೂಕದ ಗಡ್ಡೆಯೊಂದನ್ನು ಹೊರತೆಗೆದು ಯಶಸ್ವಿಯಾಗಿದ್ದಾರೆ.

ಇಂಡಿ ತಾಲೂಕಿನ ಯಾಸ್ಮಿನ್ ಭಾಗವಾನ್ ಎಂಬ ಮಹಿಳೆಯು ಬಹು ದಿನಗಳಿಂದ ಹೊಟ್ಟೆ ನೋವು ಹಾಗೂ ಊಟ ಸಮಸ್ಯೆಯಿಂದ ಬಳಲುತ್ತಿದ್ದರು. ಹಲವಾರು ವ್ಯೆದ್ಯ ಸಲಹೆ ಪಡೆದು ಚಿಕಿತ್ಸೆ ಪಡೆದು ಕೊಂಡರು ಸಹ ಯಾವುದೇ ಪ್ರಯೋಜನ ಕಾಣದೆ ಇಲ್ಲಿನ ಮನಗೂಳಿ ಆಸ್ಪತ್ರೆಗೆ ದಾಖಲಾಗಿ ತಮ್ಮ ನೋವನ್ನು ತೋಡಿಕೊಂಡಿದ್ದರು ಅದನ್ನು ಅಳಿಸಿದ ವ್ಯೆದ್ಯ ಶಾಂತವೀರ ಮನಗೂಳಿಯವರು ತಮ್ಮ ವ್ಯೆದ್ಯರು ಚರ್ಚೆ ನಡೆಸಿ ಶಸ್ತ್ರ ಚಿಕಿತ್ಸೆ ನಡೆಸಿ ಆ ಮಹಿಳೆಯ ಉದರದಲ್ಲಿರುವ 3.5 ಕೆಜಿ ತೂಕದ ಗಡ್ಡೆಯನ್ನು  ಹೊರತೆಗೆಯವಲ್ಲಿ ಯಶಸ್ಸು ಕಂಡಿದ್ದಾರೆ.

ರಿವಳಿಕೆ ತಜ್ಞರಾದ ಡಾ. ರವಿ ಗುಣಕಿ, ಸಹಾಯಕ ಪಿರಾ ಮಗರಬಿ ಬಸವರಾಜ್ ಸೇರಿದಂತೆ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿತು. ಈಗ ರೋಗಿ ಆರೋಗ್ಯವಾಗಿದ್ದಾರೆ ಎಂದು ವೈದ್ಯರ ತಂಡ ತಿಳಿಸಿದೆ. ಮನಗೂಳಿ ಆಸ್ಪತ್ರೆಯ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಗರ್ಭಕೋಶದಲ್ಲಿರುವ 3.5 ಕೆಜಿ ಗಡ್ಡೆ ಹೊರತೆಗೆದ ವೈದ್ಯರು ಕಳೆದ ಕೆಲ ದಿನಗಳಿಂದ ಹೊಟ್ಟೆ ನೋವು ಹಾಗೂ ಊಟದ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯಲ್ಲಿ ಇಷ್ಟೊಂದು ದೊಡ್ಡ ಗಾತ್ರದ ಗಡ್ಡೆ ಇತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಆಕೆಯ ಹೊಟ್ಟೆಯಲ್ಲಿ ದೊಡ್ಡ ಗಾತ್ರದ ಗಡ್ಡೆ ಇದ್ದ ಕಾರಣ ಹೊಟ್ಟೆ ಉದಿಕೊಂಡು, ಅಪಾರ ಪ್ರಮಾಣದ ತೊಂದರೆ ಅನುಭವಿಸಿದ್ದಾಳೆ. ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಂಡಾಗ ಆಕೆಯ ಹೊಟ್ಟೆಯಲ್ಲಿ ಗಡ್ಡೆ ಇರುವುದು ಕಂಡು ಬಂದಿದೆ. ಈ ವೇಳೆ ಆಕೆಗೆ ಶಸ್ತ್ರಚಿಕಿತ್ಸೆ ನಡೆಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದು, ಅದರಂತೆ ಯಶಸ್ವಿಯಾಗಿ ಮಹಿಳೆಯ ಹೊಟ್ಟೆಯಿಂದ ಗಡ್ಡೆ ಹೊರತೆಗೆದಿದ್ದಾರೆ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group