ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಅಭಿಯಾನ

Must Read

ಬೆಂಗಳೂರು – ಬಸವನಗುಡಿ ಬ್ರಾಹ್ಮಣ ಮಹಾಸಭಾದ ವತಿಯಿಂದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಬಸವನಗುಡಿ ವಿಪ್ರ ರತ್ನ ಪ್ರಶಸ್ತಿ, ಪದಾಧಿಕಾರಿಗಳಿಗೆ ಸನ್ಮಾನ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಮಹಾಸಭಾದ ಅಧ್ಯಕ್ಷ ರಾದ ಅಶೋಕ್ ಹಾರನಹಳ್ಳಿ  ಅವರು ಉದ್ಘಾಟಿಸಿ ಮಾತನಾಡಿ ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ಸಾಧನೆ ಮಾಡಲು ಉತ್ತೇಜನ ನೀಡಿದಂತಾಗುತ್ತೆ, ಹೆಚ್ಚು ಜನ ಮಹಾಸಭಾದ ಜೂತೆ ಕೈಜೋಡಿಸಿದರೆ ಸಂಘಟನೆಯನ್ನು ಬಲಿಷ್ಠಗೂಳಿಸಬಹುದು ಎಂದು ಹೇಳಿದರು.

ನಗರದ ಎನ್.ಆರ್. ಕಾಲೋನಿ ಡಾ.ಸಿ.ಅಶ್ವತ್ ಕಲಾಭವನದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಶಾಸಕರಾದ ಎಲ್.ಎ. ರವಿ ಸುಬ್ರಮಣ್ಯ ಹಾಗೂ  ಉದಯ್ ಗರುಡಾಚಾರ್ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಉನ್ನತ ಸಾಧನೆ ಮಾಡಲು ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗಲಿದೆ, ಪ್ರಶಸ್ತಿ ಪಡೆದವರು ಸಮಾಜದಲ್ಲಿ ಸಾಧನೆ ಮಾಡಿ ಮಾದರಿ ವ್ಯಕ್ತಿಗಳಾಗಿದ್ದಾರೆ ಎಂದು ತಿಳಿಸಿ ಬ್ರಾಹ್ಮಣ ಸಭಾದ ಕಾರ್ಯಕ್ರಮಗಳಿಗೆ ಸಂಪೂರ್ಣವಾಗಿ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಗರುಡಾ ಫೌಂಡೇಷನ್ ನ ಅಧ್ಯಕ್ಷರಾದ ಶ್ರೀಮತಿ ಮೇದಿನಿ ಗರುಡಾಚಾರ್ ಮಹಿಳಾ ವಿಭಾಗದ ಸಂಚಾಲಕಿ ಡಾ||ಶುಭಮಂಗಳ ಸುನಿಲ್, ಮಾಜಿ ಮಹಾಪೌರ ರಾದ ಕಟ್ಟೆ ಸತ್ಯನಾರಾಯಣ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜ್ಯೋತಿ ಶಿಕ್ಷಣ ಸಂಸ್ಥೆ ಯ ಎಂ. ನರಸಿಂಹನ್, ಮಾಧ್ಯಮ ಸಮಾಲೋಚಕ ಡಾ ಗುರುರಾಜ ಪೋಶೆಟ್ಟಿಹಳ್ಳಿ ಹಾಗೂ ವೈದ್ಯಕೀಯದಲ್ಲಿ ಪ್ರಥಮ ರ್ಯಾಂಕ್ ವಿಜೇತೆ ಡಾ ಸಂಜನ ಕುಮಾರ್ ಅವರಿಗೆ ‘ಬಸವನಗುಡಿ ವಿಪ್ರರತ್ನ’ ಪ್ರಶಸ್ತಿಯನ್ನು ಹಾಗೂ  ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮಹಾಸಭಾದ ಉಪಾಧ್ಯಕ್ಷರಾದ ಡಿ.ವಿ. ರಾಜೇಂದ್ರ ಪ್ರಸಾದ್, ಹೆಚ್. ಆರ್. ಸುರೇಶ್, ಸಹ ಕಾರ್ಯದರ್ಶಿಗಳಾದ ಹೆಚ್.ಸಿ. ಪುರುಷೋತ್ತಮ್,  ಟಿ.ಎಲ್.ಎಸ್.ಕುಮಾರ್, ಆರ್. ರವಿಕುಮಾರ್ ಹಾಗೂ ವೇ ಬ್ರ ಶ್ರೀ ನಾರಾಯಣ ಮೂರ್ತಿ ಅವರನ್ನು ಸನ್ಮಾನಿಸಲಾಯಿತು, ಕಾರ್ಯಕ್ರಮದಲ್ಲಿ NCB ಅಧ್ಯಕ್ಷರಾದ ಹೆಚ್.ಸಿ.ಕೃಷ್ಣ, ಮಹಾಸಭಾದ ಹಿರಿಯರಾದ ಹೆಚ್.ಎನ್. ಹಿರಿಯಣ್ಣ  ಡಿ.ಎಸ್. ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಮೂರ್ತಿ, ಉಪಾಧ್ಯಕ್ಷ ರಾದ ಸಿ.ಕೆ. ರಾಮಮೂರ್ತಿ, ಸಹ ಕಾರ್ಯದರ್ಶಿ ಮುರಳೀಧರ್,ಬೆಂಗಳೂರು ಉತ್ತರ ವಲಯ ಸಂಚಾಲಕರಾದ ಎಲ್. ಜಯಸಿಂಹ, ಕಾರ್ಯಕಾರಿಣಿ ಸದಸ್ಯರಾದ ಎಂ.ಆರ್. ಶಿವಶಂಕರ್,  ಪಿ.ಆರ್.ಪ್ರಕಾಶ್,  ತಾರಾನಾಥ, ಕೆ.ಎನ್.ಸತ್ಯಮೂರ್ತಿ,  ನರಸಿಂಹ ಮೂರ್ತಿ, ಹೆಚ್.ಕೆ. ಶ್ರೀ ನಿವಾಸ್,  ಅನಂತರಾಮು, ಸತ್ಯೇಂದ್ರ ಹಾಗೂ ಇತರೆ ಬ್ರಾಹ್ಮಣ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷ ರಾದ ಎಸ್.ಆರ್.ಕೃಷ್ಣಮೂರ್ತಿ ವಹಿಸಿದ್ದರು ಪ್ರಧಾನ ಕಾರ್ಯದರ್ಶಿ ರಥಯಾತ್ರೆ ಸುರೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group